Udayavni Special

ಮಹಿಳಾ ಸ್ವಾತಂತ್ರ್ಯಕ್ಕಾಗಿ ಶರಣರಿಂದ ಹೋರಾಟ

ಎಸ್‌.ಎಲ್.ಭೈರಪ್ಪ 21 ನೇ ಶತಮಾನದ ಮನು ಧರ್ಮಶಾಸ್ತ್ರದ ಆಧುನಿಕ ವಕ್ತಾರ: ತಾಳ್ಯ ಟೀಕೆ

Team Udayavani, May 4, 2019, 4:59 PM IST

4-MAY-31

ಚಿತ್ರದುರ್ಗ: ಮೊದಲ ಹೆಜ್ಜೆ ಪುಸ್ತಕವನ್ನು ಲೇಖಕ ಪ್ರೊ| ಚಂದ್ರಶೇಖರ್‌ ತಾಳ್ಯ ಲೋಕಾರ್ಪಣೆಗೊಳಿಸಿದರು.

ಚಿತ್ರದುರ್ಗ: 12ನೇ ಶತಮಾನದಲ್ಲೇ ಮಹಿಳೆಯರನ್ನು ಲೌಖೀಕ ಮತ್ತು ಅಲೌಖೀಕ ಸಂಕಷ್ಟದಿಂದ ಹೊರತರಲು ಬಸವಣ್ಣ ಸೇರಿದಂತೆ ಮತ್ತಿತರ ಶರಣರು ಕ್ರಾಂತಿಕಾರಿ ಹೋರಾಟ ನಡೆಸಿದರು ಎಂದು ಲೇಖಕ, ಚಿಂತಕ ಚಂದ್ರಶೇಖರ ತಾಳ್ಯ ಹೇಳಿದರು.

ಇಲ್ಲಿನ ಸೇಂಟ್ ಮೆರೀಸ್‌ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಹಾಗೂ ಸೇಂಟ್ ಮೆರೀಸ್‌ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹೆಜ್ಜೆ ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

21ನೇ ಶತಮಾನದಲ್ಲಿ ಆರಂಭವಾದ ಮಹಿಳೆಯರು ಕುರಿತ ಹೋರಾಟ ಇಂದಿಗೂ ಮಹಿಳೆ ಪುರುಷ ಪ್ರಧಾನ ಸಮಾಜದಿಂದ ಹೊರಬರಲು ಆಗುತ್ತಿಲ್ಲ ಏಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.

ಮಹಿಳೆಯರು ಸಾಕಷ್ಟು ಶಿಕ್ಷಣವಂತರಾಗುತ್ತಿದ್ದಾರೆ. ಆದರೂ ಇಂತಹ ಸಮಾರಂಭಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ. ಕೀಳರಿಮೆ, ಹಿಂಜರಿಕೆ ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ಮಹಿಳೆಯರು ಅಪಾರವಾದ ಸಂಕಟ ಅನುಭವಿಸುತ್ತಿದ್ದಾರೆ. ಮನಸ್ಸಿನ ಅಭಿವ್ಯಕ್ತಿ ಚಿಂತನೆಯನ್ನು ಬರವಣಿಗೆ ಮೂಲಕ ಹೊರಹಾಕಬೇಕಾಗಿದೆ. ಮಾತೃ ಸಂಸ್ಕೃತಿಯಿಂದ ಪಿತೃ ಸಂಸ್ಕೃತಿಗೆ ಹೆಣ್ಣು ಜಿಗಿದಾಗಿನಿಂದ ಲೌಖೀಕ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಇನ್ನು ಮುಂದೆ ಪತಿಯೂ ಕೂಡ ಕಾನೂನು ಸಮ್ಮತಿ ಪಡೆದುಕೊಂಡು ಪತ್ನಿಯನ್ನು ಮುಟ್ಟುವ ಕಾಲ ಬಂದರೂ ಬರಬಹುದು ಆಶ್ಚರ್ಯವಿಲ್ಲ ಎಂದು ಎಸ್‌.ಎಲ್. ಭೈರಪ್ಪ ಹಾಸ್ಯ ಚಟಾಕಿ ಹಾರಿಸುವುದನ್ನು ನಿಜವಾಗಿಯೂ ಬುದ್ಧಿವಂತರು, ಪ್ರಜ್ಞಾವಂತರು, ಸ್ತ್ರೀಯರು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ಹಾಸ್ಯವಲ್ಲ. ನೋವಿನ ಸಂಗತಿ. ಭೈರಪ್ಪ 21 ನೇ ಶತಮಾನದ ಮನು ಧರ್ಮಶಾಸ್ತ್ರದ ಆಧುನಿಕ ವಕ್ತಾರ ಎಂದು ಕುಟುಕಿದರು.

