ವರುಣ ಕೃಪೆಗೆ ದುರ್ಗದಲ್ಲಿ ನಡೀತು ಕಪ್ಪೆಗಳ ಮದುವೆ

ಮಳೆರಾಯ ಧರಗಿಳಿದು ಬಾರೆಂದು ಪ್ರಾರ್ಥಿಸಿದ ಕೆಳಗೋಟೆ ಜನ

Team Udayavani, May 16, 2019, 11:41 AM IST

16-May-11

ಚಿತ್ರದುರ್ಗ: ವರುಣ ಕೃಪೆಗೆ ಪ್ರಾರ್ಥಿಸಿ ನಗರದ ಕೆಳಗೋಟೆಯಲ್ಲಿ ಕಪ್ಪೆಗಳ ಮದುವೆ ಮಾಡಲಾಯಿತು.

ಚಿತ್ರದುರ್ಗ: ಸತತ ಬರದಿಂದ ಕಂಗೆಟ್ಟ ಜನ ಮಳೆಗಾಗಿ ಕಪ್ಪೆ, ಕತ್ತೆ ಮದುವೆ ಮಾಡಲು ಮುಂದಾಗಿದ್ದಾರೆ. ವರುಣ ಕೃಪೆಗೆ ಪ್ರಾರ್ಥಿಸಿ ಬುಧವಾರ ನಗರದ ಕೆಳಗೋಟೆಯ ಬೇಡರ ಕಣ್ಣಪ್ಪ ದೇವಸ್ಥಾನ ಸಮೀಪದ ಮಾರಮ್ಮ ದೇವಸ್ಥಾನದಲ್ಲಿ ಕಪ್ಪೆ ಮದುವೆ ಮಾಡಲಾಯಿತು.

ಬೇಡರ ಕಣ್ಣಪ್ಪ ಮತ್ತು ಮಾರಮ್ಮ ದೇವಸ್ಥಾನ ಬೀದಿಯ ನಿವಾಸಿಗಳು ಶಾಮಿಯಾನ, ಕುರ್ಚಿ, ಟೇಬಲ್ ಹಾಕಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ತರಹೇವಾರಿ ಭೋಜನವನ್ನೂ ಸಿದ್ಧಪಡಿಸಿದ್ದರು. ಹೆಣ್ಣು ಮತ್ತು ಗಂಡಿನ ಕಡೆಯವರೆಂದು ಎರಡು ಭಾಗ ಮಾಡಿಕೊಂಡು ಶಾಸ್ತ್ರಬದ್ಧವಾಗಿ ಮದುವೆ ಕಾರ್ಯ ನೆರವೇರಿಸಿದರು.

ಕಪ್ಪೆಗಳ ಮದುವೆಗಾಗಿ ಜ್ಯೋತಿಷಿಗಳ ಬಳಿ ಹೋಗಿ ಮೇ 15 ರ ಶುಭದಿನದ ಮುಹೂರ್ತವನ್ನು ನಗದಿಮಾಡಿಕೊಂಡು ಬರಲಾಗಿತ್ತು. ಮದುವೆ ಕಾರ್ಯಗಳನ್ನು ಸಂಭ್ರಮದಿಂದ ನೆರವೇರಿಸಿದರು. ಕೆಲವರು ಹೆಣ್ಣು ಕಪ್ಪೆಯ ಬೀಗರಾದರೆ, ಇನ್ನುಳಿದವರು ಗಂಡು ಕಪ್ಪೆಯ ಬೀಗರಾಗಿದ್ದರು.

ಹಾಲಗಂಬ ಮತ್ತು ಹಂದರಗಂಬ ತರುವುದು, ಅರಿಷಣ-ಕುಂಕುಮ ಹಚ್ಚುವುದು, ಸುರುಗಿ ಸುತ್ತುವುದು, ಮೆರವಣಿಗೆ ಮೂಲಕ ಬಾಸಿಂಗ ತರುವುದು ಸೇರಿದಂತೆ ತಾಳಿ ಕಟ್ಟುವವರೆಗೆ ಮದುವೆ ಮನೆಯಲ್ಲಿ ಏನೇನು ಶಾಸ್ತ್ರಗಳು ನಡೆಯುತ್ತವೆಯೋ ಆ ಎಲ್ಲ ಕಾರ್ಯಗಳೂ ಸಂಪ್ರದಾಯ ಬದ್ಧವಾಗಿಯೇ ನಡೆದವು.

ಹೆಣ್ಣು ಹಾಗೂ ಗಂಡು ಕಪ್ಪೆಗಳನ್ನು ತಂದು ಸಂಭ್ರಮದಿಂದ ಮದುವೆ ಮಾಡಲಾಯಿತು. ಲಗ್ನ ಮಾಡಿಸಿದ ನಂತರ 12 ವರ್ಷದೊಳಗಿನ ಹುಡುಗನೊಬ್ಬ ಕಪ್ಪೆ ಜೋಡಿಯನ್ನು ತಲೆ ಮೇಲೆ ಕೂರಿಸಿಕೊಂಡು ಐದು ಮನೆಗಳಿಗೆ ಮೆರವಣಿಗೆ ಮಾಡಿದ. ಈ ಸಂದರ್ಭದಲ್ಲಿ ಮುತ್ತೈದೆಯರು ಕಪ್ಪೆ ದಂಪತಿಗೆ ಹರಸಿದರು. ಮದುವೆಯಲ್ಲಿ ಪಾಲ್ಗೊಂಡಿದ್ದವರು ಶೀಘ್ರ ಮಳೆಯಾಗಿ ಇಳೆ ತಂಪಾಗಲಿ, ರೈತರು ಬಿತ್ತನೆ ಮಾಡಿ ದೇಶಕ್ಕೆ ಅನ್ನ ನೀಡಲಿ, ಬಡವರಿಗೆ ಉದ್ಯೋಗ ಸಿಗಲಿ ಎಂದು ಪ್ರಾರ್ಥಿಸಿದರು.

ಮದುವೆಯ ಪೌರೋಹಿತ್ಯವನ್ನು ಮಾರಮ್ಮ ದೇವಸ್ಥಾನ ಪೂಜಾರಿ ಮಾರಣ್ಣ ವಹಿಸಿಕೊಂಡಿದ್ದರು. ಮದುವೆಗೆ ಬಂದ ಎಲ್ಲರಿಗೂ ಅನ್ನ, ಪಾಯಸ, ಸಾಂಬಾರ್‌, ಪಲ್ಯ ಸೇರಿದಂತೆ ಭೂರಿ ಭೋಜನ ಬಡಿಸಲಾಯಿತು. ಬೇಡರ ಕಣ್ಣಪ್ಪ ದೇವಸ್ಥಾನ ಬೀದಿಯ ಓಬಮ್ಮ, ಮಾರಕ್ಕ, ರತ್ನಮ್ಮ, ಲಕ್ಷ್ಮೀದೇವಮ್ಮ, ಪಾಲಮ್ಮ, ಮಾರಪ್ಪ, ಮಂಜಣ್ಣ, ಕುಮಾರ, ಓಬಣ್ಣ ಮೊದಲಾದವರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.