Udayavni Special

ಎಬಿವಿಪಿಯಿಂದ ಆರೋಗ್ಯ ತಪಾಸಣೆ-ಚಿಕಿತ್ಸಾ ಶಿಬಿರ


Team Udayavani, Dec 7, 2020, 7:25 PM IST

ಎಬಿವಿಪಿಯಿಂದ ಆರೋಗ್ಯ ತಪಾಸಣೆ-ಚಿಕಿತ್ಸಾ ಶಿಬಿರ

ಚಿತ್ರದುರ್ಗ: ಮನುಷ್ಯನ ಬದುಕು ಸಾಮರಸ್ಯದಿಂದ ಕೂಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಪ್ರಮುಖ್‌ ಈ. ಗಂಗಾಧರ ಹೇಳಿದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಪರಿನಿರ್ವಾಣ ದಿನದ ಅಂಗವಾಗಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಗರದ ತಮಟಗಲ್‌ ರಸ್ತೆಯಲ್ಲಿ ನೆಲೆಸಿರುವ ನಿರಾಶ್ರಿತರು ಹಾಗೂ ಅಲೆಮಾರಿ ಜನಾಂಗದ ಪ್ರದೇಶದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಬಿ.ಆರ್‌. ಅಂಬೇಡ್ಕರ್‌ ನಮ್ಮ ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಆ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂಥವರ ಪರಿನಿರ್ವಾಣ ದಿನದಂದು ಬಡ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಉತ್ತಮ ಬೆಳೆವಣಿಗೆ. ಸಾರ್ವಜನಿಕರು ಇದರ ಪ್ರಯೋಜನಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಎಬಿವಿಪಿ ನಗರಾಧ್ಯಕ್ಷ ಅನಿಲ್‌ಕುಮಾರ್‌ಮಾತನಾಡಿ, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಕಳೆದ ಹಲವು ದಿನಗಳಿಂದ ಅನೇಕ ಶಿಬಿರಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಅಂಬೇಡ್ಕರ್‌ ಅವರ ನಿರ್ವಾಣದ ದಿನವಾದ ಇಂದು ನಡೆಯುತ್ತಿರುವ ಶಿಬಿರ ವಿಶೇಷವಾಗಿದೆ. ನಮ್ಮ ದೇಶದಲ್ಲಿಅನೇಕ ಬಡವರು ಉತ್ತಮ ವೈದ್ಯಕೀಯ ಸೇವೆ ದೊರೆಯದೆ ವಂಚಿತರಾಗಿದ್ದಾರೆ. ಅಂತಹ ಜನರನ್ನು ಗುರುತಿಸಿ ಇಂದು ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿರುವುದು ಪುಣ್ಯದ ಕೆಲಸ. ಹಾಗಾಗಿ ಬಡವರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಲಾಗುತ್ತದೆ. ನಮ್ಮ ಈ ಕೆಲಸಗಳಿಗೆ ಅಂಬೇಡ್ಕರ್‌ ಸ್ಫೂರ್ತಿಯಾಗಿದ್ದಾರೆ ಎಂದರು.

ಎಬಿವಿಪಿ ನಗರ ಉಪಾಧ್ಯಕ್ಷ ವಿಕಾಸ್‌, ಜಿಲ್ಲಾ ಸಂಚಾಲಕ ಸುರೇಶ್‌, ನಗರ ಸಂಘಟನಾ ಕಾರ್ಯದರ್ಶಿ ಮಂಜುನಾಥ್‌, ನಗರ ಕಾರ್ಯದರ್ಶಿ ಅವಿನಾಶ್‌, ಅಜಯ್‌, ಮನೋಜ್‌, ದೀಪಕ್‌, ಜಯಂತ್‌, ವಿದ್ಯಾರ್ಥಿನಿಪ್ರಮುಖ್‌ ಕೃತಿಕಾ, ಛಾಯಾ, ವಂದಿತಾ, ಚಂದ್ರಶೇಖರ್‌, ಪ್ರಮೋದ್‌ ಮತ್ತಿತರರು ಉಪಸ್ಥಿತರಿದ್ದರು. ಜಿಜ್ಞಾಸ ಘಟಕದ ಜಿಲ್ಲಾ ಸಂಚಾಲಕ ರುಚಿತ್‌ ನೇತೃತ್ವದ ತಂಡ ಆರೋಗ್ಯ ಶಿಬಿರ ನಡೆಸಿಕೊಟ್ಟಿತು. ಸುಮಾರು 300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಅಗತ್ಯ ಇರುವವರಿಗೆ ಉಚಿತ ಚಿಕಿತ್ಸೆ ನೀಡಿ ಔಷಧ ವಿತರಿಸಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

sudhakar

ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್

vijaya-final

2023ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆ: ಬಿ.ವೈ. ವಿಜಯೇಂದ್ರ

ಹುಣಸೋಡು ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ

ಹುಣಸೋಡು ದುರ್ಘಟನೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ

Poco C3: One million units sale

ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

ಪರಿಷತ್ ಗಲಾಟೆ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿ

Big update: No extra attempt for UPSC preliminary examination, Centre tells SC

‘ಯುಪಿಎಸ್‌ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharamasagara, Chithrdurga

ನಮ್ಮದು ನ್ಯಾಯೋಚಿತ ಹೋರಾಟ: ಕನಕ ಶ್ರೀ

Suresh Kumar

ಊರಿನ ಋಣ ತೀರಿಸುವ ಕಾರ್ಯ ದೊಡ್ಡದು

Hosadurga

ಬುಡಕಟ್ಟು ಹಿನ್ನೆಲೆ  ಜಾತಿ ಎಸ್‌ಸಿ-ಎಸ್‌ಟಿ ಮೀಸಲಿಗೆ ಅರ್ಹ: ಪ್ರೊ| ಕೆ.ಎಂ. ಮೈತ್ರಿ

Chithradurga

ತಾಪಂಗೆ ಬೇಕಿದೆ ಅನುದಾನ-ಅಧಿಕಾರ

Dharmasthala Organization Service

ಧರ್ಮಸ್ಥಳ ಸಂಸ್ಥೆ ಸೇವೆ ಸ್ತುತ್ಯರ್ಹ

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

ಅಂತರ್ಜಲ ವೃದ್ಧಿಗೆ ಜಾಗೃತಿ ಮೂಡಿಸಿ; ಮಹ್ಮದ್‌ ಇಸ್ಮಾಯಿಲ್

ಅಂತರ್ಜಲ ವೃದ್ಧಿಗೆ ಜಾಗೃತಿ ಮೂಡಿಸಿ; ಮಹ್ಮದ್‌ ಇಸ್ಮಾಯಿಲ್

SANDOOR WATER ISSSUE

ನೀರಿನ ಘಟಕಕ್ಕೆ ವಿದ್ಯುತ್‌ ಕಡಿತ -ಎಚ್ಚರಿಕೆ

Hosapete Ballary

ಬಿಎಸ್‌ವೈ ಕೊಟ್ಟ ಮಾತು ಹುಸಿಯಾಗದಿರಲಿ

ಜನರ ನಿರೀಕ್ಷೆ ಹುಸಿ ಮಾಡಿದ ಡಿಸಿಎಂ: ಶಾಸಕ ಡಾ| ಚವ್ಹಾಣ

ಜನರ ನಿರೀಕ್ಷೆ ಹುಸಿ ಮಾಡಿದ ಡಿಸಿಎಂ: ಶಾಸಕ ಡಾ| ಚವ್ಹಾಣ

sudhakar

ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.