Udayavni Special

ಹೆಸರು ನೋಂದಣಿಗೆ ಅಗತ್ಯ ದಾಖಲೆ ಸಂಗ್ರಹಿಸಿ


Team Udayavani, Jan 5, 2021, 2:45 PM IST

ಹೆಸರು ನೋಂದಣಿಗೆ ಅಗತ್ಯ ದಾಖಲೆ ಸಂಗ್ರಹಿಸಿ

ಚಿತ್ರದುರ್ಗ: ಮತದಾರರ ಪಟ್ಟಿಗೆ ಹೆಸರು ನೋಂದಣಿ  ಹಾಗೂ ಪಟ್ಟಿಯಿಂದ ಹೆಸರು ಕೈಬಿಡುವಾಗ ಸರಿಯಾಗಿಪರಿಶೀಲಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರುಹಾಗೂ ಆಹಾರ, ನಾಗರಿಕ ಸರಬರಾಜು ಮತ್ತುಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತ ಡಾ| ಶಮ್ಲಾ ಇಕ್ಲಾಲ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಮತದಾರರ ಪಟ್ಟಿಗೆ ಸೇರ್ಪಡೆ ಅಥವಾಹೆಸರು ತೆಗೆಯುವಾಗ ಅಗತ್ಯ ದಾಖಲೆಸಂಗ್ರಹಿಸಿಟ್ಟುಕೊಳ್ಳಬೇಕು. ಪರಿಶೀಲನೆ ವೇಳೆ ಇವುಲಭ್ಯವಾಗುವಂತಿರಬೇಕು ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಸೇರ್ಪಡೆಗೆ ಆನ್‌ಲೈನ್‌ ಹಾಗೂಆಫ್‌ಲೈನ್‌ ಅರ್ಜಿಗಳನ್ನು ತಿರಸ್ಕೃತಗೊಳಿಸುವಾಗಸಕಾರಣ ನೀಡಬೇಕು. ಸರಿಯಾಗಿ ಪರಿಶೀಲನೆಮಾಡಿ ನಂತರ ತಿರಸ್ಕೃತ ಮಾಡಬೇಕು. ಮತದಾರರಪಟ್ಟಿಯಿಂದ ಹೆಸರನ್ನು ಡಿಲೀಟ್‌ ಮಾಡುವಮೊದಲು ನೋಟೀಸ್‌ ನೀಡಬೇಕು ಎಂದು ತಾಕೀತುಮಾಡಿದರು.

ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಮಾತನಾಡಿ, ಆನ್‌ಲೈನ್‌ನಲ್ಲಿ ಮತದಾರರ ಪಟ್ಟಿ ಸೇರ್ಪಡೆಗೆ ಸಲ್ಲಿಕೆಯಾಗಿರುವ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ. ಇಲ್ಲಿ ಸಲ್ಲಿಸುವ ಅರ್ಜಿಗಳಲ್ಲಿಸರಿಯಾದ ದಾಖಲೆಗಳನ್ನು ಒದಗಿಸಿರುವುದಿಲ್ಲ. ಈಕಾರಣದಿಂದ ಆನ್‌ಲೈನ್‌ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಮತದಾರರ ಪಟ್ಟಿ ದೋಷರಹಿತವಾಗಿದ್ದರೆ ಚುನಾವಣೆ ಸುಸೂತ್ರವಾಗಿ ನಡೆಯುತ್ತದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ದೂರುಗಳು ಬರಬಾರದು.ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಈಚೆಗೆ ನಡೆದ ಗ್ರಾಮ ಪಂಚಾಯಿತಿಚುನಾವಣೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಿಲ್ಲ ಎಂದು ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಎಲ್‌ಒ ರಿಜಿಸ್ಟರ್‌ ನಿರ್ವಹಿಸಲು ಸೂಚನೆ: ಮತದಾರರ ಪಟ್ಟಿಗೆ ಸಂಬಂ ಧಿಸಿದಂತೆ ಬಿಎಲ್‌ ಒಗಳು ಸರಿಯಾದ ರೀತಿಯಲ್ಲಿ ರಿಜಿಸ್ಟರ್‌ ನಿರ್ವಹಣೆ ಮಾಡಬೇಕು. ಈ ಕುರಿತು ಸಂಬಂಧಿ ಸಿದ ಅಧಿಕಾರಿಗಳುಬಿಎಲ್‌ಒಗಳಿಂದ ಮಾಹಿತಿ ನೀಡಲು ಕ್ರಮವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರು ಸೂಚಿಸಿದರು.

