ಮೊದಲ ಬಾರಿ ಬಸ್‌ ಬಂದ ಖುಷಿ!

•ಇನ್ನಿಲ್ಲ ವಿದ್ಯಾರ್ಥಿಗಳಿಗೆ ನಡೆಯೋ ಸಂಕಷ್ಟ•ಸಮಸ್ಯೆಗೆ ಸ್ಪಂದಿಸಿದ ಸಂಸದರು-ಶಾಸಕರು

Team Udayavani, Jul 13, 2019, 10:11 AM IST

ಚಿಂಚೋಳಿ: ಗಡಿಭಾಗದ ಜವಾಹರ ನಗರ ತಾಂಡಾಕ್ಕೆ ಮೊದಲ ಬಾರಿ ಬಸ್‌ ಆಗಮಿಸಿದ ಖುಷಿಯಲ್ಲಿ ಜನತೆ ಹಾಗೂ ವಿದ್ಯಾರ್ಥಿಗಳು.

ಚಿಂಚೋಳಿ: ಕುಂಚಾವರಂ ಗಡಿಭಾಗದ ಜವಾಹರ ನಗರ ತಾಂಡಾಕ್ಕೆ ಮೊದಲ ಸಲ ಸಾರಿಗೆ ಬಸ್‌ ಸಂಚಾರ ಪ್ರಾರಂಭಿಸಿರುವುದರಿಂದ ತಾಂಡಾದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಂಡಾದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಅನೇಕ ವರ್ಷಗಳಿಂದ ನಮ್ಮ ಜವಾಹರ ನಗರ ತಾಂಡಾಕ್ಕೆ ಬಸ್ಸಿನ ಸಂಚಾರ ಇಲ್ಲದ ಕಾರಣ ಚಿಂಚೋಳಿ, ಕುಂಚಾವರಂ, ಶಾದೀಪುರದಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗಿ ಬರಲು ಬಸ್ಸು ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲು ದಾರಿಯಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ಇತ್ತು.

ತಾಂಡಾಕ್ಕೆ ಬಸ್ಸಿನ ಸಂಚಾರ ಪ್ರಾರಂಭಿಸುವಂತೆ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಅವರಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರಿಂದ ಚಿಂಚೋಳಿ ಸಾರಿಗೆ ಘಟಕದಿಂದ ಮುಂಜಾನೆ ಮತ್ತು ಸಂಜೆ ಬಸ್ಸಿನ ಸಂಚಾರವನ್ನು ಶುಕ್ರವಾರ ಪ್ರಾರಂಭಿಸಲಾಗಿದೆ. ಇದರಿಂದ ನಮಗೆ ಬಹಳ ಸಂತಸವಾಗಿದೆ. ನಮ್ಮ ಸಮಸ್ಯೆ ಅರಿತು ಬಸ್ಸಿನ ಸಂಚಾರ ಪ್ರಾರಂಭಿಸಲು ಹೆಚ್ಚಿನ ಆಸಕ್ತಿ ವಹಿಸಿದ ಡಿಪೋ ಮ್ಯಾನೇಜರ್‌ ವಿಜಯಕುಮಾರ ಹೊಸಮನಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ತಾಂಡಾಕ್ಕೆ ಮೊದಲ ಸಲ ಸಾರಿಗೆ ಬಸ್‌ ಸಂಚಾರ ಪ್ರಾರಂಭ ಆಗಿರುವುದರಿಂದ ಬಸ್‌ ಚಾಲಕನಿಗೆ ಮತ್ತು ನಿರ್ವಾಹಕನಿಗೆ ತಾಂಡಾದ ಜನರು ಶಾಲು, ಹೂಮಾಲೆ ಹಾಕಿ ಅಭಿನಂದಿಸಿದರು. ನಂತರ ಬಸ್ಸಿಗೆ ತಳಿರು-ತೋರಣಗಳಿಂದ ಸಿಂಗರಿಸಿ ಸ್ವಾಗತಿಸಲಾಯಿ ತು. ವಿದ್ಯಾರ್ಥಿ ಮುಖಂಡ ವಿಜಯಕುಮಾರ ಜಾಧವ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