Udayavni Special

ಜನರಲ್ಲಿ ಮೂಡಲಿ ಸಾಕ್ಷರ ಪ್ರಜ್ಞೆ


Team Udayavani, Oct 27, 2020, 5:11 PM IST

cd-tdy-1

ಚಿತ್ರದುರ್ಗ: ಸಮಾಜದ ಬಹುತೇಕ ಸಮುದಾಯಗಳು ಇಂದಿಗೂ ಕಗ್ಗತ್ತಲೆಯಲ್ಲಿಯೇ ಜೀವನ ನಡೆಸುತ್ತಿವೆ. ಅಂತಹ ಸಮುದಾಯಗಳಿಗೆ ಜ್ಞಾನದ ಬೆಳಕನ್ನು ಹರಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ “ಶರಣ ಸಂಸ್ಕೃತಿ ಉತ್ಸವ’ದಲ್ಲಿ ಸೋಮವಾರ ನಡೆದ ಸಹಜ ಶಿವಯೋಗದಲ್ಲಿ ಮಾತನಾಡಿದರು. ಆಯಾ ಸಮುದಾಯಗಳ ಮಠಾಧೀಶರು ಜನರಲ್ಲಿ ಸಾಕ್ಷರ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು. ಮೂಢನಂಬಿಕೆ, ಕಂದಾಚಾರ, ಹಳೆಯ ಸಂಪ್ರದಾಯಗಳಿಂದ ಹೊರ ಕರೆತರಬೇಕು. ಆ ಮೂಲಕ ಸಮುದಾಯದ ಪ್ರಗತಿಗೆ ಸ್ವಾಮೀಜಿಗಳು ಪ್ರಯತ್ನಿಸಬೇಕು ಎಂದರು.

ದೇಶದಲ್ಲಿ ಅಸ್ಪ್ರಶ್ಯತೆ ಇನ್ನೂ ಜೀವಂತವಾಗಿದೆ. ಅಸ್ಪ್ರಶ್ಯತೆ ನಿವಾರಣೆ ಆದರೆ ಮಾತ್ರ ಸಾಮಾಜಿಕ ಸಮಾನತೆ ಬರುತ್ತದೆ. ಸಮಾಜದ ಸಮಗ್ರ ಪರಿವರ್ತನೆ ಆಗಬೇಕಿದೆ. ಆ ನಿಟ್ಟಿನಲ್ಲಿ ಮುರುಘಾಮಠ ಪರಿವರ್ತನೆ ತರುವ ಒಂದು ಪ್ರಯೋಗ ಶಾಲೆಯಾಗಿದೆ. ಸಮಾಜಕ್ಕೆ ಕೊಡುಗೆ ನೀಡುವವರು ಬೇಕಾಗಿದ್ದಾರೆ. ಕೆರೆ ಕಾಲುವೆ ಕಟ್ಟಿಸುವವರು, ಅನ್ನ ದಾಸೋಹ ಏರ್ಪಡಿಸುವವರು, ಸಾಲುಮರಗಳನ್ನು ಬೆಳೆಸುವವರು, ಶಿಕ್ಷಣದ ಮೂಲಕ ಸಮುದಾಯ ನಿರ್ಮಾಣ ಮಾಡುವವರು, ಭೂದಾನ, ನೇತ್ರದಾನ, ರಕ್ತದಾನ, ಅಂಗಾಂಗ ದಾನ ಮಾಡುವವರು ಸಮಾಜಕ್ಕೆ ಬೇಕಾಗಿದ್ದಾರೆ. ಈ ರೀತಿಯ ಕೊಡುಗೆ ಕೊಡುವವರು ಶ್ರೇಷ್ಠರಾಗುತ್ತಾರೆ. ಇತಿಹಾಸ ನಿರ್ಮಿಸುವವರು ಮತ್ತಷ್ಟು ಶ್ರೇಷ್ಠರಾಗುತ್ತಾರೆ ಎಂದರು.

