ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಕೊಡಿ

ಖಾಸಗಿ ಆಸ್ಪತ್ರೆ ವೈದ್ಯರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಪಾಲಾಕ್ಷ ಕಟ್ಟುನಿಟ್ಟಿನ ಸೂಚನೆ

Team Udayavani, Feb 5, 2020, 1:17 PM IST

5-Febrauary-11

ಚಳ್ಳಕೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಸಂಪೂರ್ಣ ಮಾಹಿತಿಯನ್ನು ಪ್ರತಿನಿತ್ಯ ದಾಖಲಿಸುವಂತೆ ಖಾಸಗಿ ಆಸ್ಪತ್ರೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಹಾಗೂ ಆರ್ಥಿಕ ಹೊರೆಯನ್ನುಂಟು ಮಾಡಬಾರದೆಂದು ನಿರ್ದೇಶನವನ್ನೂ ನೀಡಿರುವುದಾಗಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್‌. ಪಾಲಾಕ್ಷ ತಿಳಿಸಿದರು.

ಇಲ್ಲಿನ ತ್ಯಾಗರಾಜನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ದಾಖಲಾತಿಗಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಮೊಳಕಾಲ್ಮೂರು ತಾಲೂಕಿನ ಉಡೇವು ಗ್ರಾಮದ ಅರ್ಚನ ಎಂಬ ಬಾಲಕಿ ಕಳೆದ ಸೋಮವಾರ ಇದೇ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ವಾಪಸ್‌ ಹೋಗುವಾಗ ಕೈಗೆ ಹಾಕಿದ್ದ ಗ್ಲುಕೋಸ್‌ ಬಾಟಲಿ ಸಹಿತ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಳು. ಇದನ್ನು ಸಾರ್ವಜನಿಕರು ಡಿಎಚ್‌ಒ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲೇ ಇದ್ದ ಬಾಲಕಿ ಅರ್ಚನ ಮತ್ತು ತಾಯಿ ಓಬಮ್ಮ, ನಮ್ಮ ಊರಿಗೆ ಸಂಜೆ ವೇಳೆ ಒಂದೇ ಬಸ್‌ ಇದೆ. ಗ್ಲುಕೋಸ್‌ ಬಾಟಲಿಯನ್ನು ತೆಗೆಸಿಕೊಂಡು ಹೋಗಲು ವೈದ್ಯರು ತಿಳಿಸಿದ್ದರು. ಆದರೆ ಬಸ್‌ ಹಿಡಿಯುವ ಧಾವಂತದಲ್ಲಿ ಬಸ್‌ ನಿಲ್ದಾಣಕ್ಕೆ ಹೋಗಿದ್ದೆವು. ಗ್ಲುಕೋಸ್‌ ಬಾಟಲಿಯೊಂದಿಗೆ ಬಸ್‌ ನಿಲ್ದಾಣದಲ್ಲಿ ನಿಂತಿದ್ದಾಗ ಯಾರೋ ಈ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆಯೇ ಹೊರತು ಇದರಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿಲ್ಲ ಎಂದರು.

ನಾವು ಹಲವಾರು ವರ್ಷಗಳಿಂದ ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಯಾವುದೇ ಸಂದರ್ಭದಲ್ಲಿ ಆಸ್ಪತ್ರೆಯವರು ನಮ್ಮ ಮೇಲೆ ಒತ್ತಡ ಹೇರಿಲ್ಲ. ನಾವು ಮೂವರು ಹೊರ ರೋಗಿಗಳಾ ಚಿಕಿತ್ಸೆ ಪಡೆದಿದ್ದು, ಮಗಳಿಗೆ ಟೈಫಾಯ್ಡ ಇತ್ತು. ನಾಳೆ ಬನ್ನಿ ಎಂದು ಡಾಕ್ಟರ್‌ ಹೇಳಿದ್ದರು ಎಂದು ಅರ್ಚನಳ ತಾಯಿ ಓಬಮ್ಮ ತಿಳಿಸಿದರು.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಗ್ರಾಮಾಂತರ ಪ್ರದೇಶದ ರೋಗಿಗಳಿಗೆ ಅನಗತ್ಯವಾಗಿ ವಿಳಂಬ ಮಾಡದೆ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಚಿಕಿತ್ಸೆ ಅಥವಾ ಹೆಚ್ಚು ಹಣ ಪಡೆದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸಾರ್ವಜನಿಕರಿಂದ ದೂರು ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.

ಟಾಪ್ ನ್ಯೂಸ್

2shasti

ನಾಗ‌ ಶ್ರೇಷ್ಠ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಇಂದು ಚಂಪಾ ಷಷ್ಠೀ

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಸಕಲೇಶಪುರದಲ್ಲೂ ನಡೆದಿತ್ತು ಹೆಲಿಕಾಪ್ಟರ್‌ ದುರಂತ

29 ವರ್ಷಗಳ ಹಿಂದೆ ಸಕಲೇಶಪುರದಲ್ಲೂ ಸೇನಾ ಹೆಲಿಕಾಪ್ಟರ್ ಪತನ

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

ತಮಿಳುನಾಡಿನಲ್ಲಿ ಸೌರ ಘಟಕ ಸ್ಥಾಪನೆಗೆ ಅಮೆರಿಕ ನೆರವು

ತಮಿಳುನಾಡಿನಲ್ಲಿ ಸೌರ ಘಟಕ ಸ್ಥಾಪನೆಗೆ ಅಮೆರಿಕ ನೆರವು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chitradurga news

ಹಣಕಾಸು ವಿವಾದ ಕೊಲೆಯಲ್ಲಿ ಅಂತ್ಯ

chitradurga news

ಸಂಪತ್ತಿನಿಂದ ನೆಮ್ಮದಿ ಸಿಗಲ್ಲ: ಪಂಡಿತಾರಾಧ್ಯ ಶ್ರೀ

chitradurga news

ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಹಣ ನೀಡಿದ ಮತದಾರರು!

chitradurga news

ನಿಗಮದ ಹೆಸರು ಬದಲಾಯಿಸಿದ್ರೆ ಹೋರಾಟ

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

2shasti

ನಾಗ‌ ಶ್ರೇಷ್ಠ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಇಂದು ಚಂಪಾ ಷಷ್ಠೀ

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಎಂಐ-17ವಿ5 ದಾರಿ ತಪ್ಪಿದ ಶೂರ; ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು?

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಸಕಲೇಶಪುರದಲ್ಲೂ ನಡೆದಿತ್ತು ಹೆಲಿಕಾಪ್ಟರ್‌ ದುರಂತ

29 ವರ್ಷಗಳ ಹಿಂದೆ ಸಕಲೇಶಪುರದಲ್ಲೂ ಸೇನಾ ಹೆಲಿಕಾಪ್ಟರ್ ಪತನ

1bulls

ಚರಂಡಿಗೆ ಬಿದ್ದು ಎತ್ತು ಸಾವು: ಕಂಗಾಲಾದ ರೈತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.