Udayavni Special

ಪುಸ್ತಕ-ಪೆನ್ನು ಹಿಡಿವ ಕೈಗಳಲ್ಲಿ ಸೌಟು!


Team Udayavani, Apr 5, 2021, 8:54 PM IST

ಗಹಗಹಗಹಹ್ಗ copy

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್‌ ಕಾಲೇಜಿನ ಎಪಿಜೆ ಅಬ್ದುಲ್‌ ಕಲಾಂ ಸೈನ್ಸ್‌ ಪಾರ್ಕಿನ ವಾತಾವರಣ ಘಮಘಮಿಸುತ್ತಿತ್ತು. ಸ್ಟಾರ್‌ ಹೋಟೆಲಿನ ಶೆಫ್‌ಗಳನ್ನು ನಾಚಿಸುವಂತೆ ದಿರಿಸು ತೊಟ್ಟಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಬಾಣಲೆ, ಸೌಟು, ತರಕಾರಿ ಕಾಣುತ್ತಿದ್ದವು.

ಕಾಲೇಜಿನಿಂದ ಆಯೋಜಿಸಿದ್ದ ಕಿಚನೋಮಿಕ್ಸ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಹೇವಾರಿ ಖಾದ್ಯಗಳನ್ನು ತಯಾರಿಸಿ ಸೈ ಅನ್ನಿಸಿಕೊಂಡರು. ಸದಾ ಓದು, ಬರಹದಲ್ಲಿ ಮಗ್ನರಾಗುತ್ತಿದ್ದ ವಿದ್ಯಾರ್ಥಿಗಳು ಅಡುಗೆಯ ಅಭಿರುಚಿಯನ್ನೂ ಬೆಳೆಸಿಕೊಳ್ಳಲಿ ಎಂಬ ಕಾರಣಕ್ಕೆ ಕಾಲೇಜಿನಿಂದ ಪ್ರತಿವರ್ಷ ಕಿಚನೋಮಿಕ್ಸ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈ ವರ್ಷ ಕೂಡ ವಿದ್ಯಾರ್ಥಿಗಳು ಬಾಯಲ್ಲಿ ನೀರೂರಿಸುವ ತಿನಿಸುಗಳನ್ನು ತಯಾರಿಸಿದ್ದರು. ಈ ವರ್ಷ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಹತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅವರ ಅಭಿರುಚಿಗೆ ತಕ್ಕಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಅದರಲ್ಲಿ ಉಪಯೋಗಿಸಿರುವ ಹಣ್ಣು, ತರಕಾರಿ, ಸಾಂಬಾರು ಪದಾರ್ಥಗಳು ಹಾಗೂ ಅವುಗಳ ಔಷಧ ಗುಣಗಳು, ಪೌಷ್ಟಿಕತೆ, ಆರೋಗ್ಯಕ್ಕೆ ಲಭ್ಯವಾಗುವ ಜೀವಸತ್ವಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ಹೋಟೆಲ್‌ಗ‌ಳಲ್ಲಿ ಇಂತಹ ರುಚಿಯಾದ ಅಡುಗೆಗಳನ್ನು ತಯಾರಿಸಿ ಜನರನ್ನು ಗಮನ ಸೆಳೆಯುವುದು ಹೇಗೆ, ಹೋಟೆಲ್‌ಗ‌ಳು ಖರ್ಚು ಮಾಡುವ ಹಣ ಹಾಗೂ ಪಡೆದುಕೊಳ್ಳುವ ಲಾಭಗಳ ಬಗ್ಗೆ ಒಂದೊಂದು ತಂಡ ತಮ್ಮದೇ ಆದ ನಿರೂಪಣಾ ಶೈಲಿಯಲ್ಲಿ ತೀರ್ಪುಗಾರರ ಎದುರು ಸ್ಪಷ್ಟಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದೆ ಉನ್ನತ ವ್ಯಾಸಂಗಕ್ಕೆ ಹೋದಾಗ ಹೋಟೆಲ್‌ ಮ್ಯಾನೇಜ್‌ಮೆಂಟ್‌ನಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಾಗ ಇಂತಹ ಕಾರ್ಯಕ್ರಮದ ಅನುಭವಗಳು ಅತ್ಯಂತ ಉಪಯುಕ್ತವಾಗುತ್ತವೆ ಎಂದರು. ಪ್ರಾಚಾರ್ಯ ಈ. ಗಂಗಾಧರ ಮಾತನಾಡಿ, ಜೀವನವೇ ಒಂದು ಅಭಿರುಚಿ, ಸಂತೋಷದ ಜೀವನವನ್ನು ಸಾಗಿಸಲು ಅಭಿರುಚಿಗಳು ಮುಖ್ಯ. ಯಾರಿಗೆ ಅಭಿರುಚಿಗಳು ಹೆಚ್ಚಿರುತ್ತವೊ ಅಂಥವರ ಬದುಕು ಸುಖಮಯವಾಗಿರುತ್ತದೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ದುಡಿದರೆ ಮಾತ್ರ ಸಂತೋಷ ಸಿಗುವುದಿಲ್ಲ, ಬದಲು ಒಂದು ಅಡುಗೆ ಮನೆಯಲ್ಲಿ ರುಚಿ-ರುಚಿಯಾದ ಅಡುಗೆಗಳನ್ನು ಸಿದ್ಧಪಡಿಸಿ ತಮ್ಮ ನೈಪುಣ್ಯತೆಯೊಂದಿಗೆ ಜೀವನದಲ್ಲಿ ಸುಖವಾಗಿರಬಹುದು ಎಂದು ತಿಳಿಸಿದರು. ಸಂಸ್ಥೆಯ ಆಡಳಿತಾಧಿ ಕಾರಿ ಡಾ| ಟಿ.ಎಸ್‌. ರವಿ, ಸಂಚಾಲಕ ಎಂ.ವಿ. ನಟರಾಜ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

fgdgfd

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಕೋವಿಡ್‍ಗೆ ಬಲಿ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-23

ಇಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬಿಡುಗಡೆ

18-22

ಮರಳುಗಾರಿಕೆ ಆರಂಭಿಸಿದರೆ ಹೋರಾಟ

18-15

ಕಾಯಕ ಮಹತ್ವ ಸಾರಿದ ದಾರ್ಶನಿಕ

vfvg

ಜಂತುಹುಳು ಬಾಧೆಯಿಂದ ರಕ್ತ ಹೀನತೆ

kjtgr

ಕುಡಿವ ನೀರಿಗೆ ಸಮಸ್ಯೆ ಆಗದಂತೆ ಗಮನಹರಿಸಿ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

fgdgfd

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಕೋವಿಡ್‍ಗೆ ಬಲಿ

Hema Das 11

ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ಹಿಮಾದಾಸ್‌

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಜ್ಗಹಹದಸ಻

ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.