Udayavni Special

ಚಿತ್ರದುರ್ಗ ನಗರಸಭೆಯಲ್ಲಿನ್ನು ಕಮಲದ್ದೇ ಆಡಳಿತ

ಇದೇ ಮೊದಲ ಬಾರಿ ಬಿಜೆಪಿಗೆ ಬಹುಮತ-ಕಾಂಗ್ರೆಸ್‌ನ ನಾಲ್ವರು, ಜೆಡಿಎಸ್‌ನ ಇಬ್ಬರು, ನಾಲ್ವರು ಪಕ್ಷೇತರರಿಂದಲೂ ಬೆಂಬಲ

Team Udayavani, Nov 1, 2020, 8:06 PM IST

cd-tdy-1

ಚಿತ್ರದುರ್ಗ: ಸುದೀರ್ಘ‌ ಸಮಯದ ನಂತರ ನಗರಸಭೆಗೆ ಜನಪ್ರತಿನಿಧಿಗಳು ಆಗಮಿಸಲು ವೇದಿಕೆ ಸಿದ್ಧವಾಗಿದ್ದು, ಭಾನುವಾರ ನಡೆಯುವ ಚುನಾವಣೆ ಮೂಲಕ ನೂತನವಾಗಿ ಆಯ್ಕೆಯಾದ ಜನಪ್ರತಿನಿ ಧಿಗಳು ಪದಗ್ರಹಣ ಮಾಡಲಿದ್ದಾರೆ.

ಇದರೊಟ್ಟಿಗೆ ಐತಿಹಾಸಿಕ ಚಿತ್ರದುರ್ಗ ನಗರಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವ ಸಿಗುತ್ತಿದೆ. ಈ ನಿಟ್ಟಿನಲ್ಲಿ ಶನಿವಾರ ಶಾಸಕಜಿ.ಎಚ್‌. ತಿಪ್ಪಾರೆಡ್ಡಿ ಅವರ ನಿವಾಸದ ಪಕ್ಕದ ಮಿಲ್‌ ಆವರಣದಲ್ಲಿ ನಗರಸಭೆ ಸದಸ್ಯರ ಸಭೆ ನಡೆಯಿತು. ನಗರಸಭೆಯ ಒಟ್ಟು 35ಸದಸ್ಯರ ಪೈಕಿ ಬಿಜೆಪಿ 17, ಕಾಂಗ್ರೆಸ್‌ 5, ಜೆಡಿಎಸ್‌ 6 ಹಾಗೂ ಪಕ್ಷೇತರ 7 ಸದಸ್ಯರು ಆಯ್ಕೆಯಾಗಿದ್ದಾರೆ. ಈಗ ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ-ಎ ಗೆ ಮೀಸಲು ನಿಗದಿಯಾಗಿದೆ.

ಬಿಜೆಪಿ 17 ಸ್ಥಾನಗಳನ್ನು ಗೆದ್ದು ಅಧಿಕಾರದ ಸನಿಹದಲ್ಲಿದ್ದು, ಭಾನುವಾರ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್‌ನ ನಾಲ್ವರು, ಜೆಡಿಎಸ್‌ನ ಇಬ್ಬರು ಹಾಗೂ ನಾಲ್ವರುಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.ಇದರಿಂದಾಗಿ ಬಿಜೆಪಿ ಸಂಖ್ಯಾಬಲ 27ಕ್ಕೆ ತಲುಪಿದೆ. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಬುಟ್ಟಿಯಲ್ಲಿ 29 ಮತಗಳು ಸೇರಿವೆ.

ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷ ರಾಜಕೀಯ. ನಂತರ ನಗರದ ಅಭಿವೃದ್ದಿಗೆ ಎಲ್ಲರೂ ಒಂದಾಗಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಬಿಟ್ಟು ಒಟ್ಟಾಗಿ ಮಾದರಿ ನಗರಸಭೆನ್ನಾಗಿ ಮಾಡಲು ಶ್ರಮಿಸುವಂತೆ ಕರೆ ನೀಡಿದರು. ಚಿತ್ರದುರ್ಗ ನಗರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ಸದಸ್ಯರುಗಳು ಸಹಕಾರ ನೀಡಬೇಕು. ಕಟ್ಟಡಗಳು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಸದಸ್ಯರು ಮುಂದಾಗಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯರಾದ ಸರ್ದಾರ್‌ ಅಹಮ್ಮದ್‌ ಪಾಷ, ಡಿ. ಮಲ್ಲಿಕಾರ್ಜುನ್‌,ಫಕ್ರುದ್ದೀನ್‌, ವೆಂಕಟೇಶ್‌ ಹಾಗೂ ಪಕ್ಷೇತರ ಸದಸ್ಯರು, ಬಿಜೆಪಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Supreme-court

ತನಿಖಾ ಸಂಸ್ಥೆ ಕಚೇರಿಗಳಲ್ಲಿ ಸಿಸಿ ಕೆಮರಾ: ಸು. ಕೋರ್ಟ್‌

ಮೂರನೇ ಬಾರಿ ಕೋವಿಡ್ ಗೆದ್ದ ಇಟಲಿಯ 101ರ ಅಜ್ಜಿ

ಮೂರನೇ ಬಾರಿ ಕೋವಿಡ್ ಗೆದ್ದ ಇಟಲಿಯ 101ರ ಅಜ್ಜಿ

TWIT

ನಕಲಿ ಟ್ವೀಟ್‌ಗಳಿಗೆ ಲೇಬಲ್‌!

