Udayavni Special

ತಲೆನೋವಾದ ಕೃಷಿ ಸಾಮಗ್ರಿ ಕಳವು

|ಹೊಳಲ್ಕೆರೆ ತಾಲೂಕಿನ ಗಡಿ ಭಾಗದಲ್ಲಿ ಬೆಲೆ ಬಾಳುವ ಶ್ರೀಗಂಧ-ಕೇಬಲ್‌ ಹೊತ್ತೂಯ್ಯುತ್ತಿರುವ ಕಳ್ಳರು

Team Udayavani, Dec 19, 2020, 6:40 PM IST

ತಲೆನೋವಾದ ಕೃಷಿ ಸಾಮಗ್ರಿ ಕಳವು

ಹೊಳಲ್ಕೆರೆ: ತಾಲೂಕಿನ ಗಡಿ ಭಾಗದ ಉಪ್ಪರಿಗೇನಹಳ್ಳಿ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ ಗ್ರಾಮಗಳಲ್ಲಿ ಕೃಷಿ ಬೆಳೆ ಹಾಗೂ ಪರಿಕರಗಳ ಕಳ್ಳತನ ಹೆಚ್ಚಾಗುತ್ತಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ.

ಉಪ್ಪರಿಗೇನಹಳ್ಳಿ ವ್ಯಾಪ್ತಿಯ ಕೆರೆಯಾಗಲಹಳ್ಳಿಯಲ್ಲಿ ಬೆಳೆದಿರುವ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೇಬಲ್‌ ಕಳವು ಮಾಡಲಾಗಿದೆ. ಕೆರೆಯಾಗಲಹಳ್ಳಿಯಲ್ಲಿ ಸುಮಾರು ಎರಡ್ಮೂರು ತಿಂಗಳ ಅಂತರದಲ್ಲಿ 10 ಲಕ್ಷ ರೂ. ಮೌಲ್ಯದ 20 ಶ್ರೀಗಂಧ ಮರಗಳು ಕಳ್ಳತನವಾಗಿವೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ. ಹೊಲಗಳಲ್ಲಿರುವ ಬೆಲೆ ಬಾಳುವ ವಸ್ತುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಡಿಕೆ, ತೆಂಗು, ಬಾಳೆ, ವೀಳ್ಯದೆಲೆಯಂತಹ ತೋಟಗಾರಿಕೆ ಬೆಳೆಗಳ ಜೊತೆಗೆ ಹಣ್ಣು, ಹೂವು, ಕಾಯಿಪಲ್ಲೆಬೆಳೆಯಲಾಗುತ್ತಿದೆ. ರೈತರು ಕೊಳವೆಬಾವಿ ಹಾಕಿಸಿ ಮೋಟಾರ್‌ ಅಳವಡಿಸಿ ಪೈಪ್‌ಲೈನ್‌ ಹಾಕಲು ಲಕ್ಷಾಂತರ ರೂ. ವ್ಯಯಿಸಿರುತ್ತಾರೆ. ಆದರೆ ತೋಟ ಹಾಗೂ ಹೊಲಗಳಲ್ಲಿರುವ ಕೊಳವೆಬಾವಿಗಳ ಮೋಟಾರ್‌, ವೈರ್‌, ಪೈಪ್‌ಗಳ ಕಳ್ಳತನ ಕೃಷಿಕರನ್ನು ಸಂಕಷ್ಟಕ್ಕೆ ತಳ್ಳಿದೆ. ಚೌಡಗೊಂಡನಹಳ್ಳಿಯ ಲೋಕೇಶ್‌ ಎಂಬುವರ ತೋಟದ ಕೊಳವೆಬಾವಿಯೊಳಗಿನಮೋಟಾರ್‌ ಪಂಪ್‌ ಮೇಲೆತ್ತಿ ಕೇಬಲ್‌ ಕಳ್ಳತನ ಮಾಡಲಾಗಿದೆ.