ಮೊಬೈಲ್‌ ಈಗ ಕಿರುಕುಳ ನೀಡುವ ದೊಡ್ಡ ಸಾಧನವಾಗಿದೆ. ಇದರ ಮೂಲಕ ವಿಕಾರಗಳು ಹಾಗೂ ವಿಕೃತ ವಿಚಾರಗಳೇ ಹೊರಬರುತ್ತಿವೆ. ಕೋವಿಡ್  ಲಾಕ್‌ಡೌನ್‌ ಸಂದರ್ಭದಲ್ಲಿ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಬೆಂಗಳೂರು ಸೇರಿದಂತೆ ನಗರಗಳನ್ನು ತೊರೆದು ಹಳ್ಳಿಗಳನ್ನು ಸೇರಿದರು. ಅವರು ಹಳ್ಳಿ ಸೇರಿ ಸುಮ್ಮನೆ  ಕೂರಲಿಲ್ಲ. ಮತ್ತೆ ಕೃಷಿಯತ್ತ ಮುಖಮಾಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಇರಕಲ್‌ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮಿಗಳು ಮಾತನಾಡಿ, ಕರ್ನಾಟಕ ಸಿದ್ಧಗಂಗೆಯ ಶಿವಕುಮಾರ ಶ್ರೀ, ಇಳಕಲ್‌ ಶ್ರೀಗಳನ್ನು ಕಳೆದುಕೊಂಡು ಬಡವಾಗಿದೆ ಎಂದು ಜನ ಭಾವಿಸಿದ್ದರು. ಆದರೆ ಅವರ ಶಕ್ತಿ, ಸಾಮರ್ಥ್ಯ ಮುರುಘಾ ಶರಣರಲ್ಲಿ ಸಮ್ಮಳಿತಗೊಂಡಿವೆ. ಮುರುಘಾ ಶರಣರು ಇರುವವರೆಗೂ ಕರ್ನಾಟಕ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಡವಾಗುವುದಿಲ್ಲ ಎಂದರು.

ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,  ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಸಂಗನಬಸವ ಸ್ವಾಮೀಜಿ, ಗುತ್ತಿಗೆದಾರ ಬಸವರಾಜ ಸಜ್ಜನ, ವಿಶ್ವಕರ್ಮ ಸಮಾಜದ ಮುಖಂಡ ಎಂ. ಶಂಕರಮೂರ್ತಿ, ಟಿ. ರಮೇಶ್‌, ಎನ್‌. ಹನುಮಂತಪ್ಪ ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಧಿಕಾರಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ : ಸಚಿವ ಶ್ರೀರಾಮುಲು

ಅಧಿಕಾರಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ : ಸಚಿವ ಶ್ರೀರಾಮುಲು

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

siddaramiah

ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ: ಸಿದ್ದರಾಮಯ್ಯ ಆಕ್ರೋಶ

ಚಿಕ್ಕಮಗಳೂರು : ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಚಿಕ್ಕಮಗಳೂರು : ಬಾಬಬುಡನ್ ಗಿರಿಯಲ್ಲಿ ದತ್ತಪಾದುಕೆ ದರ್ಶನ ಪಡೆದ ಮಾಲಾಧಾರಿಗಳು

ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ : ಸತೀಶ್ ಜಾರಕಿಹೊಳಿ

ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ : ಸತೀಶ್ ಜಾರಕಿಹೊಳಿ

ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ

ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ

ಕಳ್ಳರನ್ನು ಹಿಡಿಯಲು ಹೋದ ಆಂಧ್ರ ಪೋಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ: ಕಳ್ಳರು ಪರಾರಿ

ಕಳ್ಳರನ್ನು ಹಿಡಿಯಲು ಹೋದ ಆಂಧ್ರ ಪೋಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ: ಕಳ್ಳರ ತಂಡ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MPM

ಎಂಪಿಎಂ ಕಾರ್ಖಾನೆಗೆ ಅರಣ್ಯಲೀಸ್‌ ಬೇಡ

ದೌರ್ಜನ್ಯ ಪ್ರಕರಣ ತಡೆಗೆ ಕ್ರಮವಹಿಸಿ

ದೌರ್ಜನ್ಯ ಪ್ರಕರಣ ತಡೆಗೆ ಕ್ರಮವಹಿಸಿ

ಉಪ್ಪಾರ ಭವನ-ರಸ್ತೆ ನಿರ್ಮಾಣಕ್ಕೆ ಸಹಕರಿಸುವೆ

ಉಪ್ಪಾರ ಭವನ-ರಸ್ತೆ ನಿರ್ಮಾಣಕ್ಕೆ ಸಹಕರಿಸುವೆ

ರೈತರಿಗೆ ಅನ್ಯಾಯವಾದರೆ ರಾಜೀನಾಮೆ ನೀಡ್ತಿನಿ

ರೈತರಿಗೆ ಅನ್ಯಾಯವಾದರೆ ರಾಜೀನಾಮೆ ನೀಡ್ತಿನಿ

dk-shivakumar

ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ: ಡಿಕೆಶಿ

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

ಅಧಿಕಾರಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ : ಸಚಿವ ಶ್ರೀರಾಮುಲು

ಅಧಿಕಾರಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ : ಸಚಿವ ಶ್ರೀರಾಮುಲು

ಮದುವೆಗೆ ಜನರ ಮಿತಿ ಮೀರಿದರೆ ದಂಡ

ಮದುವೆಗೆ ಜನರ ಮಿತಿ ಮೀರಿದರೆ ದಂಡ

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.