ಬೇಕಾಬಿಟ್ಟಿ ಕಾಮಗಾರಿಗೆ ಬ್ರೇಕ್‌ ಯಾವಾಗ?


Team Udayavani, Feb 18, 2020, 12:41 PM IST

cd-tdy-1

ಸಾಂದರ್ಭಿಕ ಚಿತ್ರ

ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಐನಹಳ್ಳಿ ಗೇಟ್‌ನಿಂದ ಕಾತ್ರಾಳು ವಿದ್ಯಾಪೀಠದ ವರೆಗಿನ ಸುಮಾರು 5 ಕಿಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಮುಂದಿನ ಮಳೆಗಾಲದಲ್ಲಿ ಗಿಡಗಳನ್ನು ನೆಡುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ಇಟಾಚಿ ಯಂತ್ರ ಬಳಸಿ ಗುಂಡಿಗಳನ್ನು ತೆಗೆಯುವ ಕಾರ್ಯ ಮಾಡಲಾಗುತ್ತಿದೆ. ಆದರೆ ಇದು ಅಸಮಪರ್ಕವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ ಮೊದಲು ಈ ಮಾರ್ಗದಲ್ಲೇ ಹಾದು ಹೋಗಿತ್ತು. ಬಳಿಕ ಕಾತ್ರಾಳು ಕೆರೆಯನ್ನು ಬಳಕೆ ಮಾಡಿ ನೇರ ರಸ್ತೆಯನ್ನಾಗಿಸಿದ ಬಳಿಕ ಇಲ್ಲಿನ 5 ಕಿಮೀ ಉದ್ದದ ರಸ್ತೆ ಕೆಲವು ವರ್ಷಗಳಿಂದ ಹಾಳು ಬಿದ್ದಿತ್ತು. ಗುಂಡಿಗಳಿಂದ ತುಂಬಿದ್ದ ಈ ರಸ್ತೆಯಲ್ಲಿ ಜನರ ಸಂಚಾರವಿಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಗಿಡಗಳು ಬೆಳೆದು ರಸ್ತೆಯೇ ಕಾಣದಂತಾಗಿತ್ತು. ಹಲವು ತಿಂಗಳುಗಳ ಹಿಂದೆ 5 ಕಿಮೀ ಉದ್ದದ ರಸ್ತೆಯನ್ನು ಈ ಹಿಂದೆ ಇದ್ದ ಹೆದ್ದಾರಿಯ ಅಗಲಕ್ಕೆ ರಸ್ತೆಯನ್ನು ಡಾಂಬರೀಕರಣಗೊಳಿಸಿ ರಸ್ತೆ ಇಕ್ಕೆಲಗಳಲ್ಲಿ ಬಿಳಿ ಪಟ್ಟಿ, ರಿಪ್ಲೆಕ್ಟರ್‌ಗಳನ್ನು, ಸೂಚನಾ ಫಲಕಗಳನ್ನು ಹಾಗೂ ಒಂದು ಪ್ರಮುಖ ರಸ್ತೆ ಸೇತುವೆಯನ್ನು ಅಭಿವೃದ್ಧಿಪಡಿಸಲಾಯಿತು. ಬಳಿಕ ಹಲವಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ.