ಅದೇ ರೀತಿ ಗೋವಿಂದಪ್ಪ ಬಿನ್‌ ಮೂಡಲಗಿರಿಯಪ್ಪ ಎನ್ನುವವರ 100 ಮೀಟರ್‌ ಕೇಬಲ್‌, ಮಂಜಣ್ಣ ಬಿನ್‌ ತಿಮ್ಮಪ್ಪ ಅವರ 20 ಮೀಟರ್‌, ತಿಮ್ಮಪ್ಪ ತಂದೆ ತೊರಿಯಪ್ಪಅವರ 30 ಮೀಟರ್‌, ರಂಗಪ್ಪ ಬಿನ್‌ ತಿಮ್ಮಪ್ಪ ಅವರ 20 ಮೀಟರ್‌, ಗಿರೀಶ್‌ ಬಿನ್‌ ಸಣ್ಣತಿಮ್ಮಪ್ಪ ಅವರ 30 ಮೀಟರ್‌, ನಾಗರಾಜ್‌ ಅವರ 20 ಮೀಟರ್‌, ಮಹೇಶ್ವರಪ್ಪ ಅವರ 40 ಮೀಟರ್‌, ಗಿರೀಶ್‌ ತಂದೆ ರಾಮಪ್ಪ ಅವರ 20 ಮೀಟರ್‌,ಕೃಷ್ಣಮೂರ್ತಿ ಬಿನ್‌ ದಾಸಭೋವಿ ರಾಮಪ್ಪ ಅವರ 20 ಮೀಟರ್‌ ಕೇಬಲ್‌ ಕಳ್ಳತನ ಮಾಡಲಾಗಿದೆ. ಇನ್ನಾದರೂತ್ತಿದ್ದರೂ ಪೊಲೀಸರು ಹಾಗೂ ಸಂಬಂಧಿಸಿದವರು ಈ ಬಗ್ಗೆ ಗಮನ ನೀಡಿ ರೈತರ ಸ್ವತ್ತುಗಳ ರಕ್ಷಣೆಗೆ ಮುಂದಾಗಬೇಕಿದೆ.

ಕಳ್ಳತನ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಗಿದೆ. ಮಾಲು ಸಹಿತ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. -ರವೀಶ್‌, ಸಿಪಿಐ, ಹೊಳಲ್ಕೆರೆ

ಇತ್ತೀಚೆಗೆ ನಡೆದ ಕಳ್ಳತನದಿಂದ ರೈತರು ಕಂಗೆಟ್ಟಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು.ತೋಟಗಳಲ್ಲಿ ಮೋಟಾರ್‌, ಕೇಬಲ್‌ ಕಳ್ಳತನವಾಗದಂತೆ ಹಳ್ಳಿಗಳಲ್ಲಿ ಗಸ್ತು ವ್ಯವಸ್ಥೆ ಮಾಡಬೇಕು. ಪೊಲೀಸರು ರಾತ್ರಿ ಪಾಳಿಯಲ್ಲಿ ಹಳ್ಳಿ ರಸ್ತೆಗಳ ಮೇಲೆ ಗಸ್ತು ತಿರುಗುವುದರಿಂದ ಕಳ್ಳತನ ತಪ್ಪಿಸಲು ಸಾಧ್ಯ. ಇಲ್ಲವಾದಲ್ಲಿ ಕೃಷಿ ಮಾಡುವುದು ಕಠಿಣವಾಗಲಿದೆ. -ಲೋಕೇಶ್‌, ಚೌಡಗೊಂಡನಹಳ್ಳಿ

ಶ್ರೀಗಂಧ ಮರಗಳ ದಿಂಡುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗುತ್ತಿದ್ದರೂ ಪೊಲೀಸರುನಿರ್ಲಕ್ಷಿಸಿದ್ದಾರೆ. ಸರಕಾರದ ರಕ್ಷಣೆ ಇಲ್ಲದೆ ಬೆಳೆಗಾರ ಬೆಲೆ ಬಾಳುವ ಶ್ರೀಗಂಧ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ.ಆದ್ದರಿಂದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಳ್ಳರು ರೈತರ ಪ್ರಾಣ ತೆಗೆದು ಕಳ್ಳತನ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ. -ಕೆ.ಸಿ. ದಿನೇಶ್‌, ಉಪ್ಪರಿಗೇನಹಳ್ಳಿ

 

-ಎಸ್‌. ವೇದಮೂರ್ತಿ

ಟಾಪ್ ನ್ಯೂಸ್

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

bhajarangi-2

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

Untitled-1

ಪುತ್ತೂರು: ಕೃಷಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆ

1-2-a

ಬೆಂಗಳೂರು ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

chitrdurga news

ಜಯದೇವ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ

chitradurga news

ಮುರುಘಾ ಶ್ರೀಗಳಿಂದ ಶೂನ್ಯ ಪೀಠಾರೋಹಣ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಸಂತ್ರಸ್ತರ ಅಹವಾಲಿಗೆ ರಘುಮೂರ್ತಿ ಸ್ಪಂದನೆ

ಸಂತ್ರಸ್ತರ ಅಹವಾಲಿಗೆ ರಘುಮೂರ್ತಿ ಸ್ಪಂದನೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಕಸ, ಗ್ರಾಮಸ್ಥರಿಂದ ತರಾಟೆ, udayavanipaper, kannadanews,

ಕಸ ಹಾಕಿದವರಿಗೆ ಗ್ರಾಮಸ್ಥರಿಂದ ತರಾಟೆ

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

10

ಕಾನೂನು ಸಾಕ್ಷರತೆ ಅವಶ್ಯ: ನ್ಯಾ| ಚಂದ್ರಕಾಂತ

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.