ಕಂದಾಯ ಬಾಕಿ ಪಾವತಿಗೆ ಆಗ್ರಹ


Team Udayavani, Sep 24, 2019, 2:22 PM IST

cd-tdy-1

ನಾಯಕನಹಟ್ಟಿ: ಸೋಲಾರ್‌ ಕಂಪನಿಗಳು ಕಂದಾಯ ಬಾಕಿ ಪಾವತಿಸಬೇಕೆಂದು ಒತ್ತಾಯಿಸಿ ಸೋಮವಾರ ಎನ್‌. ದೇವರಹಳ್ಳಿಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಸೋಲಾರ್‌ ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಕೆ.ಎಸ್‌. ದಿವಾಕರ ರೆಡ್ಡಿ, ಒಂದು ಸಾವಿರ ಎಕರೆ ಪ್ರದೇಶವನ್ನು ಸಾಜಿಟರ್‌ ವೆಂಚೂರ್‌ ಕಂಪನಿ ಸರ್ಕಾರದಿಂದ ಭೂಮಿಯನ್ನು ಗುತ್ತಿಗೆ ಪಡೆದಿದೆ. ಆದರೆ ಸಾಜಿಟರ್‌ ಕಂಪನಿ ನಾಮಕಾವಸ್ತೆಗೆ ಒಂದು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. ಆ ಕಂಪನಿ ಇತರೆ ಕಂಪನಿಗಳಿಗೆ ಉಪ ಗುತ್ತಿಗೆ ನೀಡಿದೆ. ಈ ಕಂಪನಿಗಳು ಎನ್‌. ದೇವರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿವೆ. ಪ್ರತಿ ವರ್ಷ ಕಂಪನಿಗಳು

ಕಂದಾಯವನ್ನು ಪಾವತಿಸಬೇಕು.ಸರ್ಕಾರದ ನಿರ್ದೇಶನದಂತೆ ಕಂದಾಯ ಪಾವತಿಸುವಂತೆ ಹಲವಾರು ಬಾರಿ ಸೂಚನೆ ನೀಡಲಾಗಿದೆ. ಸರ್ಕಾರ ನೀಡಿರುವ ಆದೇಶಗಳಂತೆ ಇದುವರೆಗೆ ಇಲ್ಲಿನ ಕಂಪನಿಗಳು 6.8 ಕೋಟಿ ರೂ. ಕಂದಾಯ ಬಾಕಿ ಉಳಿಸಿಕೊಂಡಿವೆ ಎಂದರು.

ಆಗಸ್ಟ್‌ ತಿಂಗಳಲ್ಲಿ ಸರ್ಕಾರ ಪ್ರತಿ ಮೆಗಾ ವ್ಯಾಟ್‌ ಉತ್ಪಾದನೆಗೆ ಐದು ಸಾವಿರ ರೂ.ಗಳಂತೆ ಸೋಲಾರ್‌ ಕಂಪನಿಗಳು ಗ್ರಾಪಂಗೆ ತೆರಿಗೆ ಪಾವತಿಸುವಂತೆ ಆದೇಶ ನೀಡಿದೆ. ಇಲ್ಲಿನ ಕಂಪನಿಗಳು ಒಟ್ಟು 165 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುತ್ತಿವೆ.ಸರ್ಕಾರ ಇಲ್ಲಿಯವರೆಗೆ ನೀಡಿರುವ ಆದೇಶಗಳಂತೆ ಒಟ್ಟು 6.97 ಕೋಟಿ ರೂ. ಕಂದಾಯ ಬಾಕಿಯನ್ನು ಕಂಪನಿಗಳು ಕಳೆದ ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿವೆ. ಇಲ್ಲಿ ನಾಲ್ಕು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಒಂದು ಕಂಪನಿ ಹೊರತುಪಡಿಸಿ ಮೂರು ಕಂಪನಿಗಳಿಂದ ಬಾಕಿ ಬರಬೇಕಿದೆ. ಜೊತೆಗೆ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ತಾಲೂಕಿನ 30 ಜನರಿಗೆ ವಾಚ್‌ಮನ್‌ ಉದ್ಯೋಗ ನಿಡಲಾಗಿದೆ. ಆದರೆ ಅವರಿಗೆ ಯಾವುದೇ ಸೇವಾ ಭದ್ರತೆ ಒದಗಿಸಿಲ್ಲ ಎಂದು ಆರೋಪಿಸಿದರು.

