ಚಿಂಚೋಳಿ-ಚಂದಾಪುರದಲ್ಲಿ  ಜಲಕ್ಷಾಮ

ಸಂಪೂರ್ಣ ಬತ್ತಿದ ಮುಲ್ಲಾಮಾರಿ ನದಿನದಿಗೆ ನೀರು ಹರಿದು ಬಿಡಲು ಆಗ್ರಹ 

Team Udayavani, Mar 27, 2019, 5:07 PM IST

27-March-19

ಚಿಂಚೋಳಿ: ಪಟ್ಟಣದ ಪಕ್ಕದಲ್ಲಿ ಹರಿಯುವ ಮುಲ್ಲಾಮಾರಿ ನದಿಯಲ್ಲಿ ಅಲ್ಲಲ್ಲಿ ನಿಂತುಕೊಂಡಿರುವ ನೀರು ಕಲುಷಿತಗೊಂಡಿದೆ.

ಚಿಂಚೋಳಿ: ತಾಲೂಕಿನಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಮುಲ್ಲಾಮಾರಿ ನದಿ ಸಂಪೂರ್ಣ ಬತ್ತಿದೆ. ಅಲ್ಲಲ್ಲಿ ನಿಂತುಕೊಂಡಿದ್ದ ನೀರು ಹೊಲಸು ವಾಸನೆ ಮತ್ತು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಕುಡಿಯಲು ಯೋಗ್ಯವಲ್ಲದ ಕಾರಣ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ತಾಲೂಕಿನ ನಾಗರಾಳ ಗ್ರಾಮದ ಬಳಿಯಲ್ಲಿ ಇರುವ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಪ್ರತಿ ವರ್ಷ ಬೇಸಿಗೆ ದಿನಗಳಲ್ಲಿ ಹದಿನೈದು ದಿನಕ್ಕೊಮ್ಮೆ ನದಿಗೆ ನೀರು ಹರಿದು ಬಿಡಲಾಗುತ್ತಿತ್ತು. ಇದರಿಂದ ನದಿ ಪಾತ್ರದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪೂರ, ಕನಕಪೂರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಅಣವಾರ, ಪರದಾರ ಮೋತಕಪಳ್ಳಿ, ಗರಗಪಳ್ಳಿ, ಇರಗಪಳ್ಳಿ, ಕರ್ಚಖೇಡ ಮತ್ತು ಜಟ್ಟುರ, ಹಲಕೋಡ, ಪೋತಂಗಳು ಸೇರಿದಂತೆ ಸೇಡಂ ತಾಲೂಕಿನ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಉಪಯೋಗವಾಗುತ್ತಿತ್ತು.
ಆದರೆ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿಕೊಂಡಿದೆ. ದನಕರುಗಳಿಗೆ ಅಡವಿಯಲ್ಲಿ ಕುಡಿಯಲು ನೀರಿಲ್ಲ. ಆಹಾರಕ್ಕೆ ಮೇವು-ಹುಲ್ಲು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನದಿಯಲ್ಲೂ ನೀರಿಲ್ಲದ ಕಾರಣ ಅನೇಕ ಗ್ರಾಮಸ್ಥರು ತೊಂದರೆ ಪಡಬೇಕಾಗಿದೆ. ಫೆ.11ರಿಂದ ಕೇವಲ ಒಂದು ವಾರ ನದಿಗೆ ನೀರು ಬಿಟ್ಟದ್ದರಿಂದ ಈಗ ಮತ್ತೆ ನದಿಯಲ್ಲಿ ನೀರಿಲ್ಲದಂತಾಗಿದೆ. ಕೊಳವೆಬಾವಿ ಮತ್ತು ಸಾರ್ವಜನಿಕ ಬಾವಿಗಳು ಬತ್ತುತ್ತಿವೆ. ಕೂಡಲೇ ಮುಲ್ಲಾಮಾರಿ ನದಿಗೆ ನೀರು ಹರಿದು ಬಿಡುವಂತೆ ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿಂಚೋಳಿ- ಚಂದಾಪುರ ಅವಳಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಹನುಮಾನ ಮಂದಿರ ಹಿಂಭಾಗದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಆಗುತ್ತಿಲ್ಲ. ಚಂದಾಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
.ಸಂತೋಷ ಗುತ್ತೆದಾರ, 
ಆರೋಗ್ಯ ರಕ್ಷಕ ಸಮಿತಿ ನಿರ್ದೇಶಕ

ಟಾಪ್ ನ್ಯೂಸ್

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

Untitled-2

ಉತ್ತರದಲ್ಲಿ ವಿಕಾಸ್‌ ಕಿ ಗಂಗಾ

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನ

ಕರಾವಳಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ

ಕರಾವಳಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ

Untitled-1

ಎರಡು ವಾರಗಳಲ್ಲಿ ಒಮಿಕ್ರಾನ್‌ ಚಿತ್ರಣ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನ

ಅಮೆರಿಕದಲ್ಲಿ ಮೂವರು ಭಾರತೀಯರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

ಲಸಿಕೆ ಅಭಿಯಾನ: ಶೀಘ್ರ ಶೇ. 100 ಗುರಿ ಸಾಧನೆ: ಜಿಲ್ಲಾಧಿಕಾರಿ ವಿಶ್ವಾಸ

ಲಸಿಕೆ ಅಭಿಯಾನ: ಶೀಘ್ರ ಶೇ. 100 ಗುರಿ ಸಾಧನೆ: ಜಿಲ್ಲಾಧಿಕಾರಿ ವಿಶ್ವಾಸ

ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ

ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ

ಹಾಸನದೆಡೆಗೆ ಸಾಗುತ್ತಿದೆ ಉಡುಪಿ ನರ್ಮ್ ಬಸ್‌

ಹಾಸನದೆಡೆಗೆ ಸಾಗುತ್ತಿದೆ ಉಡುಪಿ ನರ್ಮ್ ಬಸ್‌

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

ಒಮಿಕ್ರಾನ್‌ ಭೀತಿ: ವಿದೇಶದಿಂದ ಹಲವರ ಪ್ರಯಾಣ ರದ್ದು 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಂಡಮ್‌ ಟೆಸ್ಟ್‌ 

Untitled-2

ಉತ್ತರದಲ್ಲಿ ವಿಕಾಸ್‌ ಕಿ ಗಂಗಾ

ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥ: ಡಿ. 13ಕ್ಕೆ ಅಧಿಕಾರ ಸ್ವೀಕಾರ

ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥ: ಡಿ. 13ಕ್ಕೆ ಅಧಿಕಾರ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.