ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್ ಕಮಿಷನರ್!
Team Udayavani, Jun 29, 2022, 6:28 PM IST
ಚಿತ್ರದುರ್ಗ: ಹಾಡು ಹೇಳ್ಳೋದು,ಡ್ಯಾನ್ಸ್ ಮಾಡೋ ಮೂಲಕಖಾಕಿ ತೊಟ್ಟರೂ ಸ್ವಲ್ಪ ಡಿಫರೆಂಟ್‌ಆಗಿರುವ ಮಂಗಳೂರಿನ ಪೊಲೀಸ್‌ಕಮಿಷನರ್ ಶಶಿಕುಮಾರ್‌ಚಿತ್ರದುರ್ಗದ ಐತಿಹಾಸಿಕ ಏಳುಸುತ್ತಿನ ಕೋಟೆ ಏರುವ ಮೂಲಕಸಾಹಸಕ್ಕೂ ಸೈ ಎಂದು ತೋರಿಸಿದ್ದಾರೆ.ಚಿತ್ರದುರ್ಗ ಕೋಟೆ ಎಂದರೆ ಥಟ್ಟನೆಎಲ್ಲರಿಗೂ ಮಂಕಿ ಮ್ಯಾನ್ ಎಂದೇಕರೆಸಿಕೊಳ್ಳುವ ಜ್ಯೋತಿರಾಜ್(ಕೋತಿರಾಜ್) ನೆನಪಾಗುತ್ತಾರೆ.
ಕೋಟೆಯ ಗೋಡೆ, ಬಂಡೆಗಳನ್ನೆಲ್ಲಸರಸರನೇ ಏರುವ ಇವರ ಸಾಹಸಮೆಚ್ಚದವರಿಲ್ಲ. ಈಗ ಜ್ಯೋತಿರಾಜ್‌ಅವರಂತೆಯೇ ಚಿತ್ರದುರ್ಗಮೂಲದ ಐಪಿಎಸ್ ಅ ಧಿಕಾರಿ,ಸದ್ಯ ಮಂಗಳೂರಿನಲ್ಲಿಪೊಲೀಸ್ ಕಮಿಷನರ್‌ಆಗಿರುವ ಶಶಿಕುಮಾರ್‌ಕೂಡ ಕೋಟೆಯಗೋಡೆ ಏರಿ ಸಾಹಸಪ್ರದರ್ಶಿಸಿದ್ದಾರೆ. ಖುದ್ದುಶಶಿಕುಮಾರ್ ಅವರ ಫೇಸ್‌ಬುಕ್ ಪೇಜ್‌ನಲ್ಲಿ ಜ್ಯೋತಿರಾಜ್‌ಏರುವ ಗೋಡೆಯನ್ನು ತಾವುಹತ್ತುತ್ತಿರುವ ವಿಡಿಯೋ ಪೋಸ್ಟ್‌ಮಾಡಿದ್ದಾರೆ. “ನಮ್ಮ ಊರು ನಮ್ಮಹೆಮ್ಮೆ’, “ನಮ್ಮೂರಿನಲ್ಲಿ ಮತ್ತೂಮ್ಮೆ’ಎಂಬ ಶೀರ್ಷಿಕೆ ಕೊಡುವಮೂಲಕ ಅಭಿಮಾನಮೆರೆದಿದ್ದಾರೆ.
ಸಾಮಾಜಿಕಜಾಲತಾಣಗಳಲ್ಲಿ ಈವಿಡಿಯೋ ವೈರಲ್‌ಆಗಿದೆ. ಶಶಿಕುಮಾರ್‌ಬರಿಗೈನಲ್ಲಿ ಯಾವುದೇ ಆಸರೆಇಲ್ಲದೆ ಗೋಡೆ ಏರುವ ದೃಶ್ಯವನ್ನುಸ್ಥಳೀಯರು ಮೊಬೈಲ್‌ನಲ್ಲಿವಿಡಿಯೋ ಮಾಡಿದ್ದಾರೆ. ಐಪಿಎಸ್‌ಅ ಧಿಕಾರಿಯ ಸಾಹಸಕ್ಕೆ ಚಪ್ಪಾಳೆತಟ್ಟಿ ಪ್ರೋತ್ಸಾಹಿಸಿದ್ದಾರೆ.