ಶೇ.89ರಷ್ಟು ಮುಂಗಾರು ಬಿತ್ತನೆ ಪೂರ್ಣ

ಹತ್ತಿ-ಶೇಂಗಾ-ಮೆಕ್ಕೆ ಜೋಳ ಫಸಲಿಗೆ ಹದ ಮಳೆ

Team Udayavani, Aug 17, 2020, 4:39 PM IST

CD-TDY-1

ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಕಳೆದ ವರ್ಷ ಹಿಂಗಾರಿ ಮಳೆ ಕೈ ಹಿಡಿದರೆ ಈ ವರ್ಷ ಮುಂಗಾರು ಉತ್ತಮವಾಗಿ ಸುರಿದ ಪರಿಣಾಮ ಕೋಟೆನಾಡಿನ ಜನತೆ ಸಂತಸಗೊಂಡಿದ್ದಾರೆ. ಹೊಲಗಳಲ್ಲಿರುವ ಫಸಲು ನಳನಳಿಸುತ್ತಿವೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3,58,340 ಹೆಕ್ಟೇರ್‌ ಬಿತ್ತನೆ ಗುರಿ ಇತ್ತು. ಆ.10ರವರೆಗೆ ಒಟ್ಟು 3,21,519 ಹೆಕ್ಟೇರ್‌ ಬಿತ್ತನೆಯಾಗುವ ಮೂಲಕ ಶೇ. 89.7 ಪ್ರಗತಿ ಸಾಧಿ ಸಲಾಗಿದೆ. ಕಳೆದ ವರ್ಷ ಆ. 10 ರವರೆಗೆ ಶೇ. 38.2 ರಷ್ಟು ಪ್ರಗತಿ ಸಾಧಿ ಸಲಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಕಳೆದ ಸಾಲಿಗಿಂತ ಹೆಚ್ಚು ಬಿತ್ತನೆಯಾಗಿದೆ.

ಹಿರಿಯೂರು-39689 ಹೆ., ಹೊಸದುರ್ಗ- 45070 ಹೆ., ಮೊಳಕಾಲ್ಮೂರು- 31293 ಹೆ, ಚಳ್ಳಕೆರೆ-96662 ಹೆ, ಚಿತ್ರದುರ್ಗ-57608, ಹೊಳಲ್ಕೆರೆ-51197 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಏಕದಳ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ ಮತ್ತು ಸಿರಿಧಾನ್ಯಗಳ ಬಿತ್ತನೆ 1,46,365 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ದ್ವಿದಳ ಬೆಳೆಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರೆ ಬೆಳೆಗಳಿಗಾಗಿ 34,460 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ನಿಗದಿಯಾಗಿದ್ದು, ಇಲ್ಲಿಯವರೆಗೆ 18392 ಹೆಕ್ಟೇರ್‌ ದ್ವಿದಳ ಧಾನ್ಯ ಬಿತ್ತನೆ ನಡೆದಿದೆ. ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾಬಿನ್‌ ಬಿತ್ತನೆ 1,47,096 ಹೆಕ್ಟೇರ್‌ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು ಬೆಳೆಗಳ ಬಿತ್ತನೆ 9666 ಹೆಕ್ಟೇರ್‌ನಲ್ಲಿ ಆಗಿದೆ.

