Udayavni Special

2 ದಿನ ಪೂರೈಸಿದ ರೈತರ ಧರಣಿ

ಸರ್ಕಾರದ ಅವೈಜ್ಙಾನಿಕ ನೀತಿಯಿಂದ ಅನ್ನದಾತರಿಗೆ ಸಂಕಷ್ಟ

Team Udayavani, Feb 17, 2021, 6:38 PM IST

farmer protest

ಹೊಳಲ್ಕೆರೆ: ಕೃಷಿ ಚಟುವಟಿಕೆಗೆ ಕನಿಷ್ಠ ಪಕ್ಷ 5 ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದ ಬೆಸ್ಕಾಂ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡು ದಿನ ಪೂರೈಸಿತು.

ಇಲ್ಲಿಯ ತನಕ ಯಾವುದೇ ಜನಪ್ರತಿನಿಧಿ, ಬೆಸ್ಕಾಂ ಇಂಜಿನಿಯರ್‌ ಸೇರಿದಂತೆ ಯಾರೊಬ್ಬರೂ ಪ್ರತಿಭಟನಾನಿರತರನ್ನು ಭೇಟಿ ಮಾಡಿ ಅಹವಾಲು ಆಲಿಸಿಲ್ಲ. ಇದರಿಂದಾಗಿ ರೈತರು ಆಕ್ರೋಶಗೊಂಡಿದ್ದು, ಬುಧವಾರದಿಂದ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ  ಮಾತನಾಡಿ, ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತ ವಿರೋಧಿ  ನೀತಿ ಅನುಸರಿಸುತ್ತಿದ್ದು, ಅನ್ನದಾತರಿಗೆ ಯಾವುದೇ ಸೌಲಭ್ಯ ಕಲ್ಪಿಸದೆ ರೈತ ಪರ ಎನ್ನುತ್ತಾ ಮೊಸಳೆ ಕಣ್ಣೀರು ಸುರಿಸುವ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.

ಹೊಳಲ್ಕೆರೆ ತಾಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ, ವಿದ್ಯುತ್‌ ಇಲ್ಲದೆ ನಾಶವಾಗುವ ಹಂತಕ್ಕೆ  ತಲುಪಿದೆ. ರೈತರು ಸಾಲ ಮಾಡಿ ತೋಟಗಳನ್ನು ಉಳಿಸಿಕೊಂಡಿದ್ದಾರೆ. ವಿದ್ಯುತ್‌ ಇಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ 5 ಗಂಟೆ ವಿದ್ಯುತ್‌ ಪೂರೈಕೆ ಮಾಡಲು ಜಿಲ್ಲಾದಳಿತ ಮುಂದಾಗಬೇಕೆಂದು ಒತ್ತಾಯಿಸಿದರು.

ಕೆರೆಗಳಿಗೆ ನದಿ ನೀರು ಹರಿಸುವುದರಿಂದ ವಿದ್ಯುತ್‌ ಸಮಸ್ಯೆ ಕಡಿಮೆಯಾಗುವುದಿಲ್ಲ. ಕೃಷಿಗೆ ಶಾಶ್ವತವಾಗಿ ನದಿ ನೀರು ಹರಿಯುವಂತಹ ವ್ಯವಸ್ಥೆ ಮಾಡಬೇಕು. ಜಮೀನುಗಳಿಗೆನೀರು ನೇರವಾಗಿ ಹರಿಯುವ ಕೆಲಸ ಆಗಬೇಕು. ಆಗ ರೈತರಿಗೆ ವಿದ್ಯುತ್‌, ಬೋರ್‌ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

ಆರ್ಥಿಕ ಕುಸಿತದ ನಡುವೆಯೂ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ :ಸಿಎಂ

ಆರ್ಥಿಕ ಸ್ಥಿತಿ‌ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ

ರೈಲು ನಿಲ್ದಾಣಗಳಲ್ಲಿ ವೈಫೈಗೆ ಪ್ರಿಪೇಯ್ಡ್ ಪ್ಲಾನ್‌: ವೇಗದಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ

ರೈಲು ನಿಲ್ದಾಣಗಳಲ್ಲಿ ವೈಫೈಗೆ ಪ್ರಿಪೇಯ್ಡ್ ಪ್ಲಾನ್‌: ವೇಗದಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ

ಇರಾಕ್‌ಗೆ ಪೋಪ್‌ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ

ಇರಾಕ್‌ಗೆ ಪೋಪ್‌ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ

ಪ್ರೌಢ ಶಾಲೆಯ 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಒಕ್ಕಲಿಗರ ಸಂಘಕ್ಕೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಿ: ಹೈಕೋರ್ಟ್‌ ಆದೇಶ

ಒಕ್ಕಲಿಗರ ಸಂಘಕ್ಕೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಿ: ಹೈಕೋರ್ಟ್‌ ಆದೇಶ

ಸಂಸದ ಓವೈಸಿ ವಿಜಯಪುರ ಪ್ರವೇಶಕ್ಕೆ ನಿರ್ಬಂಧ

redmi

ರೆಡ್ ಮಿ ನೋಟ್‍-10 ಸರಣಿಯ 3 ಫೋನ್‍ಗಳ ಬಿಡುಗಡೆ: ಏನಿವುಗಳ ವಿಶೇಷ? ರೇಟ್‍ ಎಷ್ಟು?








ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ಥಿಕ ಕುಸಿತದ ನಡುವೆಯೂ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ :ಸಿಎಂ

ಆರ್ಥಿಕ ಸ್ಥಿತಿ‌ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ

satish sail

ಡೆಮೋ ರೈಲು ಓಡಿಸಲು ಸತೀಶ ಸೈಲ್‌ ಆಗ್ರಹ

MAHADAYTI

ಮಹದಾಯಿ ನದಿಯಲ್ಲಿ ಲವಣಾಂಶ ಹೆಚ್ಚಳ

Koppala farmers

ತೋಟಗಾರಿಕೆಯತ್ತ ಅನ್ನದಾತನ ಚಿತ್ತ

water problem

ಹೊಸಳ್ಳಿಯಲ್ಲಿ ನೀರಿಗೆ ಪರದಾಟ

MUST WATCH

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

udayavani youtube

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

udayavani youtube

ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

udayavani youtube

ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani

ಹೊಸ ಸೇರ್ಪಡೆ

ಆರ್ಥಿಕ ಕುಸಿತದ ನಡುವೆಯೂ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ :ಸಿಎಂ

ಆರ್ಥಿಕ ಸ್ಥಿತಿ‌ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ

ರೈಲು ನಿಲ್ದಾಣಗಳಲ್ಲಿ ವೈಫೈಗೆ ಪ್ರಿಪೇಯ್ಡ್ ಪ್ಲಾನ್‌: ವೇಗದಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ

ರೈಲು ನಿಲ್ದಾಣಗಳಲ್ಲಿ ವೈಫೈಗೆ ಪ್ರಿಪೇಯ್ಡ್ ಪ್ಲಾನ್‌: ವೇಗದಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ

ಇರಾಕ್‌ಗೆ ಪೋಪ್‌ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ

ಇರಾಕ್‌ಗೆ ಪೋಪ್‌ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ

satish sail

ಡೆಮೋ ರೈಲು ಓಡಿಸಲು ಸತೀಶ ಸೈಲ್‌ ಆಗ್ರಹ

MAHADAYTI

ಮಹದಾಯಿ ನದಿಯಲ್ಲಿ ಲವಣಾಂಶ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.