ಸೋರುತಿಹುದು ಸರ್ಕಾರಿ ಕಟ್ಟಡ!

Team Udayavani, Sep 26, 2019, 7:58 PM IST

ಚೇತನ್‌
ಚಿಕ್ಕನಾಯಕನಹಳ್ಳಿ:
ಕಳೆದ ಮೂರು ದಿನ ಗಳಿಂದ ಸುರಿಯುತ್ತಿರುವ ಉತ್ತರೆ ಮಳೆಗೆ ಸರ್ಕಾರಿ ಕಟ್ಟಡಗಳ ಪರಿಸ್ಥಿತಿ ಯಾವ ರೀತಿ ಹದಗೆಟ್ಟಿದೆ ಎಂಬುದು ಬಟಾಬಯಲಾಗಿದೆ.

ಹೌದು… ಪಟ್ಟಣದ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು, ವಿಲೇಜ್‌ ಅಕೌಂಟೆಂಟ್‌ ಕಚೇರಿ ಹಾಗೂ ತಾಲೂಕು ಕಚೇರಿ ಉತ್ತರೆ ಮಳೆ ರಭಸಕ್ಕೆ ಸೋರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಂಕಷ್ಟ ಪಡುವಂತಾಗಿದೆ.

ತಾಲೂಕು ಕಚೇರಿಯಲ್ಲಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಆಹಾರ ಶಾಖೆ ಕಚೇರಿಗಳ ಛಾವಣಿ ಸಿಮೆಂಟ್‌ ಚೂರುಗಳು ಬೀಳುತ್ತಿವೆ. ಹಲವು ದಾಖಲೆಗಳನ್ನು ರಕ್ಷಿಸಿಡುವುದೇ ಸವಾಲಾ ಗಿದೆ. ಸಿಬ್ಬಂದಿ ಛಾವಣಿ ಬೀಳುವ ಆತಂಕದಲ್ಲಿ ದಿನದೂಡುತ್ತಿದ್ದಾರೆ.

ಬೀಳುವ ಹಂತ ತಲುಪಿದೆ: ಸಾವಿರಾರು ರೈತರ ಕೃಷಿ ಭೂಮಿಗಳ ದಾಖಲೆ ಹೊಂದಿರುವ ಭೂದಾಖಲೆಗಳ ಕಚೇರಿಯಂತೂ ಬೀಳುವ ಹಂತ ತಲುಪಿದ್ದು, ಕೈ ಬರಹಗಳ ಪಹಣಿಗಳು, ಭೂಮಿ ವಿಸ್ತೀರ್ಣಗಳು, ತಿದ್ದುಪಡಿ ದಾಖಲೆ ಗಳು ಸೇರಿ ಕಂದಾಯ ಇಲಾಖೆಗೆ ಒದಗಿಸುವ ಹತ್ತಾರು ದಾಖಲೆ ನಾಶವಾಗುವ ಭೀತಿ ಎದುರಾಗಿದೆ. ಪೊಲೀಸ್‌ ಠಾಣೆ ಪಕ್ಕದಲ್ಲಿರುವ ಹಳೇ ಕೋರ್ಟ್‌ ಕಟ್ಟಡದಲ್ಲಿನ ಕಸಬಾ, ಹಂದಿನಕೆರೆ, ಕಂದಿಕೆರೆ ಸೇರಿ ಗ್ರಾಮ ಲೆಕ್ಕಿಗರ ಕಚೇರಿಗಳೂ ಸೋರುತ್ತಿದ್ದು, ರೈತರ ಖಾತೆ ವರ್ಗವಣೆ ದಾಖಲೆ, ಸರ್ಕಾರ ಯೋಜನೆಗಳ ಫ‌ಲಾನು ಭವಿಗಳ ದಾಖಲೆಗಳು ನಷ್ಟವಾಗುವ ಸಂಭವ ವಿದೆ.

ಕೆಲ ಕಚೇರಿಗಳ ಗೋಡೆಗಳು ಬೀಳುವ ಹಂತ ತಲುಪಿದೆ. 1972ರಲ್ಲಿ ಪ್ರಾರಂಭವಾಗಿರುವ ಪಟ್ಟಣದ
ಸರ್ಕಾರಿ ಸ್ವಾತಂತ್ರ ಪದವಿ ಪೂರ್ವ ಕಾಲೇಜಿನ ಬಹುತೇಕ ಕೊಠಡಿಗಳು ಸೋರುತ್ತಿದ್ದು, ಗೋಡೆಗಳು ಹಾಗೂ ಛಾವಣಿ ಸಂಪೂರ್ಣ ಶಿಥಲಗೊಂಡಿವೆ. ಸೋಮವಾರ ಹಾಗೂ ಮಂಗಳವಾರ ಬಂದ ಬಾರೀ ಮಳೆಗೆ ಕಾಲೇಜಿನ ಆವರಣ ಕೆರೆಯಂತಾಗಿತ್ತು.

ಕೊಠಡಿಗಳು ಸೋರುತ್ತಿರುವುದರಿಂದ ವಿದ್ಯಾರ್ಥಿಗಳು ಪಾಠ ಕೇಳದ ಸ್ಥಿತಿ ನಿರ್ಮಾಣ ವಾಗಿದೆ. ತಾಲೂಕಿನ ಮತಿಘಟ್ಟ ಕ್ಲಸ್ಟರ್‌ನ ಕೆಲ ಶಾಲೆಗಳೂ ಇದಕ್ಕೆ ಹೊರತಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ತಾಲೂಕು ಕಚೇರಿ, ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ದುರಸ್ತಿಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಮನ ಕೊಡಬೇಕಿದೆ.


ಈ ವಿಭಾಗದಿಂದ ಇನ್ನಷ್ಟು

  • „ನಾಗರಾಜ ತೇಲ್ಕರ್‌ ದೇವದುರ್ಗ: ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ 250 ಮನೆಗಳಿಗೆ ಮರಳಿನ ಕೊರತೆ, ಜಾಗದ ಸಮಸ್ಯೆ, ಗುತ್ತಿಗೆದಾರರಿಗೆ...

  • ನರೇಗಲ್ಲ: ನರೇಗಲ್ಲ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಕಳೆದ ಆರು ವರ್ಷದಿಂದ ಹುದ್ದೆ ಖಾಲಿ ಇದ್ದು, ಲೈನ್‌ ಮ್ಯಾನ್‌ಗಳೇ ಅಧಿಕಾರಿಗಳ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ...

  • ಮಂಗಳೂರು; ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸೋಮವಾರದಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮಂಗಳೂರಿನ...

  • ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು...

  • ಚಿಕ್ಕೋಡಿ: ರಾಜ್ಯದ ಅಂಗನವಾಡಿ ಕಟ್ಟಡಗಳಿಗೆ ಪುನನಿರ್ಮಾಣ ಹಾಗೂ ನವೀಕರಣದ ಅವಶ್ಯಕವಿದ್ದು, ಕೂಡಲೇ ಕೇಂದ್ರ ಸಚಿವರು ಗಮನ ಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು...

ಹೊಸ ಸೇರ್ಪಡೆ