ಸ್ಥಳೀಯರು -ಹೊರಗಿನವರ ಮಧ್ಯೆ ಜಿದ್ದಾಜಿದ್ದಿ

Team Udayavani, May 5, 2018, 5:31 PM IST

crime-nittuer.jpg

ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಚ್‌. ತಿಪ್ಪಾರೆಡ್ಡಿ ಸ್ಥಳೀಯರು, ಹೊರಗಿನವರೆನ್ನುವ ಮಾತಿನ ಕಿಡಿ ಹೊತ್ತಿದ್ದು ನಿಧಾನವಾಗಿ ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಿಗೂ ವ್ಯಾಪಿಸುತ್ತಿದೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಬೆಂಗಳೂರಿನವರು, ಜೆಡಿಎಸ್‌ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಚಳ್ಳಕೆರೆಯವರು. ಈ ಹಿನ್ನೆಲೆಯಲ್ಲಿ ಸ್ಥಳೀಯರಾದ ತಿಪ್ಪಾರೆಡ್ಡಿ ಅವರು ಸ್ಥಳೀಯರಿಗೆ ಮತ ನೀಡಿ, ಹೊರಗಿನವರನ್ನು ಕಾಣಬೇಕಾದರೆ ಬೆಂಗಳೂರು, ಗೋವಾಕ್ಕೆ ಹುಡುಕಿಕೊಂಡು ಹೋಗಬೇಕಾಗುತ್ತದೆ ಎಂಬುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ನೆರೆಯ ವಿಧಾನಸಭಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಈ ಮೂರೂ ಪಕ್ಷಗಳು ಮತಬೇಟೆಗಾಗಿ ತಂತ್ರಗಾರಿಕೆ ಮಾಡಿ ಉಳ್ಳವರನ್ನೇ ಕಣಕ್ಕೆ ಇಳಿಸಿವೆ. ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆಯಾದರೂ ಕೊನೆ ಕ್ಷಣದಲ್ಲಿ ಕಂಚಾಣ ಸದ್ದು ಮಾಡಲಿದೆ.

ಇದೇ ಮೊದಲ ಬಾರಿಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ಹೊರಗಿನವರು ಸ್ಪರ್ಧಿಸಿರುವುದರಿಂದ, ಹೊರಗಿನವರು, ಸ್ಥಳೀಯರು ಎನ್ನುವ ಪ್ರಶ್ನೆ ಎದ್ದಿದೆ. ಇದು ಎಷ್ಟರ ಮಟ್ಟಿಗೆ ಗಂಭೀರ ಪಾತ್ರ ವಹಿಸಲಿದೆ ಎಂಬುದು ಪ್ರಶ್ನಾರ್ಥಕವಾದರೂ ಹೊರಗಿನವರು ಎನ್ನುವ ಭೂತ ಚಾಲ್ತಿಯಲ್ಲಿರುವುದಂತೂ ಸತ್ಯ. ಆದರೆ, ಜಾತಿ ಲೆಕ್ಕಾಚಾರ ಹಾಕುವ ಅವಕಾಶವನ್ನು ಮೂರು ಪಕ್ಷಗಳು ಕಳೆದುಕೊಳ್ಳಲು ತಯಾರಿಲ್ಲ. 

ಹಣ, ಹೆಂಡ, ಇತರೆ ಆಮಿಷ ಒಡ್ಡಿ ಮತ ಬೇಟೆಯಾಡಲು ಸಿದ್ಧತೆ ಮಾಡಿಕೊಂಡಿರುವ ಮೂರು ಪಕ್ಷಗಳಲ್ಲಿ ಮೌಲ್ಯಯುತ ರಾಜಕಾರಣ ಮರೀಚಿಕೆ ಆಗಿರುವ ಈ ಹೊತ್ತಿನಲ್ಲಿ ಮತಗಳ ಮೌಲಿ ಕರಣ ಚರ್ಚೆ ಪ್ರಾಧಾನ್ಯತೆ ಪಡೆದುಕೊಂಡಿದೆ. ಹೀಗಾಗಿ ಹೊರಗಿನವರು ಎನ್ನುವ ವಿಷಯ ಎಷ್ಟರ ಮಟ್ಟಿಗೆ ಮತಗಳ ಮೌಲಿಕರಣ ಮಾಡುತ್ತದೆ ಎಂಬುದು ಪ್ರಶ್ನೆಯಾಗಿದೆ.

