ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ
Team Udayavani, Apr 17, 2020, 4:50 PM IST
ಕೂಡ್ಲಿಗಿ: ಪಪಂ ಮುಖ್ಯಾಧಿಕಾರಿ ಮತ್ತು ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದ ಸ್ಥಳಕ್ಕೆ ಹಿರಿಯ ನ್ಯಾಯಾಧೀಶ ಮುರಘೇಂದ್ರ ತುಬಾಕೆ ಮತ್ತು ನಗರಾಭಿವೃದ್ಧಿ ಯೋಜನೆ ನಿರ್ದೇಶಕ ರಮೇಶ ಮತ್ತು ಡಿವೈಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳಿಗೆ ಕಾನೂನು ರೀತ್ಯ ಶಿಕ್ಷೆ ವಿಧಿಸಲಿದೆ. ಕಾರ್ಮಿಕರು ಎದೆಗುಂದ ಬೇಡಿ. ನಿಮ್ಮದೊಂದಿಗೆ ನಾವು ಇದ್ದೇವೆ. ಆತ್ಮಬಲ ಕುಂದದೆ ನಿಮ್ಮ ಕಾಯಕದ ಮೂಲಕ ಸಾರ್ವಜನಿಕರ ಸೇವೆ ಅವಶ್ಯವಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಯೋಜನಾಧಿಕಾರಿ ರಮೇಶ, ಪೌರ ಕಾರ್ಮಿಕರ ಮೇಲೆ ಪಟ್ಟಣದ ನಾಲ್ವರು ಹಲ್ಲೆ ನಡೆಸಿದ ಪ್ರಕರಣ
ವಿಷಾದನೀಯ. ಪಟ್ಟಣದ ಸ್ವತ್ಛತೆಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಡಿವೈಎಸ್ಪಿ ಶಿವಕುಮಾರ ಮತ್ತು ತಹಶೀಲ್ದಾರ್, ಸಿಪಿಐ ಪಂಪನಗೌಡ ಹಾಗೂ ಪಪಂ ಮುಖ್ಯಾಧಿಕಾರಿ ಪಕೃದ್ದೀನ್,ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾಜಿ ಯೋಧ ರಮೇಶ, ರಾಜ್ಯ ಪೌರ ಕಾರ್ಮಿಕರ ಅಧ್ಯಕ್ಷ ಪ್ರಭಾಕರ್, ಕಿರಿಯ ಆರೋಗ್ಯ ನಿರೀಕ್ಷಕಿ ಲತಾ ಟಿ.ಎನ್ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.