Udayavni Special

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ


Team Udayavani, Nov 29, 2020, 6:06 PM IST

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಚಿತ್ರದುರ್ಗ: ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಿಂದ 2017-18ರಿಂದ 2020-21ನೇ ಸಾಲಿನವರೆಗೆ 139.47 ಕೋಟಿ ರೂ.ಗಳಲ್ಲಿ ಒಟ್ಟು 167 ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದರೂ ಇನ್ನು ಆರಂಭವಾಗದಕಾಮಗಾರಿಗಳನ್ನು ರದ್ದು ಮಾಡಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಜಿಲ್ಲಾ ಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಖನಿಜ ಪ್ರತಿಷ್ಠಾನದ ಸಭೆಯ ನಂತರ ಅವರುನೀಡಿದರು.2017-18ರಲ್ಲಿ 21 ಕೋಟಿ, 2019-20ರಲ್ಲಿ 65.17 ಕೋಟಿ, 2020-2021ರಲ್ಲಿ 53.30 ಕೋಟಿ ರೂ. ಸೇರಿ ಒಟ್ಟು 139.40 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಅನುಮೋದಿಸಲಾಗಿದೆ. ಇದರಲ್ಲಿ 85.34 ಕೋಟಿಯ 131 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಕೇವಲ 5 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಾಗೂ 20.55 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ. ಇದಕ್ಕೆಸಚಿವರು 2017-2018ನೇ ಸಾಲಿನಲ್ಲಿ ಕೈಗೊಂಡ ಕ್ರಿಯಾ ಯೋಜನೆ ಕಾಮಗಾರಿಗಳನ್ನು ಇನ್ನು ಪೂರ್ಣಗೊಳಿಸಿಲ್ಲ.ವಿಳಂಬ ಮಾಡದೆ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲುಅನುಷ್ಠಾನಾಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಡಳಿತಾತ್ಮಕ ಅನುಮೋದನೆ ನೀಡಿದ 131 ಕಾಮಗಾರಿಗಳಲ್ಲಿ 23.56 ಕೋಟಿ ರೂ.ಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ 22 ಕಾಮಗಾರಿಗಳು, ಪರಿಸರ ಸಂರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು 5 ಕಾಮಗಾರಿಗೆ 7.70 ಕೋಟಿ, ಹೆಲ್ತ್‌ಕೇರ್‌ನ 22 ಕಾಮಗಾರಿಗೆ 6.2 ಕೋಟಿ, ಶಿಕ್ಷಣದ 55 ಕಾಮಗಾರಿಗೆ ಸಂಬಂಧಿಸಿದಂತೆ 29.97 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 10 ಕಾಮಗಾರಿಗೆ 10.17 ಕೋಟಿ, ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣಇಲಾಖೆಗೆ 6 ಕಾಮಗಾರಿಗೆ 4.31 ಕೋಟಿ, ಕೌಶಲ್ಯಾಭಿವೃದ್ಧಿ 4 ಕಾಮಗಾರಿಗೆ 1.70 ಕೋಟಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ 7 ಕಾಮಗಾರಿಗೆ 1.44 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಾಗತಿಕವಾಗಿ ಹಾಗೂ ದೇಶದಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗ ತಡೆಗಟ್ಟಲು ಡಿಎಂಎಫ್‌ ನಿ ಧಿಯಡಿಯಲ್ಲಿ ಸಂಗ್ರಹವಾದ ಶೇ.30 ರಷ್ಟು ಅನುದಾನ ಬಳಸಲು ಅವಕಾಶ ಮಾಡಿಕೊಡಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ಗಾಗಿ 36 ಕೋಟಿ ರೂ. ಮೀಸರಿಸಿದ್ದು, ಇದರಲ್ಲಿ 8.97 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೋವಿಡ್‌ ಗೆ ಅಗತ್ಯವಿರುವ ವೈದ್ಯಕೀಯ ಪರಿಕರ, ಲ್ಯಾಬ್‌ ಸೇರಿದಂತೆ ಇನ್ನಿತರ ಉದ್ದೇಶಕ್ಕಾಗಿ ಖರ್ಚು ಮಾಡಬಹುದಾಗಿದೆ. ಈ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ವೆಚ್ಚ ಮಾಡುವಂತಿಲ್ಲ ಎಂದರು.

ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೊಸದಾಗಿ ಸಂಗ್ರಹವಾಗುವ ಡಿಎಂಎಫ್‌ ನಿ ಧಿಯಲ್ಲಿ 25 ಕೋಟಿ ರೂ. ಮೀಸರಿಸಲಾಗಿದೆ. ಇನ್ನೂ ಅಗತ್ಯವಿರುವ ಅನುದಾನವನ್ನು ಗರಿಷ್ಠ ಮಟ್ಟದಲ್ಲಿ ನೀಡಲಾಗುತ್ತದೆ ಎಂದು ಸಮಿತಿಯ ಎಲ್ಲ ಸದಸ್ಯರು ಇದಕ್ಕೆ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದರು. ಮೆಡಿಕಲ್‌ ಕಾಲೇಜು ಆರಂಭಿಸುವುದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ಗೂಳಿಹಟ್ಟಿ ಡಿ. ಶೇಖರ್‌, ಎಂ. ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್‌, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಯೋಗೇಶ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

mandaya

ಕಬ್ಬಿನ ತರಗಿಗೆ ಹಚ್ಚಿದ್ದ ಬೆಂಕಿಗೆ ಸಿಲುಕಿ ರೈತ ಸಾವು

Ramesh-jaraki

ಕರ್ನಾಟಕದ ಗಡಿ ಭಾಗಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ: ರಮೇಶ್ ಜಾರಕಿಹೊಳಿ‌

RCB

2020ರ 12 ಆಟಗಾರರನ್ನು ಉಳಿಸಿಕೊಂಡ RCB: 2021ರಲ್ಲಿ ಬೆಂಗಳೂರು ಪರ ಯಾರೆಲ್ಲಾ ಆಡಲಿದ್ದಾರೆ ?

tandav

ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ

Kunal-Gosh

‘ಬಂಗಾಳದ ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ’ ಘೋಷಣೆ: ಕಳಂಕದಿಂದ ಪಾರಾಗಲು ಟಿಎಂಸಿ ಯತ್ನ

ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲ‌ ಮಾತಾ ಪ್ರಸಾದ್‌ ನಿಧನ

ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲ‌ ಮಾತಾ ಪ್ರಸಾದ್‌ ನಿಧನ

ಕೃಷಿಗೆ ಮಾರಕವಾದ ಕಾಯ್ದೆ ಹಿಂಪಡೆಯದಿದ್ದಲ್ಲಿ ರೈತರ ದಂಗೆ ಖಚಿತ : ಸಿದ್ದರಾಮಯ್ಯ ಎಚ್ಚರಿಕೆ

ಕೃಷಿಗೆ ಮಾರಕವಾದ ಕಾಯ್ದೆ ಹಿಂಪಡೆಯದಿದ್ದರೆ ರೈತರ ದಂಗೆ ಖಚಿತ : ಸರಕಾರಕ್ಕೆ ಸಿದ್ದು ಎಚ್ಚರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala Organization Service

ಧರ್ಮಸ್ಥಳ ಸಂಸ್ಥೆ ಸೇವೆ ಸ್ತುತ್ಯರ್ಹ

The Kukwadeshwari Fair

ಶ್ರದ್ಧಾ ಭಕ್ತಿಯ ಕುಕ್ವಾಡೇಶ್ವರಿ ಜಾತ್ರೆ

The final list of voters is published

ಮತದಾರರ ಅಂತಿಮ ಪಟ್ಟಿ ಪ್ರಕಟ: ಡಿಸಿ ಕವಿತಾ

Construction of Srirama Mandir

ಚಿತ್ರದುರ್ಗ: ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

cleaning

ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಲು ಮನವಿ

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

mandaya

ಕಬ್ಬಿನ ತರಗಿಗೆ ಹಚ್ಚಿದ್ದ ಬೆಂಕಿಗೆ ಸಿಲುಕಿ ರೈತ ಸಾವು

Preparing for the Republic Day

ಗಣರಾಜ್ಯೋತ್ಸವಕ್ಕೆಸಕಲ ಸಿದ್ಧತೆ

Ramesh-jaraki

ಕರ್ನಾಟಕದ ಗಡಿ ಭಾಗಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ: ರಮೇಶ್ ಜಾರಕಿಹೊಳಿ‌

The evolution of the country by youth power

ಯುವಶಕ್ತಿಯಿಂದ ದೇಶದ ವಿಕಾಸ

RCB

2020ರ 12 ಆಟಗಾರರನ್ನು ಉಳಿಸಿಕೊಂಡ RCB: 2021ರಲ್ಲಿ ಬೆಂಗಳೂರು ಪರ ಯಾರೆಲ್ಲಾ ಆಡಲಿದ್ದಾರೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.