18 ವರ್ಷ ಪೂರ್ಣಗೊಂಡು ಮತದಾರರ ಪಟ್ಟಿಗೆಸೇರ್ಪಡೆಗೆ ಸಲ್ಲಿಕೆಯಾಗಿರುವ ಯುವ ಮತದಾರರ ಆನ್‌ಲೈನ್‌ ಮತ್ತು ಆಫ್‌ಲೈನ್‌ ಅರ್ಜಿಗಳ ನಮೂನೆ6, 7, 8 ಮತ್ತು 8ಎ ಅರ್ಜಿಗಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲಾ ಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾತನಾಡಿ, 2020 ರ ನವೆಂಬರ್‌ 18 ರ ಕರಡು ಮತದಾರಪಟ್ಟಿಯಂತೆ ಜಿಲ್ಲೆಯಲ್ಲಿ 13,61,973 ಮತದಾರರಿದ್ದಾರೆ.ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲುಮಿಂಚಿನ ನೋಂದಣಿ ಅಭಿಯಾನ ಹಾಗೂ ವ್ಯಾಪಾಕಪ್ರಚಾರದ ಮೂಲಕ ನೋಂದಣಿಗೆ ಕ್ರಮವಹಿಸಲಾಗಿದೆ ಎಂದರು.

ಕೋವಿಡ್‌-19 ಹಿನ್ನೆಲೆಯಲ್ಲಿ ಕಾಲೇಜುಗಳು ಪ್ರಾರಂಭವಾಗದೇ ಇರುವುದರಿಂದ ಮತದಾರರಪಟ್ಟಿಗೆ ಯುವ ಮತದಾರರ ನೋಂದಣಿ ಸಂಖ್ಯೆಕಡಿಮೆಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ|ಕೆ.ನಂದಿನಿದೇವಿ, ಉಪವಿಭಾಗಾಧಿಕಾರಿ ನಾಗರಾಜ್‌, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್‌, ತಹಶೀಲ್ದಾರ್‌ಗಳಾದವೆಂಕಟೇಶಯ್ಯ, ಸತ್ಯನಾರಾಯಣ, ಜಿಲ್ಲಾ ಅಂಗವಿಕಲರಕಲ್ಯಾಣಾ ಧಿಕಾರಿ ಜೆ.ವೈಶಾಲಿ, ಪೌರಾಯುಕ್ತ ಜೆ.ಟಿ. ಹನುಮಂತರಾಜು ಮತ್ತಿತರರು ಉಪಸ್ಥಿತರಿದ್ದರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

5ಎ ಕಾಲುವೆ ಅನುಷ್ಠಾನ ಜಾರಿಗಾಗಿ ಆಣೆ ಪ್ರಮಾಣ ಪ್ರಹಸನ

5A ಕಾಲುವೆ ಅನುಷ್ಠಾನ ಜಾರಿಗಾಗಿ ಮಾಜಿ ಶಾಸಕರಿಂದ ಆಣೆ ಪ್ರಮಾಣ ಪ್ರಹಸನ

ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ

ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ : ಕರ್ನಾಟಕಕ್ಕೆ 2,412 ಕೋಟಿ

ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ

ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ

ರೈತರ ಹೋರಾಟಕ್ಕೆ ಕಾಂಗ್ರೇಸ್ ಕುಮ್ಮಕ್ಕು ನೀಡುತ್ತಿದೆ : ಶೆಟ್ಟರ್ ಆರೋಪ

ರೈತರ ಹೋರಾಟಕ್ಕೆ ಕಾಂಗ್ರೇಸ್ ಕುಮ್ಮಕ್ಕು ನೀಡುತ್ತಿದೆ : ಶೆಟ್ಟರ್ ಆರೋಪ

ನಾಳೆಯಿಂದ ಏಳು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ಆರಂಭ

ನಾಳೆಯಿಂದ ಏಳು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ಆರಂಭ

ಹುಣಸೋಡು ಸ್ಫೋಟ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಯಲಿ : ಸಿದ್ದರಾಮಯ್ಯ

