ತಾಕತ್ತಿದ್ದರೆ ಮೊಳಕಾಲ್ಮೂರು ಕ್ಷೇತ್ರದಲ್ಲೇ ಸ್ಪರ್ಧಿಸಿ
ಸಚಿವ ಬಿ. ಶ್ರೀರಾಮುಲುಗೆ ಕಾಂಗ್ರೆಸ್ ಮುಖಂಡ ಡಾ| ಬಿ. ಯೋಗೇಶ್‌ಬಾಬು ಸವಾಲು
Team Udayavani, May 3, 2022, 3:46 PM IST
ಮೊಳಕಾಲ್ಮೂರು: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಸಚಿವ ಬಿ. ಶ್ರೀರಾಮುಲು ತಾಕತ್ತಿದ್ದರೆ ಮುಂಬರುವ ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಕಾಂಗ್ರೆಸ್ ಮುಖಂಡ ಡಾ| ಬಿ. ಯೋಗೇಶ್‌ಬಾಬು ಸವಾಲೆಸೆದರು.
ತಾಲೂಕಿನ ಹಾನಗಲ್ ಗ್ರಾಮದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬಿ. ಶ್ರೀರಾಮುಲು ಕೆಲ ದಿನಗಳ ಹಿಂದೆ ಈ ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿಯಲು ಕಾಂಗ್ರೆಸ್ ಕಾರಣವಾಗಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ತಾಕತ್ತಿದ್ದರೆ ಕಾಂಗ್ರೆಸ್‌ನವರು ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಇದು ತಾಕತ್ತಿನ ಪ್ರಶ್ನೆಯಲ್ಲ. ನಮ್ಮ ಕ್ಷೇತ್ರದ ಮತದಾರರು ಸಚಿವ ಬಿ. ಶ್ರೀರಾಮುಲು ಉಪ ಮುಖ್ಯಮಂತ್ರಿಯಾಗಿ ಎಸ್‌ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಕಲ್ಪಿಸುತ್ತಾರೆಂದು ಭರವಸೆ ನೀಡಿದ್ದರಿಂದ ಮತಹಾಕಿದ್ದಾರೆ. ಕ್ಷೇತ್ರದ ಜನರಿಗೆ ಈಗ ತಪ್ಪಿನ ಅರಿವಾಗಿದ್ದು, ಮುಂದೆ ಆ ತಪ್ಪನ್ನು ಮಾಡಲಾರರು ಎಂದರು.
ಶ್ರೀರಾಮುಲುರವರು ಸುಳ್ಳನ್ನು ಬಂಡವಾಳ ವನ್ನಾಗಿಟ್ಟುಕೊಂಡು ಕ್ಷೇತ್ರದ ಜನತೆಯ ಜೊತೆ ಆಟವಾಡುವುದು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಗೆದ್ದ ನಂತರ ಜಲೋತ್ಕರ್ಷ ಯೋಜನೆಯಡಿ ಹಳ್ಳಿ ಗೊಂದರಂತೆ ನೂರಾರು ಬೋರ್‌ವೆಲ್ ಗಳನ್ನು ಹಾಕಿಸುತ್ತೇನೆಂದು ನಂಬಿಸಿ ಮರೆತಿದ್ದಾರೆ. ಕ್ಷೇತ್ರದಲ್ಲಿ ಮತಗಳನ್ನು ಪಡೆದು ಶಾಸಕರಾಗಿ ಸಚಿವರಾಗಿರುವ ಇವರು, ಕ್ಷೇತ್ರದ ಜನರು ಬಳ್ಳಾರಿಗೆ ಹೋದಾಗ ಮನೆ ಗೇಟ್ ನಲ್ಲಿ ನಿಂತು ಕಾಣಲಾಗದೆ ವಾಪಾಸ್ ಬರುವಂತಹ ದುಸ್ಥಿತಿ ಇದೆ. ಕ್ಷೇತ್ರದಲ್ಲಿನ ಶಾಸಕರ ಭವನಕ್ಕೆ ಎಷ್ಟು ಬಾರಿ ಆಗಮಿಸಿದ್ದೀರಿ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಈವರೆಗೂ ಹೊಸ ಶಾಲಾ-ಕಾಲೇಜು ಮಂಜೂರು ಮಾಡಿಸದೆ, ಶಾಲಾಭಿವೃದ್ಧಿಗೆ ಯಾವುದೇ ಅನುದಾನ ನೀಡದೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆಂದು ಹೇಳುತ್ತಿರುವುದಕ್ಕೆ ನಾಚಿಕೆಯಾಗಬೇಕು.ಇವೆಲ್ಲವನ್ನೂ ಜನತೆ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಟೇಲ್ ಜಿ. ಪಾಪನಾಯಕ, ಗ್ರಾಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ, ಕರಿಬಸಪ್ಪ, ಪಪಂ ಸದಸ್ಯ ನಬಿಲ್ ಅನ್ಸಾರ್, ಉಪಾಧ್ಯಕ್ಷ ರಾಮಮೂರ್ತಿ, ಪರಿಶಿಷ್ಟ ವರ್ಗ ಘಟಕದ ಅಧ್ಯಕ್ಷ ಟಿ.ಎಸ್. ಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತ ಪ್ರಹ್ಲಾದ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಪ್ಪ, ಮುಖಂಡರಾದ ಜಗದೀಶ್, ಶಿವಲಿಂಗಪ್ಪ, ಎಂ.ಪಿ. ನಾಗರಾಜ್, ದೊಡ್ಡೋಬ ನಾಯಕ, ವೈ.ಡಿ. ಕುಮಾರಸ್ವಾಮಿ, ರಾಮಾಂಜನೇಯ, ಬಸವರಾಜ್, ಲೋಹಿತ್‌ಕುಮಾರ್, ಶರತ್, ಮಂಜಣ್ಣ, ಆಂಜನೇಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ
ಮುಂದುವರೆದ ಮಳೆ: ಶಾಲಾ ಆವರಣಕ್ಕೆ ನುಗ್ಗಿದ ನೀರು, ಮರದ ಕೆಳಗೆ ಪಾಠ
ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು
ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