ಚಿತ್ರದುರ್ಗ: ಪಾರ್ದಿ ಗ್ಯಾಂಗ್ ನ ನಾಲ್ವರು ಅರೆಸ್ಟ್

Team Udayavani, Dec 3, 2019, 10:11 PM IST

ಚಿತ್ರದುರ್ಗ: ಮಹಾರಾಷ್ಟ್ರ ಮೂಲದ ಪಾರ್ದಿ ಗ್ಯಾಂಗ್ ಗೆ ಸೇರಿದ ನಾಲ್ವರು ಸುಲಿಗೆಕೋರರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ನ. 25 ರಂದು ಹೊಸದುರ್ಗ ತಾಲೂಕು ಯಲ್ಲಾಬೋವಿಹಟ್ಟಿ ಹಾಗೂ ವೀರವ್ವ ನಾಗತಿಹಳ್ಳಿ ಗ್ರಾಮಗಳಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಮನೆಯೊಂದರಲ್ಲಿ ದರೋಡೆ ಹಾಗೂ ಮನೆಗಳ್ಳತನ ಮಾಡಿರುವ ಬಗ್ಗೆ ದೂರು ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದಾಗ ಸಿಕ್ಕಿಬಿದ್ದಿದ್ದಾರೆ.

ಮಾಡದಕೆರೆ ಬಳಿ ಕೆಂಕೆರೆ ಕಡೆ ಹೋಗುವ ರಸ್ತೆಯಲ್ಲಿ ಗುಡ್ಡದ ಮೇಲೆ‌ ಟೆಂಟ್ ಹಾಕಿಕೊಂಡು ವಾಸವಿದ್ದ ಮಹಾರಾಷ್ಟ್ರ ನಾಗಪುರ ಜಿಲ್ಲೆಯ ಅರ್ಜುನ, ಆದಿನಾಗನ ಬೋಸ್ಲೆ, ಪಾರವ್ವ ಹಾಗೂ ಕನಕ ಬಂಧಿತರು.

ಬಂಧಿತರಿಂದ ಕಳ್ಳತನ ಮಾಡಿದ್ದ 33 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಐದೂವರೆ ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನಕ್ಕೆ ಬಳಸುತ್ತಿದ್ದ ಹತಾರಗಳು,‌ ಮಚ್ಚು, ಚೂರಿ ಮತ್ತಿತರೆ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಹೊಸದುರ್ಗ ಸಿಪಿಐ ಫೈಜುಲ್ಲಾ ನೇತೃತ್ವದಲ್ಲಿ, ಪಿಎಸ್ಐ ಶಿವಕುಮಾರ್, ಪ್ರೊಬೆಷನರಿ ಪಿಎಸ್ಐ ಗಾದ್ರಿಲಿಂಗಪ್ಪ ಹಾಗೂ ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