ಮತ ಹಾಕದ 200ಕ್ಕೂ ಹೆಚ್ಚು ಪ್ರವಾಸಿಗರ ಪತ್ತೆ ಹಚ್ಚಿ ಸನ್ಮಾನ

ಮತದಾನ ಮಾಡದವರಿಗೆ ಮಂಗಳಾರತಿ

Team Udayavani, Apr 19, 2019, 11:17 AM IST

ಮತದಾನ ಮಾಡದೆ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರನ್ನು ಜಿಲ್ಲಾ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

ಚಿಕ್ಕಮಗಳೂರು: ಮತ ಚಲಾಯಿಸದೆ ಮೋಜು ಮಸ್ತಿಗಾಗಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಹಾರ ಹಾಕಿ, ಶಹಬ್ಟಾಸ್‌ ಗಿರಿ ನೀಡಿ ಸನ್ಮಾನಿಸುವ ಮೂಲಕ ಅವರ ಮುಖಕ್ಕೆ ಮಂಗಳಾರತಿ ಮಾಡಿದೆ!

ಕಳೆದ ಕೆಲ ದಿನಗಳಿಂದ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಲ್ಲಿ “ಮತದಾನ ಮಾಡಿ’ ಎಂದು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು.
ಮತದಾನದ ದಿನ ರಜಾ ಇರುವುದರಿಂದ ಪ್ರವಾಸಕ್ಕೆ ಆಗಮಿಸದೆ ಮತ ಚಲಾಯಿಸಿದ ನಂತರ ಪ್ರವಾಸಕ್ಕೆ ಬರುವಂತೆ ಮನವಿ
ಮಾಡಿದ್ದರು. ಹೀಗಾಗಿ ಗುರುವಾರ ಮಾಗಡಿ ಹ್ಯಾಂಡ್‌ ಪೋಸ್ಟ್‌ ಮತ್ತು ಗಿರಿ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ನಿಂತು ಪ್ರವಾಸಿಗರ ವಾಹನಗಳನ್ನು ತಡೆದು ಮತದಾನ ಮಾಡಿ ಬಂದಿರುವ ಬಗ್ಗೆ
ಪರಿಶೀಲಿಸಿದರು. ಈ ವೇಳೆ 200ಕ್ಕೂ ಅಧಿಕ ಪ್ರವಾಸಿಗರು ಮತ ಚಲಾಯಿಸದೇ ಬಂದಿರುವುದು ಬೆಳಕಿಗೆ ಬಂತು. ಅವರಲ್ಲಿ
ಬೆಂಗಳೂರಿನ ಐಟಿಬಿಟಿ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚಿತ್ತು. ಹಲವರಿಗೆ ಇದೀಗ ನಡೆಯುತ್ತಿರುವುದು ಯಾವ ಚುನಾವಣೆ
ಎಂಬುದೇ ತಿಳಿದಿರಲಿಲ್ಲ. ಇನ್ನೂ ಕೆಲವರಿಗೆ ಮತದಾನದ ದಿನಾಂಕವೂ ಗೊತ್ತಿಲ್ಲದಿರುವುದು ದಂಗುಬಡಿಸಿತು.

ಈ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಅವರಿಗೆ ಶಹಬ್ಟಾಸ್‌ಗಿರಿ ನೀಡಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಎಟಿಎಂ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಜೆರಾಕ್ಸ್‌ ಪ್ರತಿಯ ಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಮುಂದಿನ ಬಾರಿ ಮತದಾನ ಮಾಡದೇ ಆಗಮಿಸುವ ಪ್ರವಾಸಿಗರನ್ನು ವಾಪಸ್‌ ಕಳುಹಿಸುವ ಎಚ್ಚರಿಕೆ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್‌, ಪ್ರಧಾನ ಕಾರ್ಯದರ್ಶಿ
ಬ್ಯಾಲದಾಳ್‌ ಕುಮಾರ್‌, ಕಾರ್ಯದರ್ಶಿ ವಿ.ಜೆ. ರಾಜೇಶ್‌, ಪುರುಷೋತ್ತಮ್‌ ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