ಮೊಳಕಾಲ್ಮೂರು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ
Team Udayavani, Dec 21, 2020, 6:47 PM IST
ಮೊಳಕಾಲ್ಮೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆ ಮತ್ತು ಹೆಚ್ಚಿನಅನುದಾನ ಕಲ್ಪಿಸಿ ಸಮಗ್ರ ಅಭಿವೃದ್ಧಿಗೆ ನಿರಾಸಕ್ತಿ ವಹಿಸಿರುವ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಕೂಡಲೇ ಹೆಚ್ಚಿನ ಅನುದಾನಗಳೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಎಂದು ತಾಲೂಕು ಅಭಿವೃದ್ಧಿಹಾಗೂ ಭ್ರಷ್ಟಾಚಾರ ವಿರೋಧಿ ಜನ ಜಾಗೃತಿ ಮತ್ತು ನಾಗರಿಕ ಹೋರಾಟ ವೇದಿಕೆಯ ಅಧ್ಯಕ್ಷ ಎಂ.ಒ.ಮಂಜುನಾಥಸ್ವಾಮಿ ನಾಯಕ ಆಗ್ರಹಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸ್ತ್ರೀ ಸುರಕ್ಷತಾ ಗ್ರಾಮೀಣ ಮತ್ತು ಮಹಿಳಾ ಸ್ವಯಂ ಉದ್ಯೋಗ ಸೇವಾ ಸಂಸ್ಥೆ, ತಾಲೂಕು ವಾಲ್ಮೀಕಿ ಬೇಡಗಿರಿಜನ ಬುಡಕಟ್ಟು ನಾಯಕರ ಸಂಘ ಹಾಗೂ ತಾಲೂಕು ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ವಿರೋಧಿ ಜನ ಜಾಗೃತಿ ಮತ್ತು ನಾಗರಿಕ ಹೋರಾಟ ವೇದಿಕೆ ಇವರ ಸಹಯೋಗದೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೈಗೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 371 ಜೆ ನೆಪದಲ್ಲಿ ಯಾವುದೇ ಕಾರಣಕ್ಕೂ ಮೊಳಕಾಲ್ಮೂರು ತಾಲೂಕನ್ನು ಭಾವನಾತ್ಮಕ ಸಂಬಂಧವಿರುವ ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಡಿಸಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಬಾರದು. ಹೈದ್ರಾಬಾದ್ ನಿಜಾಮರ ದೌರ್ಜನ್ಯದ ವ್ಯಾಪ್ತಿಗೊಳಪಡದಿದ್ದರೆ ಬಳ್ಳಾರಿ ಜಿಲ್ಲೆಗೆ ನೀಡಿರುವ ಹೈದ್ರಾಬಾದ್-ಕರ್ನಾಟಕ ಮೀಸಲಾತಿಯನ್ನು ಕೂಡಲೇ ರದ್ದುಗೊಳಿಸಬೇಕು. ಎಸ್.ಟಿ.ಮೀಸಲು ಕ್ಷೇತ್ರದಲ್ಲಿನ ವಾಲ್ಮೀಕಿ ನಾಯಕ, ಪರಿಶಿಷ್ಟ ಜಾತಿ, ಹಿಂದುಳಿದ ಅಲ್ಪ ಸಂಖ್ಯಾತರ ಸಮಗ್ರಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ. ಸಂವಿಧಾನದ ಮೂಲ ಆಶಯ,ತತ್ವಕ್ಕೆ ವಿರುದ್ಧವಾಗಿ ಕೇಂದ್ರ ಬಿ.ಜೆ.ಪಿ ಸರ್ಕಾರವು ಮೇಲ್ವರ್ಗದವರಿಗೆ ನೀಡಿದ ಶೇ.10 ರಷ್ಟು ಮೀಸಲಾತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದರು.
ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಕೂಡಲೇ ನಿಗ್ರಹಿಸಬೇಕು. ಪಟ್ಟಣ ಪಂಚಾಯಿತಿಯ ಅಧ್ಯಕ್ಷಸ್ಥಾನವು ಎಸ್.ಟಿ ಮಹಿಳೆಗೆ ಮೀಸಲಿದ್ದುದ್ದನ್ನು ರಾಜಕೀಯ ಕಾರಣಕ್ಕೆ ಸಾಮಾನ್ಯ ವರ್ಗಕ್ಕೆಬದಲಾಯಿಸಿ ನಾಯಕ ಜನಾಂಗದ ಪ್ರಗತಿಯಹಿನ್ನಡೆಗೆ ಕಾರಣವಾಗಿರುವುದರಿಂದ ಸಚಿವಬಿ.ಶ್ರೀರಾಮುಲು ನಾಯಕ ಸಮುದಾಯದ ಕ್ಷಮೆ ಕೋರಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಮೊಳಕಾಲ್ಮೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗದಿದ್ದಲ್ಲಿ ರಾಜೀನಾಮೆ ನೀಡಬೇಕು ಎಂದರು.
ತಾಲೂಕು ಕಚೇರಿ ಶಿರಸ್ತೇದಾರ ಏಳುಕೋಟಿ ಅವರಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು. ಸ್ತ್ರೀ ಸುರಕ್ಷತಾ ಗ್ರಾಮೀಣ ಮತ್ತು ಮಹಿಳಾ ಸ್ವಯಂ ಉದ್ಯೋಗ ಸೇವಾ ಸಂಸ್ಥೆಯ ಅಧ್ಯಕ್ಷೆ ಎಂ.ಟಿ.ಸರಸ್ವತಿ, ಕಾರ್ಯಕರ್ತರು ಭಾಗವಹಿಸಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444