ಚಂದ್ರಂಪಳ್ಳಿ ಜಲಾಶಯದಲ್ಲಿ ಮೊಸಳೆ: ಆತಂಕ

Team Udayavani, Jul 15, 2019, 2:58 PM IST

ಚಿಂಚೋಳಿ: ಚಂದ್ರಂಪಳ್ಳಿ ಜಲಾಶಯದಲ್ಲಿ ಬೃಹತ್‌ ಗಾತ್ರದ ಮೊಸಳೆ ದಡಕ್ಕೆ ಬಂದು ಮಲಗಿದೆ.

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯಪ್ರದೇಶದಲ್ಲಿ ಬರುವ ಚಂದ್ರಂಪಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣ ಅತಿ ಕಡಿಮೆ ಇರುವುದರಿಂದ ಕಳೆದೆರಡು ದಿನಗಳಿಂದ ಜಲಾಶಯ ದಡದಲ್ಲಿ ಬೃಹತ್‌ ಗಾತ್ರದ ಮೊಸಳೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಭಯದ ಭೀತಿಯನ್ನುಂಟು ಮಾಡಿದೆ.

ಕಲಬುರಗಿ ನಗರದ ಶರಣಬಸವೇಶ್ವರ ಕೆರೆಯಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಮೊಸಳೆಯ ಸಣ್ಣ ಮರಿಯನ್ನು ತಾಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ತಾಲೂಕು ವಲಯ ಅರಣ್ಯಾಧಿಕಾರಿ ಆರ್‌.ಆರ್‌. ಯಾದವ ನೇತೃತ್ವದಲ್ಲಿ ಖಾಸಗಿ ವಾಹನವೊಂದರಲ್ಲಿ ಗುಪ್ತವಾಗಿ ತಂದು ಬಿಡಲಾಗಿತ್ತು. ಈಗ ಅದು ಬೃಹತ್‌ ಗಾತ್ರದ ಮೊಸಳೆಯಾಗಿ ಬೆಳೆದಿದೆ.

ಕಳೆದ ವರ್ಷ ಜಲಾಶಯದ ದಡದಲ್ಲಿ ಮೊಸಳೆ ಮಲಗಿರುವುದನ್ನು ದನಗಾಹಿಗಳು ನೋಡಿ ಭಯಭೀತರಾಗಿ ಗ್ರಾಮದ ಜನರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಆಗ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಡಂಗೂರ ಸಾರಿ ಜನರಿಗೆ ಎಚ್ಚರಿಕೆ ನೀಡಿದ್ದರು.

ಆದರೀಗ ಶುಕ್ರವಾರ ಮತ್ತು ಶನಿವಾರ ಚಂದ್ರಂಪಳ್ಳಿ ಜಲಾಶಯದ ಮಧ್ಯಭಾಗದಲ್ಲಿ ಇರುವ (ನಡುಗಡ್ಡೆಯಂತಹ) ಪ್ರದೇಶದಲ್ಲಿ ಮಲಗಿರುವ ಮೊಸಳೆ ಕಂಡು ಮತ್ತೆ ಆತಂಕ ಪಡುವಂತಾಗಿದೆ. ಚಂದ್ರಂಪಳ್ಳಿ ಗ್ರಾಮಸ್ಥರು ಹೆಚ್ಚಾಗಿ ಕೆರೆಯಲ್ಲಿ ಬಟ್ಟೆ ತೊಳೆಯಲು ಬರುತ್ತಾರೆ. ದನಕರುಗಳಿಗೆ ನೀರು ಕುಡಿಸಲು ಬರುತ್ತಾರೆ. ಕಾಡು ಪ್ರಾಣಿಗಳು ಸಂಜೆ ವೇಳೆ ನೀರು ಕುಡಿಯಲು ಬರುತ್ತವೆ. ಹೀಗಾಗಿ ಜನತೆ ಭಯಭೀತರಾಗಿದ್ದಾರೆ.

ಮೊಸಳೆ ಜಲಾಶಯದಲ್ಲಿ ಕಾಣಿಸಿಕೊಂಡಿರುವುದು ನಿಜ. ಜನರಿಗೆ ಜಲಾಶಯದ ಹತ್ತಿರ ಹೋಗದಂತೆ ತಿಳಿಸಲು ಡಂಗೂರ ಸಾರಲಾಗುವುದು. ಮೊಸಳೆ ದೊಡ್ಡದಾಗಿದೆ. ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿತ್ತು. ಸದ್ಯ ನೀರಿನ ಪ್ರಮಾಣ ಕಡಿಮೆ ಇದೆ. ಹೀಗಾಗಿ ಹೊರಗೆ ಬರುತ್ತಿರಬಹುದು.
ಸಿದ್ಧಾರೂಢ,
ವನ್ಯಜೀವಿ ಉಪ ಸಂರಕ್ಷಣಾಧಿಕಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರೋಣ/ಹೊಳೆಆಲೂರು: ಸಮೀಪದ ಬಿ.ಎಸ್‌ .ಬೇಲೇರಿ ನವ ಗ್ರಾಮದಲ್ಲಿ ಶುಕ್ರವಾರ ಪ್ರವಾಹ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆಸರೆ ಮನೆಗಳ ಹಕ್ಕುಪತ್ರ ವಿತರಿಸಿದರು. ನಂತರ...

  • ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ದೇವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಸಡಗರ, ಸಂಭ್ರಮದಿಂದ ನೆರವೇರಿತು. ಶ್ರೀ ಬೀರಲಿಂಗೇಶ್ವರಸ್ವಾಮಿ,...

  • ನರಗುಂದ: ಮಹದಾಯಿ ಯೋಜನೆಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸಿ ಮಹದಾಯಿ ಹೋರಾಟಗಾರರು ಶುಕ್ರವಾರ ಪಾದಯಾತ್ರೆ ಕೈಗೊಂಡು ವಿಜಯೋತ್ಸವ...

  • ಬೆಳಗಾವಿ: ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ ಖಾಸಗಿ ನೌಕರಿಗಾಗಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ...

  • ಯಾದಗಿರಿ: ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ...

ಹೊಸ ಸೇರ್ಪಡೆ