ಜಲಮೂಲ ರಕ್ಷಣೆಗೆ ಜನಪ್ರತಿನಿಧಿಗಳಿಗಿಲ್ಲ ಇಚ್ಛಾ ಶಕ್ತಿ

Team Udayavani, Nov 10, 2019, 3:13 PM IST

10-November-20

ಚಿತ್ರದುರ್ಗ: ಒಂದೆಡೆ ಮಳೆ ಬಂದು ತುಂಬಿದ ಕೆರೆಯ ಏರಿ ಒಡೆದು ನೀರು ಪೋಲಾದರೆ, ಮತ್ತೊಂದೆಡೆ ತುಂಬಿರುವ ಕೆರೆ ಕಸದ ತೊಟ್ಟಿಯಾಗುತ್ತದೆ! ಜಲಮೂಲಗಳ ಬಗ್ಗೆ ಇರುವ ಅಸಡ್ಡೆಗೆ ಇವು ನಿದರ್ಶನ. ಜಲಮೂಲಗಳ ಸಂರಕ್ಷಣೆಯಲ್ಲಿ ಜಿಲ್ಲೆಯ ಜನಪ್ರತಿನಿ ಗಳು ಹಾಗೂ ಅಧಿಕಾರಿಗಳಿಗೆ ಎಷ್ಟು ಬದ್ಧತೆ ಇದೆ ಎನ್ನುವುದಕ್ಕೆ ಇತ್ತೀಚೆಗೆ ಭಾರೀ ಮಳೆಯಿಂದ ತುಂಬಿ ಕೆರೆಯ ಏರಿ ಹೊಡೆದು ಅಪಾರ ಪ್ರಮಾಣದ ನೀರು ಪೋಲಾದ ಹೊಸದುರ್ಗ ತಾಲೂಕು ನೀರಗುಂದ ಕೆರೆ ಹಾಗೂ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪುರ ಕೆರೆ ಉತ್ತಮ ನಿದರ್ಶನ.

ಮುಂದಿನ ಕನಿಷ್ಠ 5 ವರ್ಷಕ್ಕೆ ಬೇಕಾಗುವಷ್ಟು ನೀರು ನೀರಗುಂದ ಕೆರೆಯಿಂದ ಹರಿದು ಹೋಯಿತು. ಇನ್ನೂ ಈ ಕೆರೆ ತುಂಬಲು ಎಷ್ಟು ವರ್ಷ ಬೇಕೋ ದೇವರೇ ಬಲ್ಲ. ಇದು ಒಂದು ಕಥೆಯಾದರೆ, ಚಿತ್ರದುರ್ಗ ಮಲ್ಲಾಪುರ ಕೆರೆಯದ್ದು ಮತ್ತೂಂದು ವ್ಯಥೆ. ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ಚಿತ್ರದುರ್ಗಕ್ಕೆ ಬರುವ ಹೊರಗಿನವರು ಈ ಕೆರೆ ಬಳಿ ಬಂದ ತಕ್ಷಣ ಮೂಗು ಮುಚ್ಚಿಕೊಂಡು ಚಿತ್ರದುರ್ಗವನ್ನು ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ಸಿನಲ್ಲಿ ಹಾದು ಹೋಗುವವರ ಸ್ಥಿತಿಯೇ ಹೀಗಾದರೆ ಕೆರೆಯ ಸುತ್ತಮುತ್ತ ಇರುವ ಮಲ್ಲಾಪುರ, ಪಿಳ್ಳೆಕೇರನಹಳ್ಳಿ ಹಾಗೂ ಅಕ್ಕಪಕ್ಕದ ಶಾಲಾ-ಕಾಲೇಜುಗಳ ಮಕ್ಕಳ ಕಥೆ ಏನು ಎನ್ನುವುದನ್ನು ಯೋಚಿಸಬೇಕಾಗಿದೆ. ಹಾಗಂತ ಮಲ್ಲಾಪುರ ಕೆರೆ ಕಸದ ತೊಟ್ಟಿಯಾಗುತ್ತಿದೆ, ನೀರು ಕಲುಷಿತಗೊಂಡಿದೆ, ಕೆರೆಯ ನೀರು ಮಲಿನವಾಗುವುದರಿಂದ ಈ ಭಾಗದ ಅಂತರ್ಜಲವೂ ಕಲುಷಿತಗೊಳ್ಳುತ್ತದೆ ಎಂದು ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಕೊನೆಯೂ ಆಗಲಾರದೇನೋ. ಸುದ್ದಿಯಾದಾಗೆಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಕೆರೆ ಬಳಿ ಹೋಗುವುದು, ನೋಡುವುದು, ಸರ್ಕಾರದ ಯಾವುದೋ ಯೋಜನೆಯಲ್ಲಿ ಅಭಿವೃದ್ಧಿ ಮಾಡುತ್ತೇವೆ, ದತ್ತು ತೆಗೆದುಕೊಳ್ಳುತ್ತೇವೆ ಎಂದು ಕಟ್ಟಿದ ಕಥೆಗಳು ಮುಗಿದು ಹೋಗಿವೆ. ಕೆರೆ ಮಾತ್ರ ಹಾಗೆಯೇ ಇದೆ.