ರಸ್ತೆಯನ್ನೂ ಬಿಡದೆ ಒತ್ತುವರಿ!: ಅದ್ಯಾವಾಗ ಈ ರಸ್ತೆ ಹಾಳು ಬಿದ್ದಿತ್ತೋ, ಇನ್ನೇನು ಸರ್ಕಾರ ಈ ರಸ್ತೆಯನ್ನು ಮರೆತಂತಿದೆ ಎಂದು ತಿಳಿದೋ ಏನೋ ರಸ್ತೆಯ ಇಕ್ಕೆಲಗಳ ಜಮೀನಿನ ಕೃಷಿಕರು ಜಮೀನುಗಳ ಬಳಿ ಡಾಂಬರ್‌ ರಸ್ತೆಯ ಅಂಚಿನವರೆಗೆ ಜಮೀನು ಉಳುಮೆ ಮಾಡಿಕೊಂಡು ರಸ್ತೆ ಒತ್ತುವರಿ ಮಾಡಿಬಿಟ್ಟಿದ್ದಾರೆ. ಕೆಲವರು ಅಡಿಕೆ, ತೆಂಗಿನಮರಗಳನ್ನೂ ಬೆಳೆಸಿದ್ದಾರೆ. ಇನ್ನು ಕೆಲವರು ರಸ್ತೆ ಅಂಚಿನವರೆಗೆ ಕಲ್ಲುಕಂಬ ನೆಟ್ಟು ತಮ್ಮ ಗಡಿಯನ್ನು ಗುರುತಿಸಿಕೊಂಡಿದ್ದಾರೆ.

ಇಂತಹ ರಸ್ತೆಯ ಇಕ್ಕೆಲಗಳಲ್ಲಿ ಇದೀಗ ಅರಣ್ಯ ಇಲಾಖೆ ವತಿಯಿಂದ ಮುಂದಿನ ಮಳೆಗಾಲಕ್ಕೆ ಗಿಡಗಳನ್ನು ನೆಡಲು ಗುಂಡಿಗಳನ್ನು ಇಟಾಚಿ ಯಂತ್ರದಿಂದ ತೆಗೆಯಲಾಗುತ್ತಿದೆ. ಈ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಿರುವ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆಗಳ ಸಮನ್ವಯದ ಕೊರತೆಯಿಂದ ರಸ್ತೆ ಒತ್ತುವರಿಯನ್ನು ಲೆಕ್ಕಿಸದೆ ಗಿಡಗಳನ್ನು ನೆಡಲು ರಸ್ತೆ ಗುಂಡಿಗಳನ್ನು ತೆಗೆಸಲಾಗುತ್ತಿದೆ. ಕೆಲವೆಡೆ ಒತ್ತುವರಿ ಆದ ಕಡೆ ಗುಂಡಿಯನ್ನೇ ತೆಗೆದಿಲ್ಲ. ಇನ್ನು ಕೆಲ ಭಾಗಗಳಲ್ಲಿ ರಸ್ತೆಯ ಅಂಚಿಗೆ ಗುಂಡಿ ಅಗೆಯಲಾಗಿದ್ದರೆ, ಹಲವೆಡೆ ರಸ್ತೆಯಿಂದ ನಾಲ್ಕಾರು ಅಡಿ ದೂರದಲ್ಲಿ ಗುಂಡಿ ತೆಗೆಯಲಾಗಿದೆ. ಸರ್ಕಾರದ ಇಲಾಖೆಗಳ ಈ ಕೆಲಸಗಳನ್ನು ನೋಡಿದರೆ ಒಂದೊಮ್ಮೆ ಯಾರಾದರೂ ರಸ್ತೆಯ ಅರ್ಧಕ್ಕೆ ಒತ್ತುವರಿ ಮಾಡಿದರೂ ಕೇಳುವವರಿಲ್ಲ, ಇಲ್ಲಿ ಒತ್ತುವರಿ ಮಾಡಿದವರದೇ ಆಟ ಎಂಬಂತಾಗಿದೆ. ರಸ್ತೆಯನ್ನು ಯಾರು ಎಷ್ಟು ಒತ್ತುವರಿ ಮಾಡಿರುತ್ತಾರೋ ಅದನ್ನು ಬಿಟ್ಟು ಅರಣ್ಯ ಇಲಾಖೆ ಗಿಡಗಳನ್ನು ನೆಡಲು ಗುಂಡಿ ಅಗೆಸುತ್ತಿರುವುದು ಮಾತ್ರ ವಿಪರ್ಯಾಸ.

 

-ಎಚ್‌.ಬಿ. ನಿರಂಜನ ಮೂರ್ತಿ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

18

Road mishap: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.