Udayavni Special

ವೈದ್ಯರ ಮೇಲೆ ದೈಹಿಕ ಹಲ್ಲೆ ತಡೆಗೆ ಪ್ರಧಾನಿಗೆ ಪತ್ರ


Team Udayavani, Jun 19, 2021, 9:33 PM IST

19-18

ಚಿತ್ರದುರ್ಗ: ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಹಲ್ಲೆಗಳನ್ನು ತಡೆಯುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯಿಂದ ಶುಕ್ರವಾರ ಪತ್ರ ಬರೆಯಲಾಗಿದೆ.

ನಗರದ ಐಎಂಎ ಸಭಾಂಗಣದಲ್ಲಿ ಸಭೆ ನಡೆಸಿದ ವೈದ್ಯರು, ಬಹಳ ದಿನಗಳಿಂದ ಬಾಕಿ ಉಳಿದಿರುವ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆಧುನಿಕ ಔಷಧ ಮತ್ತು ಲಸಿಕೆಯ ವಿರುದ್ಧ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿ ಮಾಡುವ ಮೂಲಕ ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳ (ಹಿಂಸೆ ಮತ್ತು ಆಸ್ತಿಗೆ ಹಾನಿ ನಿಷೇಧ) ಮಸೂದೆ, ಕರ್ತವ್ಯ ನಿರತ ವೈದ್ಯರು ಮತ್ತು ಇತರ ಆರೋಗ್ಯ ಆರೈಕೆ ವೃತ್ತಿಪರರ ಮೇಲೆ ಹಲ್ಲೆ ಮಾಡುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬೇಕು. ಶಿಕ್ಷಿಸಲು ಪ್ರಯತ್ನಿಸುವ 2019-ಕರಡು ಕಾನೂನಿನ ಬಗ್ಗೆ ಅಂತರ ಸಚಿವಾಲಯದ ಸಮಾಲೋಚನೆ ವೇಳೆ ಗೃಹ ಸಚಿವಾಲಯ ವಜಾಗೊಳಿಸಿದೆ.

ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷಿಸಬೇಕು. ಇದರಿಂದ ಯಾವುದೇ ಆರೋಗ್ಯ ರಕ್ಷಣಾ ವೃತ್ತಿಪರರ ಮೇಲೆ ದಾಳಿ ಮಾಡುವ ಸಮಾಜವಿರೋ ಧಿ ಶಕ್ತಿಗಳಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು.

ಕೋವಿಡ್‌-19 ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರನ್ನು ಕೋವಿಡ್‌ ಹುತಾತ್ಮರೆಂದು ಗುರುತಿಸಬೇಕು. ಅವರ ಕುಟುಂಬಗಳಿಗೆ ಸರ್ಕಾರ ಸೂಕ್ತ ಬೆಂಬಲ ನೀಡಬೇಕು. ಅಂತಹ ಕುಟುಂಬಗಳಿಗೆ ವಿಮಾ ಪ್ರಯೋಜನಗಳನ್ನು ವಿಸ್ತರಿಸುತ್ತಿರುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ ಸ್ವಾಗತಾರ್ಹ. ಆದರೂ, ಯೋಜನೆಯ ಅನುಷ್ಠಾನದಲ್ಲಿರುವ ಅಡೆತಡೆಗಳಿಂದಾಗಿ, ಮೊದಲ ಅಲೆಯಲ್ಲಿ ಪ್ರಾಣ ಕಳೆದುಕೊಂಡ 754 ವೈದ್ಯರಲ್ಲಿ, ಕೇವಲ 168 ವೈದ್ಯರ ಕುಟುಂಬಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ.

ಎಲ್ಲ ಹುತಾತ್ಮರನ್ನು ಗುರುತಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಆರೋಗ್ಯ ಗುಪ್ತಚರ ಬ್ಯೂರೋ (ಸಿಬಿಎಚ್‌ಐ) ಮೂಲಕ ವ್ಯವಸ್ಥೆ ರೂಪಿಸಿ, ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಲಸಿಕೆಗಳನ್ನು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ತಲುಪಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಾರ್ವತ್ರಿಕ ಉಚಿತ ಲಸಿಕೆಯನ್ನು ಉತ್ತೇಜಿಸಬೇಕು.