ದ್ವಿದಳ ಧಾನ್ಯ: ಹೊಸದುರ್ಗ ತಾಲೂಕಿನಲ್ಲಿ ಒಟ್ಟು 3871 ಹೆಕ್ಟೇರ್‌ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 310 ಹೆಕ್ಟೇರ್‌ ತೊಗರಿ, 3392 ಹೆಕ್ಟೇರ್‌ ಹೆಸರು, ಅಲಸಂದಿ-24, ಅವರೆ-145 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು 6948 ಹೆಕ್ಟೇರ್‌ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 6756 ಹೆಕ್ಟೇರ್‌ ತೊಗರಿ, ಉರುಳಿ-111, ಹೆಸರು-31, ಅಲಸಂದಿ-44, ಅವರೆ-06 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಒಟ್ಟು 1881 ಹೆಕ್ಟೇರ್‌ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 1071 ಹೆಕ್ಟೇರ್‌ ತೊಗರಿ, ಹುರುಳಿ-65, ಹೆಸರು-15, ಅಲಸಂದಿ-30, ಅವರೆ-699, ಸೋಯಾಬಿನ್‌-1 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಹಿರಿಯೂರು ತಾಲೂಕಿನಲ್ಲಿ ಒಟ್ಟು 4074 ಹೆಕ್ಟೇರ್‌ ಭೂ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಲಾಗಿದೆ. 3713 ಹೆಕ್ಟೇರ್‌ ತೊಗರಿ, ಉರುಳಿ-310 ಹೆ, ಅಲಸಂದಿ-25, ಅವರೆ-23 ಬಿತ್ತನೆ ಮಾಡಲಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ ಒಟ್ಟು 870 ಹೆಕ್ಟೇರ್‌ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 760 ಹೆಕ್ಟೇರ್‌ ತೊಗರಿ, ಹೆಸರು-30, ಅಲಸಂದಿ-15, ಅವರೆ-65 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಮೊಳಕಾಲ್ಮುರು ತಾಲೂಕಿನಲ್ಲಿ ಒಟ್ಟು 748 ಹೆಕ್ಟೇರ್‌ ಭೂ ಪ್ರದೇಶದಲ್ಲಿ ದ್ವಿದಳ ಬಿತ್ತನೆ ಮಾಡಲಾಗಿದೆ. 708 ಹೆಕ್ಟೇರ್‌ ತೊಗರಿ, ಹುರುಳಿ-15, ಹೆಸರು-14, ಅಲಸಂದಿ-11 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ಅಧಿಕ ಮಳೆ: ಜಿಲ್ಲೆಯಲ್ಲಿ ಈವರೆಗೆ 370 ಮಿಮೀ ಸರಾಸರಿ ಮಳೆಯಾಗಿದ್ದು, ವಾಡಿಕೆಗಿಂತ ಅ ಧಿಕ ಮಳೆಯಾಗಿದೆ. ಆ.10ರವರೆಗೆ 33 ಮಿಮೀ ಮಳೆಯಾಗಿದೆ. 2014ರಲ್ಲಿ 161.4 ಮಿಮೀ, 2015ರಲ್ಲಿ 81.4 ಮಿಮೀ, 2016ರಲ್ಲಿ 18.1 ಮಿಮೀ, 2017ರಲ್ಲಿ 67 ಮಿಮೀ, , 2018ರಲ್ಲಿ 63 ಮಿಮೀ, 2019ರಲ್ಲಿ 98 ಮಿಮೀ ಮಳೆಯಾಗಿದ್ದು, 2020ರಲ್ಲಿ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಟಾಪ್ ನ್ಯೂಸ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ragini dwivedi

ಕಾಲಿವುಡ್‌ ನ‌ತ್ತ ಹೊರಟ ರಾಗಿಣಿ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿತ್ರದುರ್ಗ: ನಕಲಿ ಬಂಗಾರ ನೀಡಿ ವಂಚನೆ ಪ್ರಕರಣ : ಮೂವರ ಸೆರೆ

ಚಿತ್ರದುರ್ಗ: ನಕಲಿ ಬಂಗಾರ ನೀಡಿ ವಂಚನೆ ಪ್ರಕರಣ : ಮೂವರ ಸೆರೆ

ಕೊಳಚೆ ನೀರಿನ ದುರ್ವಾಸನೆ : ರೋಗದ ಭೀತಿ

ಕೊಳಚೆ ನೀರಿನ ದುರ್ವಾಸನೆ : ರೋಗದ ಭೀತಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಚಾಲನೆ :ಮನೆ ಅಂಗಡಿ-ಮುಂಗಟ್ಟು ಮತ್ತಿತರ ಕಟ್ಟಡಗಳು ನೆಲಸಮ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಚಾಲನೆ :ಮನೆ ಅಂಗಡಿ-ಮುಂಗಟ್ಟು ಮತ್ತಿತರ ಕಟ್ಟಡಗಳು ನೆಲಸಮ

ಸರ್ಕಾರದ 1.67 ಕೋಟಿ ರೂ. ರಾಜಸ್ವ ಗುಳುಂ ಮಾಡಿದ ವ್ಯಕ್ತಿ ಬಂಧನ

ಸರ್ಕಾರದ 1.67 ಕೋಟಿ ರೂ. ರಾಜಸ್ವ ಗುಳುಂ ಮಾಡಿದ ವ್ಯಕ್ತಿ ಬಂಧನ

ಸದೆರತಯುಇಕಲ,ಮನಬವಚಷ

ಕಲಾವಿದರಿಗೆ ಸರ್ಕಾರ ಹೆಚ್ಚು ಅವಕಾಶ ಕಲ್ಪಿಸಲಿ

MUST WATCH

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

ಹೊಸ ಸೇರ್ಪಡೆ

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.