Udayavni Special

ಕಾಲ ಧರ್ಮವೇ ಎಲ್ಲದಕ್ಕಿಂತ ಮಿಗಿಲಾದುದು

Team Udayavani, May 6, 2021, 10:15 PM IST

6-13

ಚಿತ್ರದುರ್ಗ: ಜೀವ, ಜೀವನ ಮತ್ತು ಜಗತ್ತು ಅತ್ಯಂತ ಸಂದಿಗ್ಧ, ಸಂಕೀರ್ಣ ಸ್ಥಿತಿ ತಲುಪುತ್ತಿದೆ. ಕಣ್ಣಿಗೆ ಕಾಣದಿರುವ ವೈರಾಣು ಜಗತ್ತಿನಲ್ಲಿ ಎಲ್ಲರ ಬದುಕಿನಲ್ಲಿ ತಳಮಳ ಉಂಟುಮಾಡಿದೆ. ಯಾವಾಗ, ಯಾರಿಗೆ ಬರುತ್ತದೆಯೋ ಹೇಳಲು ಬರುವುದಿಲ್ಲ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತನ್ನು ಮೀರಿದ ಧರ್ಮ ಒಂದಿದೆ. ಅದು ಕಾಲ ಧರ್ಮ. ಮಾನವ ಬದುಕಿಗೆ ಹಲವಾರು ಕಟ್ಟುಪಾಡುಗಳಿವೆ. ಮಾನವನ ಬದುಕಿಗೆ ಕೊರೊನಾ ಎನ್ನುವುದು ಕಟ್ಟುಪಾಡಿಗೆ ಒಳಗಾಗುವಂತೆ ಮಾಡುತ್ತಿದೆ. ಇದು ಯಾವಾಗ ಬರುತ್ತದೆ ಎಂದು ಗೊತ್ತಿರಲಿಲ್ಲ. ಜನನ ಹೇಳಿ ಕೇಳಿ ಬರುತ್ತದೆ, ಆದರೆ ಮರಣ ಯಾರನ್ನೂ ಹೇಳುವುದಿಲ್ಲ, ಕೇಳುವುದಿಲ್ಲ. ಜಗತ್ತಿನಲ್ಲಿ ಎಲ್ಲ ಜೀವರಾಶಿಗಳು ಸಂತಾನ ಉತ್ಪತ್ತಿ ಮಾಡುತ್ತವೆ. ಸಂತಾನದ ಅಭಿವೃದ್ಧಿಗಾಗಿ ಕಲ್ಯಾಣದ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಜನರಿಗೆ ಅನುಕೂಲವಾಗಲೆಂದು ಸರ್ವ ಧರ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಆರಂಭಿಸ ಲಾಗಿದೆ. ಮುರುಘಾ ಮಠದ ಜನಪ್ರಿಯ ಕಾರ್ಯ ಕ್ರಮಗಳಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ. ಕಾರಣ ಇದಕ್ಕೆ ಒಂದು ಬದ್ಧತೆ ಮತ್ತು ಪ್ರಬುದ್ಧತೆ ಇದೆ. ಇದೊಂದು ತಪೋಭೂಮಿ ಎಂದು ಬಣ್ಣಿಸಿದರು.

ಕೊರೊನಾ ಕಾಲಘಟ್ಟದಲ್ಲಿ ಎಲ್ಲರೂ ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಬಳಸಿ ಸುರಕ್ಷಿತವಾಗಿರಬೇಕು. ಕೊರೊನಾ ಕಾಯಿಲೆ ಬಗ್ಗೆ ಎಚ್ಚರವಿರಲಿ, ಭಯ ಬೇಡ ಎಂದು ತಿಳಿಸಿದರು. ಹೆಬ್ಟಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ 31 ವರ್ಷಗಳಿಂದ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ.

ಮನೆಯಲ್ಲಿ ಮದ್ದು ಮಾಡಿಕೊಂಡು ಕೊರೊನಾ ರೋಗ ಬಾರದಂತೆ ನೋಡಿಕೊಳ್ಳಬೇಕು. ಅರಿಶಿನ, ಶುಂಠಿ, ಕಾಳುಮೆಣಸು, ಅಮೃತಬಳ್ಳಿ, ತುಳಸಿ ಮೊದಲಾದವುಗಳನ್ನು ಸೇವಿಸಬೇಕು. ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ರೋಗದಿಂದ ನಾವು ದೂರವಿರಬೇಕು. ನಮ್ಮ ಹಿರಿಯರು ಇಂತಹ ಗಿಡಮೂಲಿಕೆಗಳ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂದರು.

ಕೋವಿಡ್‌ ನಿಯಮ ಪಾಲಿಸಿಕೊಂಡು 12 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿದರು.

ಟಾಪ್ ನ್ಯೂಸ್

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-18

ವೈದ್ಯರ ಮೇಲೆ ದೈಹಿಕ ಹಲ್ಲೆ ತಡೆಗೆ ಪ್ರಧಾನಿಗೆ ಪತ್ರ

19-17

ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ

ಪಲ್ಸ್‌ ಪೋಲಿಯೋ ಮಾದರಿಯಲ್ಲಿ ಲಸಿಕಾ ಸತ್ರಕ್ಕೆ ಸಿದ್ಧತೆ

ಪಲ್ಸ್‌ ಪೋಲಿಯೋ ಮಾದರಿಯಲ್ಲಿ ಲಸಿಕಾ ಸತ್ರಕ್ಕೆ ಸಿದ್ಧತೆ

18-19

ಸಂಪರ್ಕಿತರ ಪತ್ತೆ ಹಚ್ಚಿ ಲಸಿಕೆ ನೀಡಿ: ರಘುಮೂರ್ತಿ

18-18

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

desiswara

ಸ್ನೇಹಿತನನ್ನು ರಕ್ಷಿಸಿದ  ಬುದ್ಧಿವಂತ ಮೊಲ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

The floating library

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

desiswara

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.