ಪೈಪ್‌ಲೈನ್‌ ಗ್ಯಾಸ್‌ ಯೋಜನೆ ಉಪಯುಕ್ತ: ತಿಪ್ಪಾರೆಡ್ಡಿ

Team Udayavani, Nov 23, 2018, 3:22 PM IST

cta-1.jpg

ಚಿತ್ರದುರ್ಗ: ಪೈಪ್‌ಲೈನ್‌ ಮೂಲಕ ಪರಿಸರ ಸ್ನೇಹಿಯಾಗಿ ಗ್ಯಾಸ್‌ ಸಂಪರ್ಕ ಕಲ್ಪಿಸಬಹುದಾದ ಸಿಟಿ ಗ್ಯಾಸ್‌ ಡಿಸ್ಟ್ರಿಬ್ಯೂಶನ್‌ ಯೋಜನೆ ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

ಇಲ್ಲಿನ “ದುರ್ಗದ ಸಿರಿ’ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜ್ಞಾನಭವನದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದು ಅತ್ಯಂತ ಉತ್ತಮ ಕಾರ್ಯವಾಗಿದೆ. ಆದರೆ ಚಿತ್ರದುರ್ಗ ನಗರದಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದ್ದು, ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ರಸ್ತೆಗಳನ್ನು ಗೇಲ್‌ ಇಂಡಿಯಾ ಕಂಪನಿಯಿಂದ ಮತ್ತೆ ಅಗೆಯಲಾಗುತ್ತಿದೆ. ಕಂಪನಿಯವರು ಅಗೆದ ರಸ್ತೆಯನ್ನು ಮತ್ತೆ ದುರಸ್ತಿ ಮಾಡಿಸಿಕೊಡಬೇಕು ಎಂದು ಸೂಚಿಸಿದರು.

ಪೈಪ್‌ಲೈನ್‌ ಹಾದು ಹೋಗಿರುವ ಹಳ್ಳಿಗಳಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಗೇಲ್‌ ಕಂಪನಿ ಅಧಿಕಾರಿಗಳು ನೀಡಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಇದರಿಂದ ಅನುಕೂಲವಾಗಲಿದೆ ಎಂದರು.

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸ್ನೇಹಿಯಾಗಿರುವ ಸಿಎನ್‌ಜಿ (ಕಾಂಪ್ರಸ್‌ ನ್ಯಾಚುರಲ್‌ ಗ್ಯಾಸ್‌) ಅನ್ನು ದೇಶದ 129 ಜಿಲ್ಲೆಗಳ 65 ಭೌಗೋಳಿಕ ಪ್ರದೇಶಗಳಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ. ಇದು ಎಲ್‌ಪಿಜಿ ಗ್ಯಾಸ್‌ ಗಿಂತ ಅತ್ಯಂತ ಉಪಯುಕ್ತವಾಗಿದೆ. ಈ ಗ್ಯಾಸ್‌ ಸಂಪರ್ಕ ಪಡೆಯುವುದರಿಂದ ಹೆಚ್ಚಿನ ಅಪಾಯವೂ ಇರುವುದಿಲ್ಲ. ಗಾಳಿಗಿಂತ ಹಗುರ ಇರುವುದರಿಂದ ಲೀಕ್‌ ಆದರೂ ಹೆಚ್ಚೇನು ಅನಾಹುತ ಆಗುವುದಿಲ್ಲ. ಸಾರಿಗೆ ವೆಚ್ಚವಾಗದು. ತೂಕ, ಅಳತೆಯಲ್ಲಿ ಮೋಸವೂ ಆಗುವುದಿಲ್ಲ. ಬಳಕೆದಾರ ಗ್ರಾಹಕರಿಗೆ ಕಡಿಮೆ ದರದಲ್ಲಿ ಈ ಗ್ಯಾಸ್‌ ಲಭ್ಯವಾಗಲಿದೆ ಎಂದು ತಿಳಿಸಿದರು. 

ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಮಾತನಾಡಿ, ಪ್ರಾಕೃತಿಕ ಗ್ಯಾಸ್‌ ಅನ್ನು ಕೇವಲ ಮನೆಗಳಿಗೆ ಮಾತ್ರ ಪೂರೈಕೆ ಮಾಡುವುದಿಲ್ಲ. ಕೈಗಾರಿಕೆಗಳಿಗೆ, ಆಟೋ, ಜನರೇಟರ್‌ಗಳಿಗೆ, ಎಲ್ಲ ರೀತಿಯ ವಾಹನಗಳಿಗೆ ಬಳಕೆ ಮಾಡಬಹುದಾಗಿದೆ. ಇದಕ್ಕೆ ಗೇಲ್‌ ಕಂಪನಿ ವ್ಯವಸ್ಥೆ ಮಾಡಲಿದೆ. ಅಲ್ಲದೆ ಈ ಯೋಜನೆ ಅನುಷ್ಠಾನಕ್ಕಾಗಿ ಒಂದಿಷ್ಟು ಭೂಮಿಯ ಅಗತ್ಯವಿದ್ದು, ಭೂಸ್ವಾಧಿನ ಮಾಡಿಕೊಡಲಾಗುತ್ತದೆ. ಜಿಲ್ಲೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಯುನಿಸನ್‌ ಎನ್‌ವಿರೊ ಪ್ರೈವೆಟ್‌ ಲಿಮಿಟೆಡ್‌ ಅನುಷ್ಠಾನಾಧಿಕಾರಿ ಘನಶ್ಯಾಂ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೇಲ್‌ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

covid-1

ಸೋಂಕಿತರ ಮಾದರಿ ಪುಣೆಗೆ: ಗೋವಾದಲ್ಲಿಯೂ ಒಮಿಕ್ರಾನ್ ಆತಂಕ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

satish jarkiholi

ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿ

ಸಂವಿಧಾನ ಭಾರತದ ಪವಿತ್ರ ಗ್ರಂಥ: ಶೋಭಾ

ಸಂವಿಧಾನ ಭಾರತದ ಪವಿತ್ರ ಗ್ರಂಥ: ಶೋಭಾ

ವ್ಯಕ್ತಿತ್ವ ವಿಕಸನದಿಂದ ಸುಂದರ ಸಮಾಜ

ವ್ಯಕ್ತಿತ್ವ ವಿಕಸನದಿಂದ ಸುಂದರ ಸಮಾಜ

ಡಿಕೆಶಿ, ಸಿದ್ಧರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಡಿಕೆಶಿ, ಸಿದ್ದರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

16crop

ಅಕಾಲಿಕ ಮಳೆಗೆ ಶೇ.80 ತೊಗರಿ ಹಾನಿ

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

covid-1

ಸೋಂಕಿತರ ಮಾದರಿ ಪುಣೆಗೆ: ಗೋವಾದಲ್ಲಿಯೂ ಒಮಿಕ್ರಾನ್ ಆತಂಕ

15fish-market

ಮೀನು ವ್ಯಾಪಾರಕ್ಕೆ ರಸ್ತೆಯೇ ಮಾರುಕಟ್ಟೆ!

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.