ಉತ್ತಮ ಕೆಲಸ ಮಾಡಲು ಎಚ್ಚರಿಕೆ ಗಂಟೆ


Team Udayavani, May 1, 2021, 6:07 PM IST

ಉತ್ತಮ ಕೆಲಸ ಮಾಡಲು ಎಚ್ಚರಿಕೆ ಗಂಟೆ

ಚಿತ್ರದುರ್ಗ: ಕೋವಿಡ್ ಜಗತ್ತಿನಾದ್ಯಂತ ಸಂಕೀರ್ಣ ಸ್ಥಿತಿ ಸೃಷ್ಟಿಸಿದ್ದು, ಇದು ಸಂದಿ ಗ್ಧ ಕಾಲವಾಗಿದ್ದು, ಅಪಾರ ಜೀವಹಾನಿಯ ಜತೆಗೆ ನಮ್ಮ ಅಕ್ಕಪಕ್ಕದವರನ್ನು ಕಳೆದುಕೊಳ್ಳುತ್ತಿದ್ದೇವೆ. ಈ ದಿಸೆಯಲ್ಲಿ ನಾವೆಲ್ಲಾ ಉತ್ತಮ ಕೆಲಸ ಮಾಡಲು ಇದೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ರಂಜಾನ್‌ ಹಬ್ಬದ ಅಂಗವಾಗಿ ಯುಎಇ ಕನ್ನಡಿಗರು, ದುಬೈ ಸಂಯುಕ್ತ ಅರಬ್‌ ಸಂಸ್ಥಾನದಿಂದ ನಡೆದ ಸರ್ವ ಧರ್ಮ ರಂಜಾನ್‌ ಸ್ನೇಹಮಿಲನ ಮತ್ತು ಕೋವಿಡ್‌ಮುಕ್ತ ವಿಶ್ವಕ್ಕಾಗಿ ಪ್ರಾರ್ಥನಾ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಆನ್‌ಲೈನ್‌ ಮೂಲಕ ಶ್ರೀಗಳು ಮಾತನಾಡಿದರು. ಸುಖ ಸಂಪತ್ತಿನ ಜತೆ ಹೋಗುವವರು ಮನೆಯಲ್ಲಿ ಉಳಿಯುತ್ತಾರೆ. ಸಂತರು ಪ್ರವಾದಿಗಳು ಸಂಕಷ್ಟ ಬಂದಾಗ ಬೀದಿಗೆ ಬರುತ್ತಾರೆ. ಅವರು ಅನ್ನ ಆಹಾರ ಹಂಚುತ್ತಾರೆ. ಭಾರತೀಯರಿಗೆ ಶ್ರಾವಣ ಮೊದಲಾದವು ಪವಿತ್ರವಾದರೆ ಮುಸ್ಲಿಂ ಬಾಂಧವರಿಗೆ ಉಪವಾಸ ಮಾಡುತ್ತ ರಂಜಾನ್‌ ಆಚರಿಸುವುದು ಪವಿತ್ರವಾಗಿದೆ. ಈ ತಿಂಗಳ ಪ್ರಾಮುಖ್ಯತೆಯೇ ಸಹಭೋಜನ. ತನ್ನ ವಿರೋಗಳನ್ನೂ ಸಹ ಆಮಂತ್ರಿಸುವುದು ವಿಶೇಷ. ಬಸವಣ್ಣ ಕೂಡಾ ಇದನ್ನೇ ಹೇಳಿದ್ದಾರೆ. ಸೇವಿಸುವ ಆಹಾರಕ್ಕೆ ಕೆಲವರು ಅನ್ನ, ಕೂಳು ಮೊದಲಾಗಿ ಹೇಳುತ್ತಾರೆ. ಬಸವಣ್ಣನವರ ಪ್ರಕಾರ ಶರಣ ಸಂಸ್ಕೃತಿಯಲ್ಲಿ ಪ್ರಸಾದ. ಇಸ್ಲಾಂನಲ್ಲಿ ಜಕಾತ್‌ ಎನ್ನುತ್ತಾರೆ ಎಂದು ವಿವರಿಸಿದರು. ಎಲ್ಲ ಧರ್ಮಗಳಲ್ಲೂ ಕ್ಷಮಾಪಣೆ ಇದೆ. ಅದರಂತೆ ನಾವು ಬೇರೆಯರಿಗೆ ಮಾಡಿದ ಉಪಕಾರ ಹಾಗೂ ನಮಗೆ ಬೇರೆಯವರು ಮಾಡಿದ ಅಪಕಾರಗಳನ್ನು ಮರೆಯಬೇಕು. ಆಗ ಮಾತ್ರ ಸಹಜೀವನ, ಸಹಚಿಂತನ ಸಾಧ್ಯ ಎಂದರು.