ಶ್ವಾಸಕೋಶದ ಫೈಬ್ರೋಸಿಸ್‌ನ ಕೋವಿಡ್‌-19 ನಂತರದ ತೊಂದರೆಗಳು, ಹೆಚ್ಚಿದ ಥ್ರೋಂಬೋಟಿಕ್‌ ಘಟನೆಗಳು ಮತ್ತು ಶಿಲೀಂಧ್ರ ಸೋಂಕುಗಳು ಹೆಚ್ಚುತ್ತಿವೆ ಮತ್ತು ಅದಕ್ಕಾಗಿ ನಾವು ಸಿದ್ಧರಾಗಬೇಕಾಗಿದೆ.

ಮ್ಯೂಕಾರ್ಮೈಕೋಸಿಸ್‌ ಶಿಲೀಂಧ್ರ ಕಾಯಿಲೆಗೆ ಅಗತ್ಯವಿರುವ ಔಷ ಧಗಳು ಸುಲಭವಾಗಿ ಲಭ್ಯವಾಗುತ್ತಿಲ್ಲ. ಬ್ಲಾಕ್‌ ಫಂಗಸ್‌ಗೆ ಬೇಕಾದ ಔಷ ಧಗಳನ್ನು ಆಮದು ಮಾಡಿಕೊಳ್ಳಲು ಮತ್ತು ಏಕಕಾಲದಲ್ಲಿ ದೇಶೀಯ ಉತ್ಪಾದನೆ ಹೆಚ್ಚಿಸಲು ಪ್ರಧಾನಿಯವರು ತೆಗೆದುಕೊಂಡ ನಿರ್ಧಾರವನ್ನು ಐಎಂಎ ಸ್ವಾಗತಿಸುತ್ತದೆ ಎಂದು ತಿಳಿಸಿದರು.

ಐಎಂಎ ಜಿಲ್ಲಾಧ್ಯಕ್ಷ ಡಾ.ಸಾಲಿ ಮಂಜಪ್ಪ, ಡಾ.ಬಿ.ಎನ್‌. ರವಿಕುಮಾರ್‌, ಡಾ. ಪಾಲಾಕ್ಷಪ್ಪ, ಡಾ. ತೋಯಿಜಾಕ್ಷಿಬಾಯಿ, ಡಾ.ಪಿ.ವಿ.ಶ್ರೀಧರಮೂರ್ತಿ, ಡಾ.ರವೀಂದ್ರ, ಡಾ. ರಾಜೇಶ್‌, ಡಾ.ತಿಮ್ಮಾರೆಡ್ಡಿ, ಡಾ. ಮೋಹನ್‌ಕುಮಾರ್‌, ಡಾ.ಅನಿಲ್‌ಕುಮಾರ್‌, ಡಾ.ಲಕ್ಷ್ಮಣ, ಡಾ.ದೀಪಕ್‌, ಡಾ. ಯೋಗೇಂದ್ರ, ವಿಜಯಕುಮಾರ್‌, ಶಿವಕುಮಾರ್‌ ಇತರರಿದ್ದರು.

ಟಾಪ್ ನ್ಯೂಸ್

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

fgdfgergr

ಕಿರುತೆರೆ ನಟನಿಂದ ಯುವತಿಗೆ ಮೋಸ: ಕೈಗೆ ಮಗು ಕೊಟ್ಟು ಪರಾರಿಯಾದ ‘ವಿಲನ್’

3ನೇ ಅಲೆ ಭೀತಿ: ಆಗಸ್ಟ್ 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧ ವಿಸ್ತರಣೆ

3ನೇ ಅಲೆ ಭೀತಿ: ಆಗಸ್ಟ್ 31ರವರೆಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧ ವಿಸ್ತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

29-17

ಕೋಟೆನಾಡಿಗೆ ದಕ್ಕೀತೇ ವಿಶೇಷ ನೆರವು

28-14

ಕಲ್ಲಿನ ಕೋಟೆಯನ್ನು ಹಸಿರು ನಾಡಾಗಿಸಿ

27-12

ಬಿಂದುಮಾಧವರಲ್ಲಿತ್ತು ಸಮತ್ವ ಮನೋಭಾವ

25-12

ಡಿಕೆಶಿ- ಸಿದ್ದರಾಮಯ್ಯರಿಂದ ಕಾಂಗ್ರೆಸ್ ಅವನತಿ

MUST WATCH

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

ಹೊಸ ಸೇರ್ಪಡೆ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

ಕೃಷಿಹೊಂಡ, ಗೋಕಟ್ಟೆಯಿಂದ ನೀರು ಸಂರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.