ಸಂತ ಪರಂಪರೆಯಿಂದ ಸಮಾಜ ರಕ್ಷಣೆ


Team Udayavani, Aug 27, 2021, 12:45 PM IST

27-9

ಚಿತ್ರದುರ್ಗ: ಭಾರತದ ನೆಲಕ್ಕೆ ಸಂತರು, ಸ್ವಾಮಿಗಳು, ಅವಿಭಾಜ್ಯ ಅಂಗ ‌. ಸ್ವಾಮಿಗಳು ಇಲ್ಲದಿದ್ದರೆ ಸಮಾಜ ಅಸ್ತವ್ಯಸ್ತವಾಗುತ್ತಿತ್ತು. ಸಮಾಜ ದುರ್ಬಲ ಆಗಬಾರದು, ದುರ್ಮಾರ್ಗದ ಕಡೆಗೆ ಹೋಗಬಾರದೆಂದು ಶತಮಾನಗಳಿಂದ ಸಂತ ಪರಂಪರೆ ಸಮಾಜವನ್ನು ಕಾಯುವ ಕೆಲಸ ಮಾಡುತ್ತಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಟೀಚರ್ಸ್‌ ಕಾಲೋನಿಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್‌ ನಿವಾಸದ ಬಳಿ ನಡೆದ “ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂತರು ಸಾತ್ವಿಕರು ಸ್ವಾಮಿಗಳು ಮಠಾಧೀಶರು ಸಾತ್ವಿಕತೆಯ ಹಿನ್ನೆಲೆಯಲ್ಲಿ ಸಮಾಜಕ್ಕೆ ಬದುಕನ್ನು ಕಟ್ಟಿ ಕೊಡುತ್ತಾರೆ. ಜನರನ್ನು ಅಕ್ಷರ ಸಂಸ್ಕೃತಿಗೆ ಒಳಪಡಿಸಿದ್ದು ಮಠ ಸಂಸ್ಕೃತಿ. ಸಂತರಿಗೆ ತಮ್ಮದೇ ಆದ ಹೊಣೆಗಾರಿಕೆ ಇದ್ದು, ಅವುಗಳ ಜೊತೆ ಸಾಗಬೇಕು ಎಂದರು. ಮಾನವ ಬದುಕಿನಲ್ಲಿ ಕಷ್ಟ ನಷ್ಟ ಎರಡೂ ಇದೆ. ಜನರು ಕಷ್ಟಗಳಲ್ಲಿ ಕಣ್ಣೀರು ಹಾಕುವಾಗ ಸಂತರು, ಶರಣರು, ಮೌಲ್ವಿಗಳು, ಬಿಕ್ಕುಗಳು, ಜೈನ ಮುನಿಗಳು, ಪಾದ್ರಿಗಳು, ಸಿಖ್‌ ಧರ್ಮ¨ ‌ ಅನುಯಾಯಿಗಳು ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಸುಖವನ್ನು ಅನುಭವಿಸಲು ಸಾವಿರಾರು ಜನ ‌ರಿದ್ದಾರೆ, ಆದರೆ ದುಃಖದ ಸಂದರ್ಭದಲ್ಲಿ ದೂರ ‌ ಸರಿಯುತ್ತಾರೆ. ಸಮಾಜಸೇವೆ ಮಾಡುವ ಉದ್ದೇಶದಿಂದ ಧಾರ್ಮಿಕ ಕೇಂದ್ರಗಳಿವೆ. ಸಂಕಷ್ಟದ ಸಂದರ್ಭದಲ್ಲಿ ನಾವು ಸೇವೆ ಮಾಡಬೇಕು. ಪ್ರತಿಯೊಬ್ಬರಿಗೂ ತಮ್ಮದೇ ಆದ ಗುರಿ ಇರಬೇಕು. ಸಮಾಜ ದುರ್ಬಲ ಆಗಬಾರದು ಮತ್ತು ದುರ್ಮಾರ್ಗ¨ ‌ ಕಡೆಗೂ ಹೋಗಬಾರದು ಎಂದು ತಿಳಿಸಿದರು.

