ಫೋನ್ ಕದ್ದಾಲಿಕೆ ಅನುಭವ ಆಗಿಲ್ಲ: ಶಾಸಕ ಗೂಳಿಹಟ್ಟಿ
Team Udayavani, Nov 24, 2018, 6:10 AM IST
ಚಿತ್ರದುರ್ಗ: “ನನಗೆ ಟೆಲಿಫೋನ್ ಕದ್ದಾಲಿಕೆ ಅನುಭವ ಆಗಿಲ್ಲ. ನಾನು ಸ್ಪೀಕರ್ ಇಟ್ಟುಕೊಂಡು ಮಾತನಾಡುತ್ತೇನೆ’
ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನನಗೆ ಪೋನ್ ಕದ್ದಾಲಿಕೆ ವಿಚಾರ ಗೊತ್ತಿಲ್ಲ. ಅದು ಕಾಮನ್ ಆಗಿ
ನಡೆಯುತ್ತಾ ಇರುತ್ತೆ ಎಂದರು.
ಆರೇಳು ತಿಂಗಳು ಆದರೂ ರಾಜ್ಯ ಸರ್ಕಾರ ಟೇಕ್ ಆಪ್ ಆಗಿಲ್ಲ. ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಶಾಸಕರಿಗೆ ಬೆಲೆ ಇಲ್ಲ. ಸೋತವರೇ ಆಡಳಿತ ನಡೆಸುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.