Udayavni Special

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಮುಂದಾಗಿ: ಸ್ವಾಮಿ


Team Udayavani, May 25, 2018, 5:06 PM IST

cta-3.jpg

ಚಿತ್ರದುರ್ಗ: ಸಮಾಜದಲ್ಲಿನ ಹಿರಿಯರು ಪರಿಸರದ ಹಬ್ಬ ಆಚರಿಸುತ್ತಾ ಹೋದರೆ ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡುತ್ತದೆ ಎಂದು ಪರಿಸರವಾದಿ ಡಾ| ಎಚ್‌.ಕೆ.ಎಸ್‌. ಸ್ವಾಮಿ ಹೇಳಿದರು.

ನಗರದ ಶಾರದಾ ಸಭಾ ಭವನದಲ್ಲಿ ಸಂಸ್ಕಾರ ಭಾರತಿ ಸಂಘಟನೆ ವತಿಯಿಂದ ಭೂ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪರಿಸರ ಸಂರಕ್ಷಣೆಗೆ ಮಾರ್ಗೊಪಾಯಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಅವರು
ಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ಪರಿಸರದ ದಿನಾಚರಣೆ ಗಂಭೀರವಾಗಿ ಪರಿಗಣಿಸಿ ಪರಿಸರದ ಹಬ್ಬಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.
 
 ಪ್ರೌಢಶಾಲೆಗೆ ಬಂದ ಮಕ್ಕಳಿಗೂ ಪರಿಸರದ ಹಬ್ಬಗಳ ಉದ್ದೇಶ ಅರ್ಥವಾಗುತ್ತಿಲ್ಲ. ವಿಶ್ವ ಜೀವ ವೈವಿಧ್ಯ ದಿನಾಚರಣೆ, ಭೂ ದಿನಾಚರಣೆ, ವಿಶ್ವ ಜಲ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆ, ವಿಶ್ವ ಅರಣ್ಯ ದಿನಾಚರಣೆ, ಹೀಗೆ ತಿಂಗಳಿಗೊಂದು ಹಬ್ಬವನ್ನು ಶಾಲೆಗಳಲ್ಲಿ ಆಚರಿಸಬಹುದು. ಇಂತಹ ಹಬ್ಬಗಳು ಜನಸಾಮಾನ್ಯರಿಗೆ ತಲುಪಿಯೇ ಇಲ್ಲ
ಎಂದು ಹೇಳಿದರು. 

ಗಾಂಧೀಜಿಯವರ ಚಿಂತನೆಗಳಾದ ಸರಳತೆ, ಸ್ವದೇಶಿ, ಅಸಂಗ್ರಹ, ದೈಹಿಕ ಶ್ರಮ, ಇವೆಲ್ಲವೂ ಪರಿಸರದ ಸಂರಕ್ಷಣೆಗೆ ಅನುಕೂಲಕರ ತತ್ವಗಳು. ಜೀವನ ಶೈಲಿಯಲ್ಲಿ ಸರಳತೆ ತಂದು, ಗ್ರಾಮೀಣ ವಸ್ತುಗಳನ್ನು ಹೆಚ್ಚು ಬಳಸಿಕೊಳ್ಳುತ್ತ ಹೋದಾಗ, ಪರಿಸರ ತನ್ನಿಂದ ತಾನೇ ಸುಧಾರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಕೈಗಾರಿಕೆಗಳಿಂದ ವಾಯು, ಜಲ, ಮಣ್ಣು, ಶಬ್ದ ಮಾಲಿನ್ಯಗಳು ಉಂಟಾಗಿವೆ. ಗಾಂಧೀಜಿಯವರ ಚಿಂತನೆಗಳನ್ನು, ಮಕ್ಕಳಿಗೆ, ಯುವ ಸಮುದಾಯಕ್ಕೆ ಮಾದರಿಗಳ ಮುಖಾಂತರ ಪ್ರಸ್ತುತ ಪಡಿಸಿದರೆ ಬದಲಾವಣೆ ಕಾಣಬಹುದು ಎಂದರು.