ಹೆಬ್ಟಾಳದ ಶ್ರೀ ಮಹಾಂತ ರುದ್ರಸ್ವಾಮಿಗಳು, ನಾಯಕನಹಟ್ಟಿಯ ಶ್ರೀ ತಿಪ್ಪೆ ರುದ್ರ ಸ್ವಾಮಿಗಳು, ಶ್ರೀ ಜಯವಿಭವ ಸ್ವಾಮಿಗಳು ಅನೇಕ ರೀತಿಯ ದಾಸೋಹ ಪರಂಪರೆಯನ್ನು ಮಾಡಿದ್ದಾರೆ. ಕಟ್ಟೆ ಕಟ್ಟೆಗಳನ್ನು ಕಟ್ಟಿಸಿದರು. ಸಂಕಷ್ಟದಲ್ಲಿರುವವರಿಗೆ ಗಂಜಿ ಕೇಂದ್ರ ಸ್ಥಾಪಿಸಿದರು.

1962ರಲ್ಲಿ ಚೀನಾ ಮತ್ತು ಭಾರತ ಯುದ œವಾದಾಗ ಶ್ರೀಮಠದಲ್ಲಿದ್ದ ಬಂಗಾರದ ಕಿರೀಟವನ್ನು ಭಾರತ ಸರ್ಕಾರಕ್ಕೆ ದಾನ ಕೊಟ್ಟ ಪೂಜ್ಯರು ಜಯವಿಭವ ಸ್ವಾಮಿಗಳು ಎಂದು ಸ್ಮರಿಸಿದರು. ಹಾವೇರಿ ಜಿಲ್ಲೆ ಅಗಡಿಯ ಪ್ರಭುಸ್ವಾಮಿ ಮಠದ ಶ್ರೀ ಗುರುಸಿದ್ಧ ಸ್ವಾಮಿಗಳುಮಾತನಾಡಿ, ಸಂತರು ತಾವು ನೋವನ್ನು ಉಂಡು ಸಮಾಜಕ್ಕೆ ಒಳಿತನ್ನು ಮಾಡುತ್ತಾರೆ. 12ನೇ ಶ‌ತಮಾನದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಬಸವಾದಿ ‌ರಣರು ಮೇಲೆತ್ತುವ ಕೆಲಸ ಮಾಡಿದರು. ಇಂದಿನ ದಿನಗಳಲ್ಲಿ ಮಠಮಾನ್ಯಗಳು ಇಲ್ಲದೇ ಹೋಗಿದ್ದರೆ ಸಮಾಜ ಅಧಃಪತನಕ್ಕೆ ಜಾರುತ್ತಿತ್ತು ಎಂದರು. ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ ಮಾತನಾಡಿ, ದಕ್ಷಿಣ ಭಾಗದಲ್ಲಿ ಸ್ವಾಮೀಜಿಗಳಿಗೆ ಚ್ಚಿನ ಮನ್ನಣೆ ಸಿಕ್ಕಿದೆ. ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುತ್ತಿರುವ ಮುರುಘಾ ಶರಣರು ಜನೋಪಯೋಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಭೋವಿ ಗುರುಪೀಠ¨ ‌ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ‌ ಸ್ವಾಮೀಜಿ, ಹಾವೇರಿ ಹೊಸಮಠ ‌ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಶಿರಸಂಗಿ ಮುರುಘಾ ಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ಇದ್ದರು. ಕಾರ್ಯಕ್ರಮದ ದಾಸೋಹಿ ಕೆ. ಮಂಜುನಾಥ್‌ ಸ್ವಾಗತಿಸಿದರು.

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BY Raghavendra ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ದಾಖಲು

BY Raghavendra ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ದಾಖಲು

Gas ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಭಸ್ಮ

Gas ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಭಸ್ಮ

ಬೈಕ್ ಗೆ ಡಿಕ್ಕಿ ಹೊಡೆದ ಟಾಟಾ ಏಸ್… ಓರ್ವ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ಬೈಕ್ ಗೆ ಡಿಕ್ಕಿ ಹೊಡೆದ ಟಾಟಾ ಏಸ್… ಓರ್ವ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ISRO Success: ಅಂತರಿಕ್ಷ ನೌಕೆ ‘ಪುಷ್ಪಕ್‌’ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ…

ISRO ಸಾಧನೆ: ಅಂತರಿಕ್ಷ ನೌಕೆ ‘ಪುಷ್ಪಕ್‌’ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ…

1-aasdasd

IPL ಬೆಟ್ಟಿಂಗ್ ಜಾಲ; ಗಂಡನಿಗೆ ಸಾಲಗಾರರ ಹಿಂಸೆ: ಪತ್ನಿ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.