ಹೊರಗಿನವರು: ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯರು ಮತ್ತು ಹೊರಗಿನವರು ಎನ್ನುವ ಚರ್ಚೆ ಹೆಚ್ಚಾಗಿ ಕೇಳಿ ಬರುತ್ತಿರುವುದು ಚಿತ್ರದುರ್ಗ, ಮೊಳಕಾಲ್ಮೂರು, ಹಿರಿಯೂರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಾದರೂ ಹೊಳಲ್ಕೆರೆ ಮತ್ತು ಹೊಸದುರ್ಗದಲ್ಲೂ ಸ್ಥಳೀಯರು, ಹೊರಗಿನವರು ಎನ್ನುವ ಕಿಡಿಯಾಡುತ್ತಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಸ್ಥಳೀಯರು. ನಿರಂತರವಾಗಿ ಐದು ಸಲ ಆಯ್ಕೆಯಾಗಿರುವ ಅವರು ಏಕೆ ಸ್ಥಳೀಯರು, ಹೊರಗಿನವರು ಎನ್ನುವ ಪ್ರಶ್ನೆ ಎತ್ತಿದರೋ ಗೊತ್ತಿಲ್ಲ. ಆದರೆ, ಜಿಲ್ಲೆಯ ಬಹುತೇಕ ಕ್ಷೇತ್ರಗಳಿಗೆ ಬಿಜೆಪಿ ಪಕ್ಷವೇ ಹೊರಗಿನವರಿಗೆ ಮಣೆ ಹಾಕಿದೆ. 

ಮೊಳಕಾಲ್ಮೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಳ್ಳಾರಿ ಸಂಸದ ಬಿ. ರಾಮುಲು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಚಿತ್ರದುರ್ಗ ನಿವಾಸಿ ಎಂ.ಚಂದ್ರಪ್ಪ, ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್‌, ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಗೂಳಿಹಟ್ಟಿಯ ವಡ್ಡರಹಟ್ಟಿ ಆದರೂ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಉಳಿದ ಚಳ್ಳಕೆರೆ ಮತ್ತು ಚಿತ್ರದುರ್ಗ ಕ್ಷೇತ್ರಗಳಿಗೆ ಬಿಜೆಪಿ ಸ್ಥಳೀಯವಾಗಿ ಟಿಕೆಟ್‌ ನೀಡಿದೆ. 

ಕಾಂಗ್ರೆಸ್‌ ಪಕ್ಷವು ಕೂಡ ಹೊರಗಿನವರಿಗೆ ಟಿಕೆಟ್‌ ನೀಡಲು ಹಿಂದೆ ಬಿದ್ದಿಲ್ಲ. ಹೊಸದುರ್ಗ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್‌ ಸ್ಥಳೀಯರಿಗೆ ಟಿಕೆಟ್‌ ನೀಡಿದರೆ, ಚಿತ್ರದುರ್ಗ ಕ್ಷೇತ್ರಕ್ಕೆ ಬೆಂಗಳೂರು ನಿವಾಸಿ ಹನುಮಲಿ ಷಣ್ಮುಖಪ್ಪ, ಹೊಳಲ್ಕೆರೆ ಕ್ಷೇತ್ರಕ್ಕೆ ಎಚ್‌. ಆಂಜನೇಯ (ಮೂಲ ದಾವಣಗೆರೆ ನಗರ), ಹಿರಿಯೂರು ಕ್ಷೇತ್ರಕ್ಕೆ ಚಳ್ಳಕೆರೆ ನಿವಾಸಿ ಡಿ. ಸುಧಾಕರ್‌ ಸೇರಿ ಒಟ್ಟು ಮೂರು ಕ್ಷೇತ್ರಗಳಿಗೆ ಸ್ಥಳೀಯರಿಗೆ ಮತ್ತು ಮೂರು ಕ್ಷೇತ್ರಗಳಿಗೆ ಹೊರಗಿನವರಿಗೆ ಟಿಕೆಟ್‌ ನೀಡಿದೆ.