ಇಂದಿಗೂ ಬಹಳ ಮಹಿಳೆಯರಿಗೆ ಲೌಖೀಕ ಬಂಧನದಲ್ಲಿದ್ದೇವೆ ಎನ್ನುವುದು ಗೊತ್ತಿಲ್ಲ. ಹೆಣ್ಣು-ಗಂಡು ಎನ್ನುವ ತಾರತಮ್ಯಕ್ಕಿಂತ ಇಬ್ಬರು ಒಂದಾಗಿ ಬದುಕುವ ಸ್ಥಿತಿ ತಂದುಕೊಳ್ಳಬೇಕು. ಪ್ರಶಿಕ್ಷಣಾರ್ಥಿಗಳು ಓದುವುದರ ಕಡೆಗೆ ಹೆಚ್ಚಿನ ಗಮನ ಕೊಡಿ ಎಂದು ಬಿಇಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಲೇಖಕಿಯರು ಬರೆಯುವುದಕ್ಕಿಂತ ವಿಚಾರ ಗ್ರಹಿಸುವುದು ಮುಖ್ಯ. ಮಹಿಳೆಯರು ಪುರುಷರನ್ನು ದ್ವೇಷಿಸಬಾರದು. ಪುರುಷರು ಕೂಡ ಮಹಿಳೆಯರನ್ನು ದ್ವೇಷಿಸಬಾರದು. ಹೆಣ್ಣು-ಗಂಡು ಇಬ್ಬರು ಸಮಾನರೆ ಎನ್ನುವ ಮನೋಭಾವ ಬೆಳೆಯಬೇಕು ಎಂದು ಹೇಳಿದರು.

ಸಮಕಾಲೀನ ಮಹಿಳಾ ಕಥಾ ಸಾಹಿತ್ಯ ಹೊಸ ನೋಟಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ, ಜಿಲ್ಲೆಯಲ್ಲಿ 300 ಮಹಿಳೆಯರು ಕಥೆಗಳನ್ನು ಬರೆಯುತ್ತಿದ್ದಾರೆ. 700 ಕಥಾಸಂಕಲನಗಳಿವೆ. ಮಹಿಳೆಯರ ಸಂವೇದನೆಯನ್ನು ಬರೆಯುವವರು ಹೆಚ್ಚು ದಾಖಲಾಗುತ್ತಿಲ್ಲ. ಮಹಿಳಾ ಬರಹಗಾರ್ತಿಯರಿಗೂ ಪ್ರೇರಕ ಶಕ್ತಿ ಬೇಕಾಗಿದೆ ಎಂದರು.

12ನೇ ಶತಮಾನದಲ್ಲೇ 35ಕ್ಕೂ ಹೆಚ್ಚು ಮಹಿಳೆಯರು ಕಥೆಗಳನ್ನು ಬರೆದಿದ್ದಾರೆ. ಎಲ್ಲಿಯೂ ದಾಖಲಾಗಿಲ್ಲ. ಶೈಕ್ಷಣಿಕ ವಲಯಕ್ಕೆ ಮಹಿಳೆಯರ ಬರವಣಿಗೆ ಪ್ರವೇಶಿಸುತ್ತಿಲ್ಲ. ಬರವಣಿಗೆಯೇ ಬಂಡಾಯ, ಮಾತೆ ಬಂಡಾಯ ಎನ್ನುವಾಗ ಸ್ತ್ರೀಯರ ಬರವಣಿಗೆ ಇನ್ನು ಏಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಇದಕ್ಕೆ ಮಹಿಳೆ ಎನ್ನುವ ನಿರ್ಲಕ್ಷೆ, ಅಸಡ್ಡೆ ಕಾರಣವಿರಬಹುದು ಹಾಗಾಗಿ ಕಥೆಗಳಿಗೆ ಅಭಿವ್ಯಕ್ತಿ ಬೇಕು ಎಂದರು.