ಇಡೀ ಮನುಕುಲದ ಅಳಿವು ಉಳಿವು ಗುಡ್ಡ ಬೆಟ್ಟಗಳ ಮೇಲೆ ಅವಲಂಬಿಸಿದೆ. ಆದರೆ, ನಾವು ನಮ್ಮೂರಿನ ಗುಡ್ಡ ಬೆಟ್ಟಗಳ ಅಳಿವು ಉಳಿವು ಎಲ್ಲ ತಂತ್ರಜ್ಞಾನದ ಯಂತ್ರಗಳ ಕೈಯಲ್ಲಿ ಕೊಟ್ಟಿದ್ದೇವೆ. ಭೂಮಿ ನಮ್ಮ ತಾತ ಮುತ್ತಾತರಿಂದ ಬಳುವಳಿಯಾಗಿ ಬಂದಿಲ್ಲ. ಇದನ್ನು ನಾವು ಮುಂದಿನ ಪೀಳಿಗೆಯಿಂದ ಸಾಲವಾಗಿ ಪಡೆದದ್ದು ಎಂಬ ಅರಿವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಸಾಲವನ್ನು ಸರಿಯಾಗಿ ಮರು ಪಾವತಿಸಬೇಕಾದ್ದು ನಮ್ಮ ಕರ್ತವ್ಯ ಎಂದರು.

ಸಂಸ್ಕಾರ ಭಾರತಿ ವಿಭಾಗ ಸಂಚಾಲಕ ರಾಜೀವ್‌ ಲೋಚನ್‌ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಪುರಾತನ ಸಂಸ್ಕೃತಿ. ಅದನ್ನು ಆಳವಾಗಿ ಅಧ್ಯಯನ ಮಾಡುವಂತ ಯುವಕರನ್ನ ತಯಾರು ಮಾಡಬೇಕಾಗಿದೆ. ಅವರಿಗೆ ಶಿಕ್ಷಣ ನೀಡಿ, ಪ್ರೋತ್ಸಾಹಿಸುವುದು ಇಂದಿನ ಅವಶ್ಯಕತೆಯಾಗಿದೆ. ಸಂಸ್ಕಾರ ಭಾರತೀಯ ಉದ್ದೇಶ ಜನರಲ್ಲಿರುವ ಸಾಂಸ್ಕೃತಿಕ, ಆಧ್ಯಾತ್ಮಿಕ, ಚಿಂತನೆಗಳನ್ನ ಬೆಳಕಿಗೆ ತರುವುದು, ಮಕ್ಕಳಲ್ಲಿರುವ ಕಲೆ, ಸಂಗೀತ, ನಾಟಕ, ಯಕ್ಷಗಾನ, ಕವಿತೆ, ಬರವಣಿಗೆ, ಹೊರತರಲು ಸಹಾಯಕವಾಗಿದೆ ಎಂದರು. ಸಂಚಾಲಕ ಎ.ಎನ್‌. ಮೋಹನ್‌
ಕುಮಾರ್‌ ಮಾತನಾಡಿ, ನಾವೀಗ ಬಾಹ್ಯಾಕಾಶ ಯುಗದಲ್ಲಿದ್ದೇವೆ. ಹಾಗೆಂದು ಭೂಮಿಯ ಯುಗವನ್ನು ಮರೆತುಬಿಟ್ಟರೆ ಹೇಗೆ? ಪಂಚ ಭೂತಗಳ ಪೈಕಿ ಅಗ್ನಿ, ನೀರು ಮತ್ತು ಭೂಮಿಯನ್ನು ಪೂಜಿಸುವ ನಾವು, ಗಾಳಿ ಮತ್ತು ಆಕಾಶವನ್ನು ಕಡೆಗಣಿಸುತ್ತಿದ್ದೇವೆ. ಆಕಾಶವನ್ನು ಕಸದ ತೊಟ್ಟಿಯಂತೆ ಬಳಸಲು ಶುರು ಮಾಡಿದ್ದೇವೆ. ನಿಸರ್ಗದ ಮೇಲೆ ಮನುಷ್ಯನ ಆಕ್ರಮಣ ಅತಿಯಾಗುತ್ತಿದೆ. ಭೂಮಿಯ ಎಲ್ಲ ಸಂಪನ್ಮೂಲಗಳನ್ನು ಮನುಷ್ಯರ ಭೋಗಕ್ಕೆ ಸಿದ್ಧಪಡಿಸಿ, ಮಾರಿ ಹಣ ಗಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಸಂಸ್ಕಾರ ಭಾರತೀಯ ಅಧ್ಯಕ್ಷ ಟಿ.ಆರ್‌.ನಾಗರಾಜ್‌ ಮಾತನಾಡಿ, ಸಂಸ್ಕಾರ ಭಾರತೀಯ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಮತ್ತು ಸ್ವದೇಶಿ ವಸ್ತ್ರವಾದ ಖಾದಿಯನ್ನು ಹೆಚ್ಚು ಬಳಸುತ್ತೇವೆ ಎಂದು ಭರವಸೆ ನೀಡಿದರು.

