ಸರ್ವಜ್ಞ ಎಲ್ಲರ ಅಚ್ಚು ಮೆಚ್ಚಿನ ಕವಿ

ತ್ರಿಪದಿಗಳಲ್ಲಿದೆ ಸಮಾಜದ ಅಂಕುಡೊಂಕು ತಿದ್ದುವ ಹಿತವಚನ: ಮಹಾಂತೇಶ್‌

Team Udayavani, Feb 21, 2020, 1:03 PM IST

ಚಿತ್ರದುರ್ಗ: ತ್ರಿಪದಿಗಳ ಮೂಲಕ ಸಮಾದ ಅಂಕುಡೊಂಕುಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ಸರ್ವಜ್ಞರ ತ್ರಿಪದಿಗಳನ್ನು ಟೀಕಿಸುವ ಸಾಹಿತ್ಯ ಇದುವರೆಗೆ ಬಂದಿಲ್ಲ ಎಂದು ಪರಶುರಾಂಪುರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕೆ.ಟಿ. ಮಹಾಂತೇಶ್‌ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಗುರುವಾರ ನಡೆದ ಕವಿ ಸರ್ವಜ್ಞ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಸರ್ವಜ್ಞ ಸಾಮಾನ್ಯರೊಂದಿಗೆ ಬೆರೆತು, ಪಾಮರರಿಂದ ಪಂಡಿತರವರೆಗೆ ಅಚ್ಚುಮೆಚ್ಚಿನ ಕವಿಯಾಗಿದ್ದಾರೆ. ಅವರ ತ್ರಿಪದಿಗಳಲ್ಲಿ ಸಮಾಜದ ಅಂಕುಡೊಂಕು, ಧಾರ್ಮಿಕ, ಸಾಮಾಜಿಕ, ಶೆ„ಕ್ಷಣಿಕ, ಭೂಗೋಳ, ವೈದ್ಯ ಶಾಸ್ತ್ರ, ಸೂರ್ಯ, ಚಂದ್ರ, ಆಕಾಶ ಎಲ್ಲವುಗಳ ಬಗ್ಗೆಯೂ ತ್ರಿಪದಿಗಳನ್ನು ರಚಿಸಿದ್ದಾರೆ ಎಂದರು.

ತಮಿಳಿನಲ್ಲಿ ತಿರುವಳ್ಳವರ್‌, ತೆಲುಗಿನಲ್ಲಿ ವೇಮನ, ಕರ್ನಾಟಕದಲ್ಲಿ ಸರ್ವಜ್ಞ ಪ್ರಮುಖ ಸ್ಥಾನ ಪಡೆದಿದ್ದಾರೆ. ಸರ್ವಜ್ಞ ಎನ್ನುವುದು ನಾಮಾಂಕಿತ ಅಥವಾ ಹೆಸರು ಎಂಬ ಕುರಿತು ಚರ್ಚೆಯಾಗಬೇಕಿದೆ. ವೀರಶೈವ, ಜೈನ, ಬೌದ್ಧ ಸಾಹಿತ್ಯದಲ್ಲಿ ಸರ್ವಜ್ಞ ಎಂಬ ಪದದ ಬಗ್ಗೆ ಮಾಹಿತಿ ಇಲ್ಲ. ಸರ್ವ ಎಂದರೆ ಎಲ್ಲವನ್ನು ತಿಳಿದವನು ಎಂದರ್ಥ. ಸರ್ವಜ್ಞನ ತ್ರಿಪದಿಗಳಲ್ಲಿ ಅವರು ಹೇಳಿದ ಪ್ರಕಾರ ಸರ್ವರೊಳಗೊಂದೊಂದು ಪದ ಕಲಿತು ಸರ್ವಜ್ಞನಾದೆ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಿದರು.

ಸರ್ವಜ್ಞನ ಹುಟ್ಟು, ತಂದೆ, ತಾಯಿ ಬಗ್ಗೆ ಜಿಜ್ಞಾಸೆ ಇದೆ. ಅವರು ಎರಡು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ್ದಾರೆ. ಅವರ ಕಾಲಮಾನ ಇದುವರೆಗೆ ತಿಳಿದಿಲ್ಲ. 16ನೇ ಶತಮಾನದಲ್ಲಿ ಜೀವಿಸಿರಬಹುದು ಎಂದು ಊಹಿಸಲಾಗಿದೆ. ಸರ್ವಜ್ಞನ ಜನ್ಮಸ್ಥಳದ ಬಗ್ಗೆ ಹೆಚ್ಚಿನ ಸಂಶೋಧನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಮಾತನಾಡಿ, ಕವಿ ಸರ್ವಜ್ಞ ತತ್ವಜ್ಞಾನಿ, ದಾರ್ಶನಿಕ, ಸನ್ಯಾಸಿ, ನಿಷ್ಠುರವಾದಿ, ವಾಸ್ತವವಾದಿ, ವಿರಾಗಿಯಾಗಿದ್ದಾರೆ. ಕವಿ ಸರ್ವಜ್ಞ ಕರ್ನಾಟಕದ ಮುಕುಟ. ಸಾಹಿತ್ಯದ ಶ್ರೇಷ್ಠತೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದ ಅವರು ತ್ರಿಪದಿಗಳ ಮೂಲಕ ಪ್ರತಿಯೊಂದು ವಿಷಯದ ಕುರಿತು ಪ್ರಸ್ತಾಪಿಸಿದ್ದಾರೆ. ಈ ನೆಲದಲ್ಲಿ ಸರ್ವಜ್ಞ ಬಾಳಿ ಬದುಕಿದ್ದು ಕರ್ನಾಟಕದ ಪುಣ್ಯ. ಸಮಾಜದ ಅಂಕುಡೊಂಕು ತಿದ್ದಿ ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.

ಸರ್ವಜ್ಞ ಏಕಾಂಗಿಯಾಗಿದ್ದು, ಈ ದೇಶ ಸುತ್ತಿ ನಮಗೆ ಅವರ ಅನುಭವ ಹಾಗೂ ಜ್ಞಾನವನ್ನು ನಮಗೆ ನೀಡಿದ್ದಾರೆ. ಅವರ ಆದರ್ಶಗಳು ಮಹತ್ವವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಿ ದಾರಿಯಲ್ಲಿ ನಮ್ಮ ಯೋಚನೆಗಳು ಇರಬೇಕಾದರೆ ಸರ್ವಜ್ಞರ ಕುರಿತು ಅಭ್ಯಾಸ ಮಾಡಬೇಕು ಎಂದರು.

ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೂರ್ತಿ ಗುರೂಜಿ, ಎಎಸ್‌ಪಿ ಎಂ.ಬಿ.
ನಂದಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಕುಂಬಾರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಪ್ಪ, ಉಪಾಧ್ಯಕ್ಷ ಈರಯ್ಯ, ಕಾರ್ಯದರ್ಶಿ
ವೈ. ಮೃತ್ಯುಂಜಯ, ಕುಂಬಾರ ಮಹಿಳಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬೈಲಮ್ಮ, ಸಮುದಾಯದ ಮುಖಂಡರಾದ ಪಿ. ತಿಪ್ಪೇಸ್ವಾಮಿ, ಹನುಮಂತಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮಕ್ಕೂ ನಗರದ ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ತಹಶೀಲ್ದಾರ್‌ ವೆಂಕಟೇಶಯ್ಯ ಅವರು ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರರವವಣಿಗೆಗೆ ಚಾಲನೆ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