ಮಳೆಗೆ ಕಂಗೊಳಿಸುತ್ತಿದೆ ಬೆಳೆ

•ಹೆಸರು-ತೊಗರಿ ಬೆಳೆಗಳಲ್ಲಿ ಚೇತರಿಕೆ•ಕಳೆ ಕೀಳುವ ಕೆಲಸಕ್ಕೆ ಚಾಲನೆ

Team Udayavani, Jul 21, 2019, 4:54 PM IST

ಚಿಂಚೋಳಿ: ಗಡಿಕೇಶ್ವಾರ ಗ್ರಾಮದ ಹೊಲವೊಂದರಲ್ಲಿ ಹೆಸರು ಬೆಳೆ ಹೂ ಬಿಟ್ಟಿದೆ.

ಚಿಂಚೋಳಿ: ತಾಲೂಕಿನಲ್ಲಿ ಕಳೆದ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸಾಧಾರಣವಾಗಿ ಉತ್ತಮ ಮಳೆ ಆಗಿರುವುದರಿಂದ ಬಿಸಿಲಿನ ತಾಪದಿಂದ ಬಾಡಿ ಹೋಗುತ್ತಿದ್ದ ಮುಂಗಾರು ಬೆಳೆಗಳಿಗೆ ಜೀವ ಕಳೆ ಬಂದಿದ್ದು ರೈತರಲ್ಲಿ ಖುಷಿ ತಂದಿದೆ.

ಪ್ರಸಕ್ತ ಸಾಲಿನ ಜೂನ್‌ ತಿಂಗಳಲ್ಲಿ ಮಳೆ ಕೊರತೆ ಮಧ್ಯೆ ಹೆಸರು, ಉದ್ದು, ತೊಗರಿ, ಸೋಯಾಬಿನ್‌, ಅಲಸಂದಿ, ಸಜ್ಜೆ, ಹೈಬ್ರಿಡ್‌ ಜೋಳದ ಬೆಳೆಗಳು ಬೆಳೆಯದೇ ಮಳೆ ಅಭಾವದಿಂದಾಗಿ ಕುಂಠಿತವಾಗಿದ್ದವು. ಕಳೆದೆರಡು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿರುವುದರಿಂದ ಉದ್ದು, ಹೆಸರು, ತೊಗರಿ ಬೆಳೆಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ.

ಮುಂಗಾರು ಬಿತ್ತನೆಗಾಗಿ ಹೆಸರು, ಉದ್ದು, ತೊಗರಿ ಬೀಜ ಹಾಗೂ ಡಿಎಪಿ, ಯೂರಿಯಾ ರಸಗೊಬ್ಬರವನ್ನು ಅಧಿಕ ಬೆಲೆಯಲ್ಲಿ ಖರೀದಿ ಮಾಡಿದ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಈಗ ಬೆಳೆಗಳಲ್ಲಿ ಸ್ವಲ್ಪಮಟ್ಟಿಗೆ ಬೆಳವಣಿಗೆ ಆಗುತ್ತಿರುವುದರಿಂದ ಶುಕ್ರವಾರ ಮತ್ತು ಶನಿವಾರ ಕೆಲವು ಗ್ರಾಮಗಳಲ್ಲಿ ಬೆಳೆಗಳಲ್ಲಿ ಹುಲ್ಲು ಕೀಳುವ ಕೆಲಸ ಭರದಿಂದ ನಡೆಯುತ್ತಿವೆ. ತಾಲೂಕಿನ ಸುಲೇಪೇಟ ಹೋಬಳಿ ಮತ್ತು ಕೋಡ್ಲಿ ಹೋಬಳಿಯಲ್ಲಿ ಉತ್ತಮ ಮಳೆ ಆಗಿರುವದರಿಂದ ಗಡಿಕೇಶ್ವಾರ, ಹಲಚೇರಾ, ಹೂಡೇಬೀರನಳ್ಳಿ, ಕುಪನೂರ, ತೇಗಲತಿಪ್ಪಿ, ಕೊರವಿ, ನಾವದಗಿ, ಕುಡಹಳ್ಳಿ ಗ್ರಾಮಗಳಲ್ಲಿ ಹೆಸರು, ಉದ್ದು, ತೊಗರಿ ಬೆಳೆಗಳು ಸಮೃದ್ದಿಯಾಗಿ ಬೆಳೆದಿರುವುದರಿಂದ ಬೆಳೆಗಳು ನಳನಳಿಸುತ್ತಿವೆ.

ಚಿಂಚೋಳಿ: 51ಮಿ.ಮೀ, ಐನಾಪುರ 25.6 ಮಿ.ಮೀ, ಕುಂಚಾವರಂ 15.2 ಮಿ.ಮೀ, ಸುಲೇಪೇಟ 7.8 ಮಿ.ಮೀ, ಚಿಮ್ಮನಚೋಡ 4.4 ಮಿ.ಮೀ, ನಿಡಗುಂದಾ 4.2 ಮಿ.ಮೀ ಮಳೆ ಆಗಿದೆ. ಕೊಳ್ಳೂರ, ಗಾರಂಪಳ್ಳಿ, ಶಾದೀಪುರ, ಐನೋಳಿ, ದೇಗಲಮಡಿ, ವೆಂಕಟಾಪುರ, ಗಡಿಲಿಂಗದಳ್ಳಿ, ಶಿರೋಳಿ ಗ್ರಾಮಗಳಲ್ಲಿ ಉತ್ತಮ ಮಳೆ ಆಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