ನಗರಕ್ಕೆ ಹೊಂದಿಕೊಂಡಿರುವ ಅತ್ಯಂತ ಸುಂದರವಾದ ಈ ಕೆರೆಯಲ್ಲಿ ಯಾವಾಗಲೂ ನೀರಿರುತ್ತೆ. ನಗರದಿಂದ ಬರುವ ಚರಂಡಿ ನೀರನ್ನು ಇದಕ್ಕೆ ನೇರವಾಗಿ ಬಿಡುವುದನ್ನು ತಪ್ಪಿಸಬೇಕು. ಕಸ ಹಾಕುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್‌ ಹಾಕದಂತೆ ನಿರ್ಬಂಧಿ ಸಬೇಕು. ಆದರೆ ಇದ್ಯಾವುದು ಆಗುತ್ತಿಲ್ಲ. ಇದರ ಪರಿಣಾಮ ಈ ಕೆರೆ ಅಕ್ಷರಶಃ ಕಸದ ತೊಟ್ಟಿಯಾಗಿ ನಾರುತ್ತಿದೆ. ಈ ಕೆರೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದು, ಬೋಟ್‌ ಬಿಡುವುದು, ಐಲ್ಯಾಂಡ್‌ ಮಾಡುವುದು ಸೇರಿದಂತೆ ಅನೇಕ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಮೂರ್‍ನಾಲ್ಕು ವರ್ಷಗಳ ಹಿಂದೆ ಕೆರೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಆದರೆ ಚರ್ಚೆ ಕಡತಗಳಲ್ಲೇ ಉಳಿದಿರುವುದು ವಿಪರ್ಯಾಸ.

ಸದ್ಯ ಕೆರೆಯಲ್ಲಿ ಕಣ್ಣು ಹಾಯಿಸಿದಷ್ಟು ಪ್ಲಾಸ್ಟಿಕ್‌ ಬಾಟಲಿ, ಕವರ್‌, ಡಬ್ಬಿ ಕಸದ ರಾಶಿಯೇ ಕಣ್ಣಿಗೆ ರಾಚುತ್ತದೆ. ನಗರದ ಒಳಚರಂಡಿಗಳಿಂದ ಹರಿಯುವ ಮಲ, ಮೂತ್ರ ಎಲ್ಲವೂ ಸೇರಿ ಇಡೀ ಕೆರೆ ಗಟಾರದಂತಾಗಿದೆ. ರಾತ್ರಿ ಹೊತ್ತು ಮದ್ಯದ ಬಾಟಲಿಗಳನ್ನು ಎಸೆಯುತ್ತಾರೆ. ಮಲ್ಲಾಪುರ ಕೆರೆಯ ಕಲುಷಿತ ನೀರು ಗೋನೂರು ಕೆರೆ, ದ್ಯಾಮವ್ವನಹಳ್ಳಿ ಕೆರೆ, ಕಲ್ಲಹಳ್ಳಿ, ಮಧುರೆಕೆರೆ, ರಾಣಿಕೆರೆ
ಮೂಲಕ ಹರಿದು ಹೋಗುತ್ತಿದೆ. ಈ ಕೆರೆಗಳನ್ನು ಅವಲಂಬಿಸಿರುವ ಕೊಳವೆಬಾವಿಗಳ ಅಂತರ್ಜಲ ಕೂಡ ಹಾಳಾಗುತ್ತಿದೆ.

ನೀರು ಕಲುಷಿತಗೊಳ್ಳುತ್ತಿರುವುದರಿಂದ ಜನರಿಗೆ ಮಾತ್ರ ತೊಂದರೆಯಾಗುತ್ತಿಲ್ಲ. ನೀರಿನಲ್ಲಿರುವ ಜಲಚರಗಳು ಸಂಕಷ್ಟಕ್ಕೆ ಸಿಲುಕಿವೆ. ಕಸದ ರಾಶಿಯಿಂದ ಲವಣಾಂಶಗಳು ಹೆಚ್ಚಾಗಿ ನೀರು ಗಟ್ಟಿಯಾಗಿ ಗಾಳಿಯಾಡದಿದ್ದರೆ ಮೀನುಗಳು ಸಾಯುವ ಸಾಧ್ಯತೆ ಇದೆ.

ಪಿಳ್ಳೇಕೆರೆನಹಳ್ಳಿ ಶಾಲೆಗೆ ಸೊಳ್ಳೆ ಕಾಟ: ಇಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಕೆರೆ ಹೊಂದಿಕೊಂಡಿದ್ದು, ಗಾಳಿ ಬಂದಾಗ ವಿಪರೀತ ವಾಸನೆ ಬರುತ್ತಿದೆ. ಶಿಕ್ಷಕರು, ಮಕ್ಕಳು ಅನಿವಾರ್ಯವಾಗಿ ಈ ವಾಸನೆ ಸಹಿಸಿಕೊಂಡೇ ಪಾಠ ಮಾಡುತ್ತಿದ್ದಾರೆ. ಜತೆಗೆ ವಿಪರೀತ ಸೊಳ್ಳೆಗಳ ಕಾಟವಿದ್ದು, ಶಾಲೆಯಲ್ಲಿ ಸೊಳ್ಳೆ ಬತ್ತಿ ಬಳಸಲಾಗುತ್ತಿದೆ. ಈ ಕಾರಣಕ್ಕೆ ಶಾಲೆಯ ಕಾಂಪೌಂಡ್‌ ಎತ್ತರಿಸಬೇಕು ಎಂದು ಒತ್ತಾಯವೂ ಕೇಳಿ ಬಂದಿದೆ.

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.