ಶೂನ್ಯತ್ವ ವಚನ ಸಾಹಿತ್ಯದ ಕೇಂದ್ರ ಬಿಂದು


Team Udayavani, Apr 7, 2021, 8:36 PM IST

gftyfgf

ಚಿತ್ರದುರ್ಗ: ಶೂನ್ಯತ್ವ ಇಡೀ ವಚನ ಸಾಹಿತ್ಯದ ಕೇಂದ್ರಬಿಂದು. ವೈದಿಕ ವ್ಯವಸ್ಥೆಯ ವಿಷಮತೆಗಳನ್ನು ನಿವಾರಿಸಲು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಯಶಸ್ವಿಯಾದವರು ಬಸವಾದಿ ಶರಣರು ಎಂದು ಪ್ರೊ| ಮಲ್ಲಿಕಾರ್ಜುನ ಆರ್‌. ಹಲಸಂಗಿ ಹೇಳಿದರು.

ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಸಹಯೋಗದಲ್ಲಿ ನಡೆದ “ಶರಣ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘರ್ಷ ಮಾನವ ಇತಿಹಾಸದ ಆಯಾಮವಾಗಿಯೇ ಬೆಳೆದುಕೊಂಡು ಬಂದಿರುವ ವಿದ್ಯಮಾನ. ಸಂಘರ್ಷದ ಮೂಲ ಉದ್ದೇಶ ಸರಿಪಡಿಸುವಿಕೆ. ವರ್ಣ ವ್ಯವಸ್ಥೆ ಜಾತಿ ವ್ಯವಸ್ಥೆಯ ಬುನಾದಿ.

ಅಂದು ಜಾತಿ ವ್ಯವಸ್ಥೆಗೆ ಧಾರ್ಮಿಕ ಸ್ವರೂಪ ಕೊಡಲಾಯಿತು. ಅಂದಿನಿಂದ ಸಂಘರ್ಷ ಪ್ರಾರಂಭವಾಯಿತು. ಧಾರ್ಮಿಕ ಸಾಂಸ್ಕೃತಿಕ ಆಯಾಮಗಳನ್ನು ಕೊಟ್ಟು ಗಟ್ಟಿಗೊಳಿಸಿ ಯಜಮಾನಿಕೆ ವ್ಯವಸ್ಥೆ ಉಂಟುಮಾಡಿದರು. ಶರಣ ಸಂಕುಲ ಇದರ ನಿರ್ಮೂಲನೆಗಾಗಿ ಹುಟ್ಟಿಕೊಂಡಿತು ಎಂದರು. ಮೊದಲ ಬಾರಿಗೆ ಮೇಲು ಕೀಳು ಸೋಂಕಿಲ್ಲದ, ತಾರತಮ್ಯವಿಲ್ಲದ ಮಾನವ ಪ್ರೇಮದ ಶರಣ ಸಂಕುಲ ಪ್ರಾರಂಭಿಸಿ ಕಾಯಕ ತತ್ವವನ್ನು ಹುಟ್ಟು ಹಾಕಿದರು. ಎಲ್ಲರಲ್ಲೂ ಕಾಯಕ ಪ್ರೀತಿ ಮೂಡಿಸಿದರು.

ಬಸವಣ್ಣನವರು ವೈದಿಕ ವ್ಯವಸ್ಥೆಯ ಹುಳುಕುಗಳನ್ನು ಕಂಡು ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದರು. ಸಾಧ್ಯವಾಗದಾದಾಗ ಶರಣ ತತ್ವದ ಕಡೆ ಬಂದರು. ಬಸವಣ್ಣನವರ ಪ್ರೀತಿ ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಳ್ಳುವುದು. ಅದು ಸಾಂಸ್ಥಿಕ ಸ್ವರೂಪವನ್ನು ಸ್ಥಾಪಿಸುವುದು ಆಗಿತ್ತು. ವ್ಯಷ್ಟಿಯಲ್ಲಿ ಸಮಷ್ಟಿಯನ್ನು ಕಂಡವರು ಬಸವಣ್ಣನವರು. ಅವರು ಭಾರತದ ಶರಣ ಸಂಸ್ಕೃತಿ ಸಂಸ್ಥಾಪಕರು ಎಂದು ಬಣ್ಣಿಸಿದರು. ಒಳಗೊಳ್ಳುವಿಕೆಯ ಲಕ್ಷಣ ಬಸವಾದಿ ಶರಣರಲ್ಲಿತ್ತು. ಎಲ್ಲಿ ನಾಗರಿಕ ಸಮಾಜ ಇದೆಯೋ ಅಲ್ಲಿ ಶೋಷಣೆ ಇರುವುದಿಲ್ಲ. ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ಕಾಯಕ ಕೈಲಾಸವಾಗಬೇಕು.