ಹುಣಸೋಡು ಸ್ಫೋಟ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಯಲಿ : ಸಿದ್ದರಾಮಯ್ಯ

ಟ್ರ್ಯಾಕ್ಟರ್ ರಾಲಿ, ಹಿಂಸಾಚಾರ ಪ್ರಕರಣ: ಯಾದವ್, ಟಿಖಾಯತ್ ಸೇರಿ ಹಲವರ ವಿರುದ್ಧ ಕೇಸ್

ಟ್ರ್ಯಾಕ್ಟರ್ ರಾಲಿ, ಹಿಂಸಾಚಾರ ಪ್ರಕರಣ: ಯಾದವ್, ಟಿಖಾಯತ್ ಸೇರಿ ಹಲವರ ವಿರುದ್ಧ ಕೇಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27-38

ಅಂಬೇಡ್ಕರ್‌ ವಿಶ್ವ ನಾಯಕ: ಶ್ರೀರಾಮುಲು

27-16

ಶಿಸ್ತು-ಸಂಯಮ ಮುಖ್ಯ: ಶಿಮುಶ

ಸಂವಿಧಾನದ ಆಶೋತ್ತರ ನಿತ್ಯೋತ್ಸವವಾಗಲಿ

nalin

ಅಧಿಕಾರಕ್ಕಾಗಿ ಕಾಂಗ್ರೆಸ್ ಭಯೋತ್ಪಾದಕ ಕೃತ್ಯಕ್ಕೆ ಇಳಿದಿದೆ: ನಳೀನ್ ಕುಮಾರ್ ಕಟೀಲ್ ಆಕ್ರೋಶ

car

ಚಿತ್ರದುರ್ಗ: ಕಾರುಗಳ‌ ನಡುವೆ ಢಿಕ್ಕಿ; ಇಬ್ಬರು ಸಾವು, ಹಲವರಿಗೆ ಗಾಯ

MUST WATCH

udayavani youtube

ಮಂಗಳೂರು: ಜ. 30ರಿಂದ ಕಂಬಳ ನಡೆಸಲು ಅನುಮತಿ

udayavani youtube

ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ

udayavani youtube

Udupiಯ ಜನತೆಗೆ ಕಲೆಯಿಂದ ಜನಜಾಗೃತಿ ಮೂಡಿಸಿದ ಕಲಾವಿದ KAMIL RAZA,

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

udayavani youtube

ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ

ಹೊಸ ಸೇರ್ಪಡೆ

Advice on health checkup camp

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಸಲಹೆ

ವಿವಿಧೆಡೆ 72ನೇ ಗಣರಾಜ್ಯೋತ್ಸವ ಸಂಭ್ರಮ

ವಿವಿಧೆಡೆ 72ನೇ ಗಣರಾಜ್ಯೋತ್ಸವ ಸಂಭ್ರಮ

27-40

ಮೋದಿ ಆಡಳಿತ ಮಾದರಿ: ಹರತಾಳು ಹಾಲಪ್ಪ

banahatti

ಎಲ್ಲರೂ ಸಂವಿಧಾನ ಅರಿತುಕೊಳ್ಳಬೇಕು

ಟ್ರ್ಯಾಕ್ಟರ್‌ ಸಮೇತ ರಸ್ತೆಗಿಳಿದ ಅನ್ನದಾತರು

ಟ್ರ್ಯಾಕ್ಟರ್‌ ಸಮೇತ ರಸ್ತೆಗಿಳಿದ ಅನ್ನದಾತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.