IIT

ಐಐಟಿ ವಿದ್ಯಾರ್ಥಿಗಳಿಗೆ ಸಿಕ್ಕಿತು ಕೈತುಂಬ ವೇತನದ ಕೆಲಸ

ಗಣರಾಜ್ಯ ದಿನಕ್ಕೆ ಬೋರಿಸ್‌ ಜಾನ್ಸನ್‌ ಅತಿಥಿ

ಗಣರಾಜ್ಯ ದಿನಕ್ಕೆ ಬೋರಿಸ್‌ ಜಾನ್ಸನ್‌ ಅತಿಥಿ

ನನ್ನನ್ನು ನಿಂದಿಸಿದರೆ ವಾಟಾಳಗೆ ಸದನದ ಛೀಮಾರಿ- ಯತ್ನಾಳ

ನನ್ನನ್ನು ನಿಂದಿಸಿದರೆ ವಾಟಾಳಗೆ ಸದನದ ಛೀಮಾರಿ- ಯತ್ನಾಳ

ಸುಶಾಂತ್‌-ರಿಯಾ: ಜಾಲತಾಣದಲ್ಲಿ ಅತಿಹೆಚ್ಚು ಸರ್ಚ್‌ ಆದ ಹೆಸರು; ಯಾಹೂ ವರದಿಯಲ್ಲಿ ಉಲ್ಲೇಖ

ಸುಶಾಂತ್‌-ರಿಯಾ: ಜಾಲತಾಣದಲ್ಲಿ ಅತಿಹೆಚ್ಚು ಸರ್ಚ್‌ ಆದ ಹೆಸರು; ಯಾಹೂ ವರದಿಯಲ್ಲಿ ಉಲ್ಲೇಖ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಿ ಮೋದಿ ರೈತರ ಕ್ಷಮೆಯಾಚಿಸಲಿ

ಪ್ರಧಾನಿ ಮೋದಿ ರೈತರ ಕ್ಷಮೆಯಾಚಿಸಲಿ

200 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ  ನಿರ್ಮಾಣ: ಚಂದ್ರಪ್ಪ

200 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ: ಚಂದ್ರಪ್ಪ

ತಂಬಾಕು ನಿಷೇಧ ನಾಮಫಲಕ ಕಡ್ಡಾಯ

ತಂಬಾಕು ನಿಷೇಧ ನಾಮಫಲಕ ಕಡ್ಡಾಯ

ಲಂಚ ಸ್ವೀಕಾರ : ಮೊಳಕಾಲ್ಮೂರು ತಹಶಿಲ್ದಾರ್ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಮೊಳಕಾಲ್ಮೂರು ತಹಶಿಲ್ದಾರ್ ಎಸಿಬಿ ಬಲೆಗೆ

ಜಯಣ್ಣ-ಒಡೆಯರ್‌ ಹೋರಾಟ ಮಾದರಿ: ಆಂಜನೇಯ

ಜಯಣ್ಣ-ಒಡೆಯರ್‌ ಹೋರಾಟ ಮಾದರಿ: ಆಂಜನೇಯ

MUST WATCH

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

udayavani youtube

ಮಂಗಳೂರು ಬೋಟ್ ದುರಂತ: ನಾಲ್ವರು ಪತ್ತೆಯಾಗುವವರೆಗೂ ಮೀನುಗಾರಿಕಾ ಬಂದರು ಬಂದ್ ಮಾಡಿ ಮುಷ್ಕರ

ಹೊಸ ಸೇರ್ಪಡೆ

Supreme-court

ತನಿಖಾ ಸಂಸ್ಥೆ ಕಚೇರಿಗಳಲ್ಲಿ ಸಿಸಿ ಕೆಮರಾ: ಸು. ಕೋರ್ಟ್‌

ಮೂರನೇ ಬಾರಿ ಕೋವಿಡ್ ಗೆದ್ದ ಇಟಲಿಯ 101ರ ಅಜ್ಜಿ

ಮೂರನೇ ಬಾರಿ ಕೋವಿಡ್ ಗೆದ್ದ ಇಟಲಿಯ 101ರ ಅಜ್ಜಿ

TWIT

ನಕಲಿ ಟ್ವೀಟ್‌ಗಳಿಗೆ ಲೇಬಲ್‌!

IIT

ಐಐಟಿ ವಿದ್ಯಾರ್ಥಿಗಳಿಗೆ ಸಿಕ್ಕಿತು ಕೈತುಂಬ ವೇತನದ ಕೆಲಸ

ಏಡ್ಸ್‌ ದಿನಾಚರಣೆ : ಕಿರುಚಿತ್ರ ಬಿಡುಗಡೆ

ಏಡ್ಸ್‌ ದಿನಾಚರಣೆ : ಕಿರುಚಿತ್ರ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.