ಜಂತುಹುಳು ಬಾಧೆ ನಿವಾರಣೆಗೆ ಶ್ರಮಿಸಿ


Team Udayavani, Nov 25, 2021, 6:50 PM IST

chitradurga news

ಚಿತ್ರದುರ್ಗ: ಪ್ರಪಂಚದಲ್ಲಿ 241ಮಿಲಿಯನ್‌ಗೂ ಹೆಚ್ಚು ಜನರುಜಂತುಹುಳುವಿನ ಸಮಸ್ಯೆಯಿಂದಬಳಲುತ್ತಿದ್ದು, ಅವರಲ್ಲಿ ಶೇ. 28ರಷ್ಟುಜನ ಭಾರತದವರಾಗಿದ್ದಾರೆ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ| ಆರ್‌.ರಂಗನಾಥ್‌ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬಇಲಾಖೆಯಿಂದ ಬುದ್ಧನಗರದ ನಗರಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 2021-22ನೇ ಸಾಲಿನ ರಾಷ್ಟ್ರೀಯಜಂತುಹುಳು ನಿವಾರಣಾ ದಿನಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ಜಂತುಹುಳುಬಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ,ಬೆಳವಣಿಗೆ ಕುಂಠಿತ, ಕಲಿಕೆಯಲ್ಲಿಹಿಂದೆ ಬೀಳುವುದು ಸೇರಿದಂತೆ ಹಲವುಸಮಸ್ಯೆಗಳು ಉಂಟಾಗುತ್ತದೆ.

ಹಾಗಾಗಿಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆಜಂತುಹುಳು ನಿವಾರಣೆ ಮಾತ್ರೆಗಳನ್ನುನೀಡಲಾಗುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕರೋಗಗಳು ಸೇರಿದಂತೆ ಬಹುತೇಕರೋಗಗಳನ್ನು ಪತ್ತೆ ಮಾಡಿ ಸೂಕ್ತಚಿಕಿತ್ಸೆ ನೀಡಲಾಗಿದೆ. ಅನೇಕರೋಗಗಳನ್ನು ನಿಯಂತ್ರಿಸುವಕೆಲಸವಾಗಿದೆ. ಈ ನಿಟ್ಟಿನಲ್ಲಿಭಾರತವನ್ನು ಪೋಲಿಯೋ ಮುಕ್ತಮಾಡಲಾಗಿದೆ. 2025ಕ್ಕೆ ಮಲೇರಿಯಾ,ಲೆಪ್ರಸಿ, ಕ್ಷಯ ರೋಗ ನಿವಾರಣೆಗುರಿ ಹೊಂದಲಾಗಿದೆ.

ಅದರಂತೆ ಜಂತುಹುಳು ಬಾಧೆ ನಿರ್ಮೂಲನೆಗೂಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿಶಿಕ್ಷಕರು, ಅಂಗನವಾಡಿ, ಆಶಾಕಾರ್ಯಕರ್ತೆಯರು ಪ್ರತಿಯೊಬ್ಬಮಗುವಿಗೂ ಮಾತ್ರೆ ನುಂಗಿಸುವ ಕೆಲಸಮಾಡಬೇಕೆಂದು ಕರೆ ನೀಡಿದರು.ಕಾರ್ಯಕ್ರಮ ಅನುಷ್ಠಾನಾ ಧಿಕಾರಿಹಾಗೂ ಆರ್‌ಸಿಎಚ್‌ ಅ ಧಿಕಾರಿಡಾ| ಪಿ.ಎಸ್‌. ಕುಮಾರಸ್ವಾಮಿಮಾತನಾಡಿ, ಜಿಲ್ಲೆಯಲ್ಲಿ 4.38ಲಕ್ಷಕ್ಕೂ ಹೆಚ್ಚು ಮಕ್ಕಳನ್ನುಗುರುತಿಸಲಾಗಿದ್ದು, ಇವರೆಲ್ಲರಿಗೂಉಚಿತವಾಗಿ ಅಲೆºಂಡಾಜೋಲ್‌ ಮಾತ್ರೆನೀಡಲಾಗುತ್ತಿದೆ. 1 ವರ್ಷದಿಂದ 2ವರ್ಷದೊಳಗಿನ ಮಕ್ಕಳಿಗೆ 1/2 ಮಾತ್ರೆಹಾಗೂ 2 ವರ್ಷ ಮೇಲ್ಪಟ್ಟು 19ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆನೀಡಬೇಕು. ಎಲ್ಲಾ ಅಂಗನವಾಡಿ,ಶಾಲಾ-ಕಾಲೇಜುಗಳ ಮಕ್ಕಳಿಗೆ ಆಯಾಶಾಲೆಗಳ ಶಿಕ್ಷಕರು ಮಾತ್ರೆಗಳನ್ನುತಿನ್ನಿಸಬೇಕು ಎಂದರು.

ಆರೋಗ್ಯ ಇಲಾಖೆ ಅ ಧಿಕಾರಿಹನುಮಂತಪ್ಪ ಮಾತನಾಡಿ,ಜಂತುಹುಳು ಬಾಧೆಯಿಂದಮಕ್ಕಳ ಆರೋಗ್ಯದಲ್ಲಿ ವ್ಯತ್ಯಯಉಂಟಾಗುತ್ತದೆ. ಇದರಿಂದ ಅನೇಕಸಮಸ್ಯೆಗಳು ಕಂಡುಬರುತ್ತವೆ. ಹಾಗಾಗಿಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳಿಗೆಜಂತುಹುಳು ನಿವಾರಕ ಮಾತ್ರೆಗಳನ್ನುತಿನ್ನಿಸಲಾಗುತ್ತದೆ. ಮಾತ್ರೆಗಳನ್ನುಪ್ರತಿ ಮಗುವಿಗೂ ದೊರೆಯುವಂತೆನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಮಾತ್ರೆಯನ್ನು ಮಗು ಚೆನ್ನಾಗಿಜಗಿದು ನುಂಗವಂತೆ ನೋಡಿಕೊಳ್ಳಬೇಕುಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲೂಕುಆರೋಗ್ಯಾಧಿ ಕಾರಿ ಡಾ| ಬಿ.ವಿ. ಗಿರೀಶ್‌,ಕಾರ್ಯಕ್ರಮ ಅನುಷ್ಠಾನಾಧಿ ಕಾರಿ ಡಾ|ರೇಣುಪ್ರಸಾದ್‌, ಬುದ್ಧನಗರ ಆರೋಗ್ಯಕೇಂದ್ರದ ಡಾ| ಸುರೇಂದ್ರ, ಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಆಂಜನೇಯ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಶಿಶು ಅಭಿವೃದ್ಧಿ ಅಧಿ ಕಾರಿಎನ್‌. ಸುಧಾ ಭಾಗವಹಿಸಿದ್ದರು.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.