ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಗೊಲ್ಲರಹಟ್ಟಿಯ ನಿಗೂಢ ಸಾವಿನ ಪ್ರಕರಣ ಭೇದಿಸಿದ ಪೊಲೀಸರು

Team Udayavani, Oct 17, 2021, 10:58 PM IST

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಸಾಂದರ್ಭಿಕ ಚಿತ್ರ.

ಸಿರಿಗೆರೆ: ಭರಮಸಾಗರ ಹೋಬಳಿ ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ನಡೆದಿದ್ದ ನಾಲ್ವರ ನಿಗೂಢ ಸಾವಿನ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯ ಹಿರಿಯ ಮಗಳೇ ಮುದ್ದೆಗೆ ವಿಷ ಬೆರೆಸಿ ನಾಲ್ವರನ್ನು ಕೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ.

ಪ್ರಕರಣದ ವಿವರ
ಜು.12ರಂದು ಸಂಜೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ತಾಯಿ ಅಡುಗೆ ಮಾಡಲು ಪರಿಕರ, ತರಕಾರಿ ಸಿದ್ಧ ಮಾಡಿಟ್ಟುಕೊಂಡಿದ್ದಳು. ಅದೇ ಸಮಯಕ್ಕೆ ವಿದ್ಯುತ್‌ ಕೈಕೊಟ್ಟಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಮುದ್ದೆ ಮಾಡಲು ಒಲೆಯ ಮೇಲಿರಿಸಿದ್ದ ಪಾತ್ರೆಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದರೆಂದು ಭಾವಿಸಲಾಗಿತ್ತು.

ಈ ಪ್ರಕರಣದಲ್ಲಿ ಒಂದೇ ಕುಟುಂಬದ ತಿಪ್ಪಾ ನಾಯ್ಕ (45), ಸುಧಾಬಾಯಿ (40), ರಮ್ಯಾ (16) ಹಾಗೂ ಗುಂಡಿಬಾಯಿ (80) ಮೃತಪಟ್ಟಿದ್ದರು. ಜೀವನ್ಮರಣ ಹೋರಾಟ ನಡೆಸಿದ್ದ ರಾಹುಲ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.

ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದರು. ಅಡುಗೆ ಮಾಡಲು ಬಳಸಿದ್ದ ಪಾತ್ರೆ, ಆಹಾರ ಪದಾರ್ಥಗಳನ್ನು ವಿಧಿ ವಿಜ್ಞಾನ ಸಂಸ್ಥೆಗೆ ರವಾನಿಸಿದ್ದರು. ತಂದೆ, ತಾಯಿ, ಅಜ್ಜಿ ಮತ್ತು ಅಕ್ಕನ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಬೇಕೆಂದು ರಾಹುಲ್‌ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ:ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಸುಳಿವು ಕೊಟ್ಟ ಅನ್ನ, ಸಾರು
ಮನೆಯಲ್ಲಿ ಎಲ್ಲರೂ ಮುದ್ದೆ ಊಟ ಮಾಡಿದರೆ, ತನಗೆ ಮುದ್ದೆ ಬೇಡವೆಂದು ಹಟ ಹಿಡಿದು ಅನ್ನ ಮತ್ತು ಸಾರು ಮಾಡಿ ಉಂಡಿದ್ದ ಹಿರಿಯ ಮಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಡಿಸಿದ್ದರು. ಆಗ ಮುದ್ದೆಗೆ ವಿಷ ಹಾಕಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ.

ಬೈಗುಳವೇ ಶಾಪವಾಯ್ತು
ಮನೆಯಲ್ಲಿ ಬಡತನವಿದ್ದುದರಿಂದ ತನ್ನನ್ನು ಕೂಲಿ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವುದು, ವಿನಾ ಕಾರಣ ಬಯ್ಯುತ್ತಿದ್ದರು. ಇದೇ ಕಾರಣಕ್ಕೆ ವಿಷ ಬೆರೆಸಿದ್ದಾಗೆ 17 ವರ್ಷದ ಆರೋಪಿಯು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

4rambhat

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

3congress

ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ: ಭೀಮಣ್ಣ ನಾಯ್ಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chitradurga news

ಹಣದ ದುರಾಸೆಯಿಂದ ಅವನತಿ ಖಚಿತ

ಜವರಾಯನಾದ ಗ್ಯಾಸ್ ಟ್ಯಾಂಕರ್; ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು!

ಜವರಾಯನಾದ ಗ್ಯಾಸ್ ಟ್ಯಾಂಕರ್; ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು!

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿ

ಸಂವಿಧಾನ ಭಾರತದ ಪವಿತ್ರ ಗ್ರಂಥ: ಶೋಭಾ

ಸಂವಿಧಾನ ಭಾರತದ ಪವಿತ್ರ ಗ್ರಂಥ: ಶೋಭಾ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

8babasaheb

ಬಾಬಾ ಸಾಹೇಬ ಜ್ಞಾನದ ಸಂಕೇತ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

7country

ದೇಶದ ದಿಕ್ಕು ಬದಲಿಸಿದ್ದು ಅಂಬೇಡ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.