ಜೀವನ ಅನುಭವ ಎಷ್ಟು ಮುಖ್ಯವೋ, ಬರವಣಿಗೆ, ಓದು ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ದೇಹ ಮತ್ತು ಮನಸ್ಸನ್ನು ಒಂದು ಮಾಡಿ ಮಾತುಗಳನ್ನು ಕೇಳುವುದೇ ನಿಜವಾದ ಅನುಭವ. ಮಹಿಳೆಯರು ಎಚ್ಚರವಾದಾಗ ಆಲೋಚನೆ ಬದಲಾಗುತ್ತದೆ. ಚರಿತ್ರೆ, ಇತಿಹಾಸ, ಪರಂಪರೆಯನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳನ್ನು ಎಚ್ಚರಿಸಿದರು.

ಕುವೆಂಪುರವರ ನಾಯಿಬುತ್ತಿ, ಮೊದಲ ಹೆಜ್ಜೆ ಪುಸ್ತಕಕ್ಕೆ ಹತ್ತಿರವಾದ ಸಂಬಂಧವಿದೆ. ಕಾವ್ಯದಲ್ಲಿದ್ದಂತೆ ಕಥೆಗಳಲ್ಲಿಯೂ ಕಾಡುವ ಗುಣವಿರಬೇಕು. ಪ್ರತಿಯೊಂದನ್ನು ಯೋಚಿಸಿ ಪ್ರಶ್ನಿಸುವ ಶಕ್ತಿ ಕಥೆ, ಬರವಣಿಗೆ, ಅಭಿವ್ಯಕ್ತಿಯಲ್ಲಿರಬೇಕು. ಆಚಾರ-ಸಂಪ್ರದಾಯ-ನಂಬಿಕೆಗಳನ್ನು ಪರಾಮರ್ಶಿಸಿ ತರ್ಕಕ್ಕೆ ಕೊಡೊಯ್ಯಬೇಕು. ಮಹಿಳಾ ಬರಹಗಾರರಿಗೂ ದೊಡ್ಡ ಜವಾಬ್ದಾರಿ ಇರುವುದರಿಂದ ಬದಲಾವಣೆಯ ಕಾಲಘಟ್ಟದಲ್ಲಿ ಹಳೆ ತಲೆಮಾರಿಗೆ ಇನ್ನು ಜೋತು ಬೀಳಬಾರದು. ವಿಜ್ಞಾನದ ಮೂಲಕ ಮೌಡ್ಯಗಳನ್ನು ನಂಬಿ ಮೋಸ ಹೋಗುವುದು ನಿಲ್ಲಬೇಕು ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್‌, ಲೇಖಕಿ ಪದ್ಮಿನಿ ನಾಗರಾಜು, ಉಪನ್ಯಾಸಕ ಡಾ| ಎಸ್‌.ಎನ್‌. ಹೇಮಂತರಾಜು, ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ, ಸಿ.ಬಿ. ಶೈಲಾ, ಡಿ. ಮಂಜುಳಾ, ಶಶಿಕಲಾ ರವಿಶಂಕರ್‌ ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ!

ಕೋವಿಡ್‌ ವಾರಿಯರ್ಸ್ ಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಬಹುಮಾನ ನೀಡಿ: ದೇಶಪಾಂಡೆ.

ಕೋವಿಡ್‌ ವಾರಿಯರ್ಸ್ ಗಳಿಗೆ ಶೌರ್ಯ ಪುರಸ್ಕಾರ, ವಿಶೇಷ ನಗದು ಪುರಸ್ಕಾರ ನೀಡಿ: ದೇಶಪಾಂಡೆ.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ಚಾ.ನಗರ ಜಿ.ಪಂ.ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿ ಅವಿರೋಧ ಆಯ್ಕೆ

ಚಾ.ನಗರ ಜಿ.ಪಂ.ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿ ಅವಿರೋಧ ಆಯ್ಕೆ

ವಿಜಯಪುರ ಶತಕದತ್ತ ಧಾವಿಸುತ್ತಿರುವ ಸೋಂಕಿತರು

ವಿಜಯಪುರ ಶತಕದತ್ತ ಧಾವಿಸುತ್ತಿರುವ ಸೋಂಕಿತರು

ಶಿವಮೊಗ್ಗದಲ್ಲಿ ಇಂದು ಹೊಸದಾಗಿ ಆರು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಶಿವಮೊಗ್ಗದಲ್ಲಿ ಇಂದು ಹೊಸದಾಗಿ ಆರು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್‌ ಥ್ರಿಲ್ಲಿಂಗ್‌ ರಾಕ್ಷಸನ್‌

ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್‌ ಥ್ರಿಲ್ಲಿಂಗ್‌ ರಾಕ್ಷಸನ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.