ಚಾರ್ಟೆಡ್‌ ಅಕೌಂಟೆಂಟ್‌ ಮುರಳಿಧರ್‌ ರಾವ್‌, ಪ್ರೇಮಾ, ದೇಸಾಯಿ, ಜಯಾ ಪ್ರಾಣೇಶ್‌, ಗುರುರಾಜ್‌, ರವಿಶಂಕರ್‌, ಲಕ್ಷ್ಮೀ ಇದ್ದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!

ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!

ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!

ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!

ಬಂದ್ ಗೆ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ: ರೈತರ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ

ಬಂದ್ ಗೆ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ: ರೈತರ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ

ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ

car

ವಾಹನಗಳಲ್ಲಿ ಈ ಕಾರಣಗಳಿಗೆ ಮಾತ್ರ ಸ್ಮಾರ್ಟ್ ಪೋನ್ ಬಳಸಿ: ಮೋಟಾರು ವಾಹನ ಕಾಯ್ದೆ ಅಧಿಸೂಚನೆ !

ಕರ್ನಾಟಕ ಬಂದ್: ರಾಮನಗರದಲ್ಲಿ ಬಂದ್ ಬಹುತೇಕ ಯಶಸ್ವಿ

ಕರ್ನಾಟಕ ಬಂದ್: ರಾಮನಗರದಲ್ಲಿ ಬಂದ್ ಬಹುತೇಕ ಯಶಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ಪ್ರತಿಭಟನೆ ಶಾಂತಿಯುತವಾಗಿರಲಿ

ಪ್ರತಿಭಟನೆ ಶಾಂತಿಯುತವಾಗಿರಲಿ

cb-tdy-2

ಕೃಷಿಯೊಂದಿಗೆ ಹೈನುಗಾರಿಕೆ ಮಾಡಿ: ಶಶಿಕಲಾ

cd-tdy-1

ಅಸಂಘಟಿತ ಕಾರ್ಮಿಕರಿಗೂ ಪರಿಹಾರ ಘೋಷಿಸಿ

ಎಸ್‌ಸಿಪಿ-ಟಿಎಸ್‌ಪಿ ಗುರಿ ಸಾಧನೆಗೆ ಸೂಚನೆ

ಎಸ್‌ಸಿಪಿ-ಟಿಎಸ್‌ಪಿ ಗುರಿ ಸಾಧನೆಗೆ ಸೂಚನೆ

MUST WATCH

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!ಹೊಸ ಸೇರ್ಪಡೆ

ಕಥೆ ಹೇಳುವ ತಂಡದ ಜತೆ ಮೋದಿ ಮಾತುಕತೆ

ಕಥೆ ಹೇಳುವ ತಂಡದ ಜತೆ ಮೋದಿ ಮಾತುಕತೆ

ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!

ಕೊನೆಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಎರಡು ಆಸೆಗಳು ಈಡೇರಲೇ ಇಲ್ಲ!

bng-tdy-1

ಮೆಟ್ರೋ ಸುರಂಗ ರಹಸ್ಯ

cinema-tdy-4

ತ್ರಿಬಲ್‌ ರೈಡಿಂಗ್‌ಗೆ ಬಂದ ಮೇಘಾ ಶೆಟ್ಟಿ

ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!

ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.