ಜೆಡಿಎಸ್‌ ಪಕ್ಷವು ಮೂರು ಸ್ಪರ್ಧಿಗಳಿಗೆ ಸ್ಥಳೀಯರಿಗೆ ಟಿಕೆಟ್‌ ನೀಡಿದರೆ ಚಿತ್ರದುರ್ಗ, ಚಳ್ಳಕೆರೆ ಮತ್ತು ಹೊಸದುರ್ಗ ಕ್ಷೇತ್ರಗಳಿಗೆ ಹೊರಗಿನವರಿಗೆ ಟಿಕೆಟ್‌ ನೀಡಿದೆ. ಚಳ್ಳಕೆರೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವೀಶ್‌ ಕುಮಾರ್‌ ದೇವನಹಳ್ಳಿ, ಚಿತ್ರದುರ್ಗ ಕ್ಷೇತ್ರಕ್ಕೆ ಚಳ್ಳಕೆರೆ ನಿವಾಸಿ ವೀರೇಂದ್ರ ಪಪ್ಪಿ, ಹೊಸದುರ್ಗ ಕ್ಷೇತ್ರಕ್ಕೆ ಬೆಂಗಳೂರು ನಿವಾಸಿ ಚಿತ್ರ ನಟ ಶಶಿಕುಮಾರ್‌ ಅವರಿಗೆ ಟಿಕೆಟ್‌ ನೀಡಿದೆ. ಸ್ಥಳೀಯರಾದ ಹಿರಿಯೂರು ಡಿ. ಯಶೋಧರ, ಮೊಳಕಾಲ್ಮೂರು ಎತ್ತಿನಹಟ್ಟಿ ಗೌಡ, ಹೊಳಲ್ಕೆರೆ ಗದ್ದಿಗೆ ಶ್ರೀನಿವಾಸ್‌ ಅವರಿಗೂ ಟಿಕೆಟ್‌ ನೀಡಿದೆ. 

ಮೂರು ಪಕ್ಷಗಳು ಹೊರಗಿನವರಿಗೆ ಟಿಕೆಟ್‌ ನೀಡಿರುವುದರಿಂದ ಸ್ಥಳೀಯರು ಮತ್ತು ಹೊರಗಿನವರು ಎನ್ನುವುದು ಅಪ್ರಸ್ತುತವಾಗಿದೆ. ರಾಜಕೀಯ ಪಕ್ಷಗಳು ಓಟಿಗಾಗಿ ಬೇಟೆಯಾಡಲು ಹೊರಗಿನವರ ಬೆನ್ನ ಬಿದ್ದು ಟಿಕೆಟ್‌ ನೀಡಿವೆ ಎನ್ನುವುದು ಅಷ್ಟೇ ಕಠೊರ ಸತ್ಯ.