ಸದ್ಯದ ಪರಿಸ್ಥಿತಿಯು ಅಂತಃಪ್ರಜ್ಞೆ ಪ್ರೇರೇಪಿಸುವ ಮತ್ತು ಅನುಸಂಧಾನದ ಕಾಲ. ಕರೆದುಕೊಂಡು ಉಣ್ಣುವ ಕಾಲ. ಮಾತ್ರ ಎಚ್ಚರಿಕೆಯ ಕಾಲವೂ ಹೌದು. ಅಸಹಾಯಕರಿಗೆ ನೆರವು ನೀಡುವುದು ಮುಖ್ಯವಾಗಿದೆ. ಶರಣರು ಸಂತರು ಸೂಫಿಗಳು ಕಷ್ಟಜೀವಿಗಳಿಗೆ ಸಹಾಯ ಹಸ್ತ ನೀಡುತ್ತಾರೆ. ಮಸೀದಿ, ಮಂದಿರ, ಚರ್ಚ್‌, ಇಗರ್ಜಿಗಳಿಗೆ ಒಂದು ಜವಾಬ್ದಾರಿ ಇರುತ್ತದೆ. ನಮ್ಮ ಕಾಯಕ ಪೂಜೆಯಾಗಬೇಕು. ನಮಗೆ ದುಡಿದು ಉಣ್ಣುವವರು ಬೇಕು. ಪ್ರತಿಯೊಬ್ಬ ಮುಸ್ಲಿಂ ಬಾಂಧವರು ದುಡಿದು ಉಣ್ಣುತ್ತಾರೆ. ಧರ್ಮ ಎನ್ನುವುದು ಪರಮ ಪರಿಜ್ಞಾನ ಉಂಟು ಮಾಡುತ್ತದೆ. ನಾವೆಲ್ಲ ದೈನಂದಿನ ಜೀವನದಲ್ಲಿ ಶಾಂತಿ, ಸಹನೆ, ಸಾಮರಸ್ಯದಿಂದ ಜೀವಿಸೋಣ ಎಂದರು.

ಪದ್ಮಶ್ರೀ ಇಬ್ರಾಹಿಂ ಸುತಾರ, ಮಂಗಳೂರಿನ ಮೌಲಾನ ಸುಫಿಯಾನ್‌ ಸಖಾಫಿ, ಮೌಲಾನಾ ಅನೀಸ್‌ ಕೌಸರಿ, ಮಹಮ್ಮದ್‌ ಕುಂಞ, ಹಾಸನದ ಫಾದರ್‌ ಅಂತೋಣಿ, ಕೆಎನ್‌ಆರ್‌ಐನ ಡಾ. ಆರತಿ ಕೃಷ್ಣ, ದುಬೈನ ಖಲೀಲ್‌ ಕಾಸರಗೋಡು, ಮಹಮ್ಮದ್‌ ಮುಸ್ತಾಫ ಮತ್ತು ರಫೀಕ್‌ ಅಲಿ ಮೊದಲಾದವರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಮುಸ್ತಾಫ ನಾಡಗೀತೆ ಹಾಡುವಾಗ ಎಲ್ಲರು ಎದ್ದು ನಿಂತು ಗೌರವ ಸಲ್ಲಿಸಿದರು. ಪಲ್ಲವಿ ಸ್ವಾಗತಿಸಿದರು. ಮೊಹಮ್ಮದ್‌ ಅಸ^ರ್‌ ಸೋಂಪಾಡಿ ಕುರಾನ್‌ ಪಠಣ ಮಾಡಿದರು. ಸೈಯದ್‌ ಅಸYರ್‌ ಅಲಿ ಪ್ರಾರ್ಥಿಸಿದರು.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.