ಹೊಳಲ್ಕೆರೆ ಪಪಂ ಇನ್ಮುಂದೆ ಪುರಸಭೆ

ಹೊಸ ವರ್ಷದ ಮೊದಲ ದಿನವೇ ಪಟ್ಟಣದ ಜನರಿಗೆ ಸಿಹಿ ಸುದ್ದಿ,ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನಿರೀಕ್ಷೆ

Team Udayavani, Jan 3, 2021, 7:21 PM IST

ಹೊಳಲ್ಕೆರೆ ಪಪಂ ಇನ್ಮುಂದೆ ಪುರಸಭೆ

ಹೊಳಲ್ಕೆರೆ: ಹೊಳಲ್ಕೆರೆ ಪಟ್ಟಣ ಪಂಚಾಯತ್‌ 2021ರ ಜನವರಿ 1 ರಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ಪಟ್ಟಣದ ಬಹು ಕಾಲದ ಕನಸು ನನಸಾಗಿದೆ. ಶಾಸಕ ಎಂ. ಚಂದ್ರಪ್ಪ ಪುರಸಭೆಯನ್ನಾಗಿಸುವಲ್ಲಿ ಅಹರ್ನಿಶಿ ಶ್ರಮಿಸಿ ಯಶಸ್ವಿಯಾಗಿದ್ದಾರೆ.

ಹಲವಾರು ದಶಕಗಳಿಂದ ಪಟ್ಟಣದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕೊರಗು ಜನರಲ್ಲಿತ್ತು.ಒಂದಿಷ್ಟು ಸರಕಾರಿ ಕಟ್ಟಡಗಳು ಬೃಹದಾಕಾರವಾಗಿ ತಲೆ ಎತ್ತಿದ್ದನ್ನು ಬಿಟ್ಟರೆ ಜನರ ನಿರೀಕ್ಷೆಯಂತೆಪ್ರಗತಿ ಸಾಧಿಸುವಲ್ಲಿ ಪಟ್ಟಣ ಪಂಚಾಯತ್‌ ವಿಫಲವಾಗಿತ್ತು. ರಸ್ತೆ, ಚರಂಡಿ ಬೆಳಕಿನ ಸೌಲಭ್ಯ, ಕುಡಿಯವ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇತ್ತು. ಪಪಂಗೆ ಸರಕಾರದಿಂದನಿರೀಕ್ಷಿತ ಅನುದಾನ ದೊರೆಯದೆ ಅಭಿವೃದ್ಧಿ ಪ್ರಸಕ್ತ ವರ್ಷ ಜ. 1ರಿಂದ ಪುರಸಭೆಯಾಗಿದ್ದು, 14.437 ಚದರ ಮೀಟರ್‌ ವ್ಯಾಪ್ತಿ ಹೊಂದಿದೆ. ಈಗ ಪುರಸಭೆಯ ವ್ಯಾಪ್ತಿಗೆ 9 ಹಳ್ಳಿಗಳು ಸೇರಿಕೊಂಡಿವೆ.

ತಾಲೂಕಿನ 2011ನೇ ಸಾಲಿನ ಜನಗಣತಿ ಪ್ರಕಾರ ಪಟ್ಟಣದ ಈಗಿನ ಜನಸಂಖ್ಯೆ 15,783 ಇದೆ. ಪುರಸಭೆಆಗಲು ಬೇಕಾದ ಜನಸಂಖ್ಯೆ 20,000. ಹಾಗಾಗಿ ಪಟ್ಟಣದ ಸಮಿಪದ ಗ್ರಾಮಗಳಾದ ಹಳ್ಳೇಹಳ್ಳಿ ಲಂಬಾಣಿಹಟ್ಟಿ, ಕುಡಿನೀರುಕಟ್ಟೆ, ಕುಡಿನೀರುಕಟ್ಟೆ ಲಂಬಾಣಿ ಹಟ್ಟಿ, ಜೈಪುರ, ಜಯಂತಿ ನಗರ, ಗುಂಡೇರಿ ಕಾವಲ್‌, ಹೊಳಲ್ಕೆರೆ ಲಂಬಾಣಿಹಟ್ಟಿ, ಚೀರನಹಳ್ಳಿ, ಕಂಬದೇವರಹಟ್ಟಿ ಗಳನ್ನು ಪುರಸಭೆಗೆ ಸೇರ್ಪಡೆ ಮಾಡಿ ಕೊಳ್ಳಲಾಗಿದೆ. ಇದರಿಂದಾಗಿ ಪುರಸಭೆಯಾಗಿಪರಿವರ್ತನೆಯಾಗಲು ಬೇಕಾದ 21,746 ಜನಸಂಖ್ಯೆಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಲಿನ ಕಂದಾಯ ಗ್ರಾಮಗಳ ಜಮೀನು ಸೇರಿದಂತೆ ವಿವಿಧ ಸ್ವತ್ತುಗಳನ್ನು ಪುರಸಭೆಯ ವ್ಯಾಪ್ತಿಗೆ ಸೇರಿಸುವ ಮೂಲಕ ನಿರ್ಣಯ ಅಂಗೀಕರಿಸಲಾಗಿದೆ. 10 ಕೋಟಿ ರೂ. ಅನುದಾನದಲ್ಲಿ ಪುರಸಭೆ ಕಟ್ಟಡ ನಿರ್ಮಾಣಗೊಳ್ಳಲಿದ್ದು, ನೀಲನಕಾಶೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ.