„ಹರಿಯಬ್ಬೆ ಹೆಂಜಾರಪ್ಪ

ಟಾಪ್ ನ್ಯೂಸ್

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

24chikkodi

ವಿಧಾನ ಪರಿಷತ್ ಚುನಾವಣೆ: ಮತಗಟ್ಟೆಯೊಳಗೆ ಮೊಬೈಲ್ ನಿಷೇಧಿಸುವಂತೆ ಐವಾನ ಡಿಸೋಜಾ ಒತ್ತಾಯ

ಪರಿಷತ್ ನಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಮಾಜಿ ಸಿಎಂ ಬಿಎಸ್ ವೈ

ಪರಿಷತ್ ನಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಮಾಜಿ ಸಿಎಂ ಬಿಎಸ್ ವೈ

23jds

ಕಾಂಗ್ರೆಸ್, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಎಫೆಕ್ಟ್ ಆಗುವುದಿಲ್ಲ: ಸಚಿವ ಹಾಲಪ್ಪ ಆಚಾರ್

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ:  ಸಿ.ಟಿ. ರವಿ

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ: ಸಿ.ಟಿ. ರವಿ

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

chitradurga news

ಹಣದ ದುರಾಸೆಯಿಂದ ಅವನತಿ ಖಚಿತ

ಜವರಾಯನಾದ ಗ್ಯಾಸ್ ಟ್ಯಾಂಕರ್; ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು!

ಜವರಾಯನಾದ ಗ್ಯಾಸ್ ಟ್ಯಾಂಕರ್; ಪಂಚರ್ ಹಾಕುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು!

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿ

MUST WATCH

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

udayavani youtube

JDS ಜೊತೆ BJP ಹೊಂದಾಣಿಕೆ ಮಾಡಲು ಹೊರಟಿದೆ ಎಂದಾದರೆ… ನೀವೇ ಯೋಚಿಸಿ : ಡಿಕೆಶಿ ವ್ಯಂಗ್ಯ

udayavani youtube

ಬೆಳೆಗಳಿಗೆ ಬಸವನ ಹುಳುಗಳ ಕಾಟ : ನೀರಾವರಿ ಸೌಲಭ್ಯವಿದ್ದರೂ ರೈತನಿಗಿಲ್ಲ ಮುಕ್ತಿ

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

ಹೊಸ ಸೇರ್ಪಡೆ

ರೈತನ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ದಬ್ಬಾಳಿಕೆ: ತಹಶೀಲ್ದಾರ್ ಮೇಲೆ ಆರೋಪ ಮಾಡಿದ ರೈತ

ರೈತನ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ದಬ್ಬಾಳಿಕೆ: ತಹಶೀಲ್ದಾರ್ ಮೇಲೆ ಆರೋಪ ಮಾಡಿದ ರೈತ

ಕಲಾವಿದನೊಬ್ಬನಿಂದ ಕಲೆ-ಕಲಾವಿದರ ಸೇವೆ ಶ್ಲಾಘನೀಯ: ಕಡಂದಲೆ ಸುರೇಶ್‌ ಭಂಡಾರಿ

ಕಲಾವಿದನೊಬ್ಬನಿಂದ ಕಲೆ-ಕಲಾವಿದರ ಸೇವೆ ಶ್ಲಾಘನೀಯ: ಕಡಂದಲೆ ಸುರೇಶ್‌ ಭಂಡಾರಿ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

ಕೆಂಪು ಟೊಪ್ಪಿ ಸರ್ಕಾರ ರಚಿಸಲು ಬಯಸುತ್ತಿರುವುದು ಯಾಕೆ ಗೊತ್ತಾ?ಸಮಾಜವಾದಿ ಪಕ್ಷಕ್ಕೆ ಪ್ರಧಾನಿ

24chikkodi

ವಿಧಾನ ಪರಿಷತ್ ಚುನಾವಣೆ: ಮತಗಟ್ಟೆಯೊಳಗೆ ಮೊಬೈಲ್ ನಿಷೇಧಿಸುವಂತೆ ಐವಾನ ಡಿಸೋಜಾ ಒತ್ತಾಯ

ಪರಿಷತ್ ನಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಮಾಜಿ ಸಿಎಂ ಬಿಎಸ್ ವೈ

ಪರಿಷತ್ ನಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಮಾಜಿ ಸಿಎಂ ಬಿಎಸ್ ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.