ಆತ್ಮಾನುಸಂಧಾನ ಮಾಡಿಕೊಳ್ಳಬೇಕು. ದೇವರನ್ನು ಒಳಗಿನಿಂದ ಹುಡುಕುತ್ತ ನಾಗರಿಕ ಸಮಾಜದ ಸ್ಥಾಪಕ ಮನುಷ್ಯನೇ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಚಳವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ. ಅದು ಸ್ವಾತಂತ್ರ್ಯ ಸಂಗ್ರಾಮವಾಗಿರಬಹುದು, ಇನ್ನಿತರೆ ಹಲವು ಹೋರಾಟಗಳಿರಬಹುದು. ಚಳವಳಿಗಿಂತಲೂ ತೀವ್ರತರವಾದದ್ದು ಕ್ರಾಂತಿ. ರಷ್ಯಾ, ಅಮೆರಿಕ, ಫ್ರಾನ್ಸ್‌ ಕ್ರಾಂತಿಯಂತೆ ಕರ್ನಾಟದಲ್ಲು ಕಲ್ಯಾಣ ಕ್ರಾಂತಿಯಾಯಿತು.

ಕುಟುಂಬದಲ್ಲಿದ್ದುಕೊಂಡು ಹಣ, ಆಸ್ತಿ, ಅನ್ನ, ಅರಿವೆ, ಆಶ್ರಯಕ್ಕಾಗಿ ಸಂಘರ್ಷ ಮಾಡುವವರು ಜನಸಾಮಾನ್ಯರು. ಇವರದು ಭೌತಿಕವಾಗಿರುವ ಸಂಘರ್ಷ. ಎಲ್ಲ ಕಾಲದಲ್ಲೂ ಸಾಮಾಜಿಕ ಅಸಮಾನತೆ ಇರುತ್ತದೆ. ಇದು ರಾಜಕೀಯ ಅಸಮಾನತೆಗೂ ಕಾರಣವಾಗುತ್ತದೆ ಎಂದು ತಿಳಿಸಿದರು. ಬಸವಣ್ಣನವರದು ವೈಚಾರಿಕ ಕ್ರಾಂತಿ. ಆ ಸಂದರ್ಭದಲ್ಲಿ ಅನೇಕ ಸವಾಲುಗಳಿದ್ದವು. ಶರಣರು ವಿಚಾರದ ಮೂಲಕ ಕ್ರಾಂತಿ ಮಾಡಿದರು. ಶಿವಶರಣರು ಸತ್ಯವೆಂಬ ಕತ್ತಿಯನ್ನು ಹಿಡಿದು ಹೋರಾಡಿದರು. ಕೊಲ್ಲುವ ಹೃದಯವನ್ನು ಗೆಲ್ಲುತ್ತೇವೆಂಬುದು ಶರಣರ ತತ್ವ. ಸತ್ಯ, ಕರುಣೆ, ಮಮತೆ, ಪ್ರೀತಿ ಇವು ಶರಣ ತತ್ವದ ಜೀವಾಳ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಶಿಧರ ಉಬ್ಬಳಗುಂಡಿ ರಚನೆಯ “ಮರಣ ಮೃದಂಗ’ ಕೃತಿ ಬಿಡುಗಡೆ ಮಾಡಲಾಯಿತು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಬಸವರಾಜ ಐರಣಿ ಅವರನ್ನು ಸನ್ಮಾನಿಸಲಾಯಿತು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.