ಒಟ್ಟಿನಲ್ಲಿ ಪಟ್ಟಣ ಪಂಚಾಯತ್‌ದಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು ಪಟ್ಟಣದ ನಾಗರಿಕರಲ್ಲಿ ಸಂತಸ ಮೂಡಿಸಿದೆ. ಇನ್ನಾದರೂಅಭಿವೃದ್ಧಿ ಕಾರ್ಯಗಳಿಗೆ ವೇಗವಾಗಿ ಚಾಲನೆ ದೊರೆಯಲಿ ಎಂಬುದು ಎಲ್ಲರ ಅಪೇಕ್ಷೆ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಪಟ್ಟಣ ಪಂಚಾಚಾಯತ್‌ಗೆ ಬರುತ್ತಿರಲಿಲ್ಲ.ಇದರಿಂದ ಪಟ್ಟಣದ ಅಭಿವೃದ್ಧಿ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ಇತ್ತು. ಶಾಸಕರು ಪುರಸಭೆ ಮಾಡುವ ಮೂಲಕ ಇಲ್ಲಿನ ಜನರಿಗೆ ಹೊಸ ಭರವಸೆ ನೀಡಿದ್ದಾರೆ. ಹೊಳಲ್ಕೆರೆಯಲ್ಲಿ ಅಭಿವೃದ್ಧಿ ಪರ್ವ ಆರಂಭಕ್ಕೆ ಅಡಿಗಲ್ಲು ಹಾಕಿದಂತಾಗಿದೆ. -ಆರ್‌.ಎ. ಅಶೋಕ್‌, ಪುರಸಭೆ ಅಧ್ಯಕ್ಷರು

 

ಹೊಳಲ್ಕೆರೆ ಪಟ್ಟಣವನ್ನು ಪುರಸಭೆಯನ್ನಾಗಿ ಮಾಡಲು ಸಾಕಷ್ಟು ಸಮಯ ಬೇಕು. ಅದಕ್ಕೆ ಪೂರಕ ದಾಖಲೆಯನ್ನು ಸಿದ್ಧಪಡಿಸಿಸಲ್ಲಿಸಿದ ಒಂದೇ ವಾರದಲ್ಲಿ ಸರಕಾರದಿಂದಆದೇಶ ಹೊರಡಿಸಲು ಶಾಸಕ ಎಂ. ಚಂದ್ರಪ್ಪ ಸಾಕಷ್ಟು ಶ್ರಮಿಸಿದ್ದಾರೆ. ಅವರು ಹಗಲು ರಾತ್ರಿಎನ್ನದೆ ವಿಧಾನಸೌಧ ಪಡಸಾಲೆಯಲ್ಲಿ ಕೆಲಸ ಮಾಡಿದ ಪರಿಣಾಮ ಇಂದು ಪುರಸಭೆಯಾಗಿದೆ. -ಎ. ವಾಸಿಂ, ಪುರಸಭೆ ಮುಖ್ಯಾಧಿಕಾರಿ

 

-ಎಸ್‌. ವೇದಮೂರ್ತಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.