Udayavni Special

ಸಿಡಿ ಪ್ರಕರಣ ತನಿಖೆ ನ್ಯಾಯಾಧೀಶರಿಂದ ನಡೆಸಿ : ಯಾದವ್‌


Team Udayavani, Mar 31, 2021, 9:01 PM IST

Udayavani Kannada Newspaper

ಚಿತ್ರದುರ್ಗ : ಲೈಂಗಿಕ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬದಲಾಯಿಸಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಕೆಪಿಸಿಸಿ ಮಾಧ್ಯಮ ವಕ್ತಾರ ಬಾಲಕೃಷ್ಣಸ್ವಾಮಿ ಯಾದವ್‌ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ. 2 ರಿಂದ ಸಿಡಿ ಹಗರಣ ಸುತ್ತಾಡುತ್ತಿದೆ. ಆದರೆ ಇನ್ನೂ ಆರೋಪಿಯನ್ನು ಬಂಧಿ ಸಿಲ್ಲ. ಇದನ್ನು ನೋಡಿದರೆ ರಾಜ್ಯ ಬಿಜೆಪಿ ಸರ್ಕಾರ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಬಚಾವ್‌ ಮಾಡಲು ಹೊರಟಂತಿದೆ ಎಂದು ದೂರಿದರು. ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕಾನೂನುಬದ್ಧವಾಗಿ ತನಿಖೆಯಾಗುತ್ತಿಲ್ಲ. ದೂರುದಾರರ ಮೇಲೆ ಒತ್ತಡ ಹೇರಲಾಗುತ್ತಿದೆ. 24 ಗಂಟೆಯೊಳಗೆ ಎಫ್‌ಐಆರ್‌ ಹಾಕಿ ದೂರು ದಾಖಲಿಸಬೇಕು. ರಾಜ್ಯ ಮಹಿಳಾ ಆಯೋಗ ಕೂಡ ಯುವತಿಯ ನೆರವಿಗೆ ಬರುತ್ತಿಲ್ಲ.

ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಆಪಾದಿಸಿದರು. ಆರೋಪಿಗೆ ಮಹಿಳಾ ಆಯೋಗದಿಂದ ಒಂದು ನೋಟಿಸ್‌ ಕೂಡ ನೀಡಿಲ್ಲ. ಇದರ ಹಿಂದೆ ಬಿಜೆಪಿ ಕೈವಾಡವಿದೆ. ಆರೋಪಿಯನ್ನು ಪತ್ತೆ ಹಚ್ಚಲು ಅನೇಕ ಮಾರ್ಗಗಳಿದ್ದರೂ ವಿನಾಕಾರಣ ವಿಳಂಬ ಮಾಡುತ್ತಿರುವುದು ಆರೋಪಿಗೆ ಸಹಾಯವಾಗಲಿದೆ. ಗೃಹ ಇಲಾಖೆ ಕೂಡ ಕಂಡು ಕಾಣದಂತಿರುವುದು ನೋವಿನ ಸಂಗತಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೇಲೆ ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಹಲ್ಲೆಗೆ ಮುಂದಾಗಿರುವುದು ಖಂಡನೀಯ.

ಇಂತಹ ಗೂಂಡಾಗಿರಿಯನ್ನು ನೋಡಿದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ “ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಘೋಷಣೆ ಬಿಜೆಪಿಯವರ ವರ್ತನೆಗೆ ತದ್ವಿರುದ್ಧವಾಗಿದೆ. ತತ್ವ ಸಿದ್ಧಾಂತಗಳು ಆ ಪಕ್ಷದಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ.

ತಮ್ಮ ಪಕ್ಷದವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಚಿವ ಡಾ| ಕೆ. ಸುಧಾಕರ್‌, ರಾಜ್ಯದ 224 ಶಾಸಕರುಗಳ ಮೇಲೂ ವಿಚಾರಣೆ ನಡೆಸಬೇಕೆಂದಿರುವುದು ಅರ್ಥಹೀನ ಎಂದು ಟೀಕಿಸಿದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್‌ ಕುಮಾರ್‌, ಕಾನೂನು ವಿಭಾಗದ ಶಿಕುಮಾರ್‌, ಮುಖಂಡರಾದ ಎನ್‌.ಡಿ.ಕುಮಾರ್‌, ಡಿ.ಎಸ್‌. ಸುದರ್ಶನ್‌, ಉಲ್ಲಾಸ್‌ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈ

3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ವಶ : ಕೇರಳದ ಅರಬ್ಬೀ ಕಡಲಲ್ಲಿ ನೌಕಾಪಡೆ ಕಾರ್ಯಾಚರಣೆ

3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ವಶ : ಕೇರಳದ ಅರಬ್ಬೀ ಕಡಲಲ್ಲಿ ನೌಕಾಪಡೆ ಕಾರ್ಯಾಚರಣೆ

“ಇಂಡಿಯಾ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌’ ಟೂರ್ನಿ ಮುಂದಕ್ಕೆ

“ಇಂಡಿಯಾ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌’ ಟೂರ್ನಿ ಮುಂದಕ್ಕೆ

ರೆಮಿಡಿಸಿವಿಯರ್‌ ಮಾಫಿಯಾ : ಪೊಲೀಸರಿಂದ 8ಕ್ಕೂ ಅಧಿಕ ಮಂದಿ ಸೆರೆ

ರೆಮಿಡಿಸಿವಿಯರ್‌ ಮಾಫಿಯಾ : ಪೊಲೀಸರಿಂದ 8ಕ್ಕೂ ಅಧಿಕ ಮಂದಿ ಸೆರೆ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

್ಗಹ್ದಗಸ

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

19-14

ಇತಿಹಾಸ ತಿರುಚುವಿಕೆ ಮಹಾ ಮೋಸ

19-13

ಸರ್ಕಾರಿ ಕಚೇರಿಗಳಲ್ಲಿ ರೊಟೇಶನ್‌ ಪದ್ಧತಿ ಜಾರಿಗೊಳಿಸಿ: ಮಂಜುನಾಥ್‌

19-12

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

18-23

ಇಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬಿಡುಗಡೆ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ಕನ್ನಡವನ್ನು ಉಸಿರಾಡಿದ ಜೀವಿ

ಕನ್ನಡವನ್ನು ಉಸಿರಾಡಿದ ಜೀವಿ

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.