ಗ್ರಾಪಂ ಸದಸ್ಯ ಪಿ. ನಾಗರಾಜ್‌ ಮಾತನಾಡಿ, ಸೋಲಾರ್‌ ಕಂಪನಿಗಳಿರುವ ಪ್ರದೇಶ ಗೋಮಾಳವಾಗಿದ್ದು ಪಶು ಸಂಗೋಪನಾ ಇಲಾಖೆಗೆ ಸೇರಿತ್ತು. ಇಲ್ಲಿನ ಪ್ರದೇಶದಲ್ಲಿ ದನ ಕರುಗಳು ಮೇಯುತ್ತಿದ್ದವು. ಆದರೆ ಸರ್ಕಾರದ ತಪ್ಪು ನಿರ್ಧಾರದಿಂದ ಇಲ್ಲಿನ ಜನರಿಗೆಮೇವಿಲ್ಲದೆ ಪರಿಸ್ಥಿತಿ ಉಂಟಾಗಿದೆ. ಬರಗಾಲದ ಸಮಯದಲ್ಲಿ ದನ ಕರುಗಳಿಗೆ ಮೇವಿಲ್ಲದೆ ಮಾರುವ ಪರಿಸ್ಥಿತಿಗೆ ರೈತರು ಬಂದಿದ್ದಾರೆ. ಕಂಪನಿಗಳು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಪಾವತಿಸದೆ ವಂಚಿಸುತ್ತಿವೆ. ಇನ್ನೆರಡು ದಿನಗಳಲ್ಲಿ ತೆರಿಗೆ ಪಾವತಿ ಮಾಡದೇ ಇದ್ದಲ್ಲಿ ಗ್ರಾಮಸ್ಥರೊಂದಿಗೆ ಕಂಪನಿಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ಕೆಂಚಮ್ಮ, ಉಪಾಧ್ಯಕ್ಷ ದಾದಯ್ಯ, ಸದಸ್ಯರಾದ ಲಕ್ಷ್ಮ ನಾಯ್ಕ, ಧರ್ಮವೀರ, ಪುಷ್ಪಾ, ತಿಪ್ಪಮ್ಮ, ತಿಪ್ಪೇಸ್ವಾಮಿ, ಜಯಣ್ಣ ಇದ್ದರು.

ಟಾಪ್ ನ್ಯೂಸ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chitradurga news

ಚನ್ನಮ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

chitradurga news

ಕಪ್ಪುಪಟ್ಟಿ ಧರಿಸಿ ಶಿಕ್ಷಕರು ಕೆಲಸಕ್ಕೆ ಹಾಜರ್‌

covid news

ಲಸಿಕೆ ವಿತರಣೆಯಲ್ಲಿ  ಭಾರತವೇ ನಂ.1

The Ramayana

ರಾಮಾಯಣದಲ್ಲಿದೆ ಆದರ್ಶ ಬದುಕಿನ ಸಾರ

19clk01p

ವೀರಯೋಧರ ಕಾರ್ಯ ಸದಾಸ್ಮರಿಸೋಣ: ಬಸವರೆಡ್ಡಿ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

2drone

ಡ್ರೋಣ್‌ ಮೂಲಕ ಕೀಟನಾಶಕ ಸಿಂಪರಣೆ

23glb-13

ಮಹಿಳೆಯರಿಗೆ ರಾಣಿ ಚನ್ನಮ್ಮ ಆದರ್ಶ: ಪ್ರಕಾಶ ಕುದುರಿ

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.