Udayavni Special

ಬೆಸ್ಕಾಂನಿಂದ ಗ್ರಾಹಕರಿಗೆ ಶಾಕ್‌!

•ಬಿಲ್ ವಿಳಂಬವಾಗಿ ಕೊಟ್ಟಿದ್ದರಿಂದ ಯುನಿಟ್ ದರವೂ ಏರಿಕೆ

Team Udayavani, Apr 24, 2019, 12:15 PM IST

24-April-15

ನಾಯಕನಹಟ್ಟಿ: ಗ್ರಾಹಕರೊಬ್ಬರಿಗೆ ಬೆಸ್ಕಾಂ ಸಿಬ್ಬಂದಿ ವಿಳಂಬವಾಗಿ ನೀಡಿರುವ ವಿದ್ಯುತ್‌ ಬಿಲ್.

ನಾಯಕನಹಟ್ಟಿ: ಬೆಸ್ಕಾಂ ಸಿಬ್ಬಂದಿ ತಡವಾಗಿ ಮೀಟರ್‌ ಬಿಲ್ ನೀಡಿದ್ದರಿಂದ ವಿದ್ಯುತ್‌ ಬಿಲ್ ಜಾಸ್ತಿಯಾಗಿ ಗ್ರಾಹಕರಿಗೆ ಆಘಾತ ತಂದಿಟ್ಟ ಘಟನೆ ನಡೆದಿದೆ.

ಪ್ರತಿ ತಿಂಗಳ 5 ನೇ ತಾರೀಕಿನಂದು ಬೆಸ್ಕಾಂ ಗ್ರಾಹಕರಿಗೆ ಬಿಲ್ ನೀಡಬೇಕು. ಇದು ಒಂದೆರಡು ದಿನ ತಡವಾಗಬಹುದು. ಆದರೆ ಇಲ್ಲಿನ ಬೆಸ್ಕಾಂ ಸಿಬ್ಬಂದಿ 5ಕ್ಕೆ ಬದಲಾಗಿ ಏ. 15 ಕ್ಕೆ ಬಿಲ್ ನೀಡಿದ್ದಾರೆ. ಇದರಿಂದಾಗಿ ಹೆಚ್ಚಿನ ಬಿಲ್ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಪಟ್ಟಣದ ಬೈಪಾಸ್‌ ಬಡಾವಣೆ ಪ್ರದೇಶದಲ್ಲಿ ಬೆಸ್ಕಾಂ ಸಿಬ್ಬಂದಿಯ ಲೋಪ ಕಂಡು ಬಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಬಿಲ್ ಬಂದಿದೆ.

ಬೆಸ್ಕಾಂ ಪ್ರತಿ ಮನೆಗೆ 30 ಯುನಿಟ್ ವಿದ್ಯುತ್‌ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚು

ಯುನಿಟ್ ಬಳಕೆಯಾಗುತ್ತಿದ್ದಂತೆ ಸ್ಲಾಬ್‌ ದರ ಹೆಚ್ಚಾಗುತ್ತದೆ. ಹತ್ತು ದಿನ ತಡವಾಗಿ ಬಿಲ್ ನೀಡಿರುವುದರಿಂದ ಸ್ಲಾಬ್‌ ಮಿತಿ ಹೆಚ್ಚಾಗಿ ದುಪ್ಪಟ್ಟು ದರ ಪಾವತಿಸಬೇಕಾಗಿದೆ. ಬೆಸ್ಕಾಂ ಬಿಲ್ನಲ್ಲಿ 30 ಯುನಿಟ್ ಗರಿಷ್ಠ ಮಿತಿ ನೀಡಲಾಗುವುದು ಎಂದು ನಮೂದಿಸಲಾಗಿದೆ. ಇದಕ್ಕೆ ಪ್ರತಿ ಯುನಿಟ್‌ಗೆ 3.20 ರೂ. ದರ ನಿಗದಿಪಡಿಸಲಾಗಿದೆ. ಎಲ್ಟಿ 2 ಯೋಜನೆಯಡಿಯಲ್ಲಿನ ಗ್ರಾಹಕರು 30 ಯುನಿಟ್ಗಿಂತ ಹೆಚ್ಚು ಬಳಕೆ ಮಾಡಿಕೊಂಡರೆ 4.75 ರೂಗಳನ್ನು ಪಾವತಿಸಬೇಕು. 70 ಯುನಿಟ್ಗಿಂತ ವರೆಗೆ ಬಳಕೆ ಮಾಡಿದರೆ 6.75 ರೂ. ತೆರಬೇಕು. 70 ಯುನಿಟ್‌ಗಳಿಗಿಂತ ಹೆಚ್ಚು ಬಳಕೆ ಮಾಡಿದರೆ ಪ್ರತಿ ಯುನಿಟ್‌ಗೆ 8 ರೂ.ನಂತೆ ಬಿಲ್ ಪಾವತಿಸಬೇಕು. ಎಲ್ಲ ಗ್ರಾಹಕರು ಮಾರ್ಗದ ಶುಲ್ಕವಾಗಿ 50 ರೂ.ಗಳನ್ನು ನೀಡಬೇಕು. ತಿಂಗಳ 5 ನೇ ತಾರೀಕಿನ ನಂತರ ಬಿಲ್ ನೀಡಿರುವುದರಿಂದ ಬಳಕೆಯಾದ ವಿದ್ಯುತ್‌ ಬಿಲ್ ಜತೆಗೆ ಸ್ಲಾಬ್‌ ದರ ಸೇರಿ ಒಟ್ಟಾರೆ ಬಿಲ್ನಲ್ಲಿ ಹೆಚ್ಚಳ ಕಂಡು ಬಂದಿದೆ.

ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಮನೆಗಳಲ್ಲಿ ಫ್ಯಾನ್‌ ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ರೆಫ್ರಿಜರೇಟರ್‌ ಹಾಗೂ ನೀರೆತ್ತುವ ಪಂಪ್‌ ಬಳಕೆಯೂ ಹೆಚ್ಚಾಗುತ್ತಿದೆ. ಇವುಗಳ ಜತೆಗೆ ಬೆಸ್ಕಾಂ ಸಿಬ್ಬಂದಿ ಲೋಪದಿಂದಾಗಿ ಬಿಲ್ ಪ್ರಮಾಣ ದ್ವಿಗುಣಗೊಂಡಿದೆ. ಯುಗಾದಿ, ಚುನಾವಣೆ, ಸ್ವಂತ ರಜೆಗಳಿಂದಾಗಿ ಸಿಬ್ಬಂದಿ ಬಿಲ್ ನೀಡುವುದನ್ನು ವಿಳಂಬ ಮಾಡಿದ್ದಾರೆ. ಬೆಸ್ಕಾಂ ಸಿಬ್ಬಂದಿ ತಪ್ಪಿಗೆ ಗ್ರಾಹಕರು ಹೆಚ್ಚಿನ ಬಿಲ್ ಪಾವತಿಸಬೇಕಾಗಿದೆ.

ಸಿಬ್ಬಂದಿ ಲೋಪಕ್ಕೆ ದಂಡ ಹಾಕೋರ್ಯಾರು?
ಕಳೆದ ತಿಂಗಳು 370 ರೂ. ಬಿಲ್ ಪಾವತಿಸಲಾಗಿದೆ. ಈ ಬಾರಿ 720 ರೂ. ಬಿಲ್ ಬಂದಿದೆ. ನಾವು ಬಿಲ್ ನೀಡುವುದನ್ನು ತಡ ಮಾಡಿದರೆ ಬೆಸ್ಕಾಂ ಬಡ್ಡಿ ಹಾಕುತ್ತದೆ. ಆದರೆ ಬೆಸ್ಕಾಂ ಸಿಬ್ಬಂದಿಯ ತಪ್ಪಿನಿಂದ ನಮಗೆ ಹೆಚ್ಚು ಬಿಲ್ ಬಂದಿದೆ. ಆದ್ದರಿಂದ ಮುಂದಿನ ಬಿಲ್ ನೀಡುವ ಸಮಯದಲ್ಲಿ ನಷ್ಟವನ್ನು ಸರಿದೂಗಿಸಬೇಕು. ಇಲ್ಲವಾದರೆ ಬೆಸ್ಕಾಂ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಗ್ರಾಹಕ ಪಿ.ಬಿ. ಬೋರಣ್ಣ ಎಚ್ಚರಿಸಿದರು.

ಪ್ರತಿ ತಿಂಗಳು ನಿಗದಿಪಡಿಸಿದ ದಿನಾಂಕದಂದು ಮೀಟರ್‌ ರೀಡಿಂಗ್‌ ಗುರುತಿಸಿ ಬಿಲ್ ಪಾವತಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗುವುದು. ಇದನ್ನು ಸರಿಪಡಿಸುವಂತೆ ಬೆಸ್ಕಾಂ ಸೆಕ್ಷನ್‌ ಇಂಜಿನಿಯರ್‌ ಹಾಗೂ ಸಂಬಂಧಿಸಿದ ಮೀಟರ್‌ ರೀಡರ್‌ಗೆ ಸೂಚನೆ ನೀಡಲಾಗಿದೆ.
•ಮಮತಾ, ಬೆಸ್ಕಾಂ ಎಇಇ, ತಳಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

07-April-25

ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ

07-April-24

ಗ್ರಾಮಲೆಕ್ಕಾಧಿಕಾರಿಗಳ ಲೊಕೇಶನ್‌ ಪಡೆಯಿರಿ

07-April-23

ಕಲ್ಲಂಗಡಿ-ಪಪ್ಪಾಯಿ ಬೆಳೆಗಾರರ ಪರದಾಟ

ಕೋವಿಡ್ 19: ಸುರಕ್ಷತಾ ಕ್ರಮಗಳ ಪರಿಶೀಲನೆ

ಕೋವಿಡ್ 19: ಸುರಕ್ಷತಾ ಕ್ರಮಗಳ ಪರಿಶೀಲನೆ

07-April-22

ಪಡಿತರಕ್ಕೆ ಮುಗಿಬಿದ್ದ ಫಲಾನುಭವಿಗಳು-ಆತಂಕ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

07-April-25

ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ

07-April-24

ಗ್ರಾಮಲೆಕ್ಕಾಧಿಕಾರಿಗಳ ಲೊಕೇಶನ್‌ ಪಡೆಯಿರಿ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

07-April-23

ಕಲ್ಲಂಗಡಿ-ಪಪ್ಪಾಯಿ ಬೆಳೆಗಾರರ ಪರದಾಟ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