25 ಅಡಿ ಆಳಕ್ಕೆಮಗುಚಿದ ರಿಕ್ಷಾ ಇಬ್ಬರು ಮಹಿಳೆಯರು ಸಾವು

Team Udayavani, Feb 17, 2020, 6:40 PM IST

ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಪಂಚಾಯತ್ ವ್ಯಾಪ್ತಿಯ ಪಡಂಬಿಲ ಪಾಲೆದಬೆಟ್ಟು ಎಂಬಲ್ಲಿ ಅಪೆ ರಿಕ್ಷಾವೊಂದು ಸ್ಕಿಡ್ ಆಗಿ ಕಮರಿಗೆ ಮಗುಚಿಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಘಟನೆಯಲ್ಲಿ ನಡ ಗ್ರಾಮದ ಕೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಹಾಗೂ ನಡ ಬೈಲು ದರ್ಕಾಸು ನಿವಾಸಿ ಸಾಜಿದಾಬಿ (56) ಮೃತಪಟ್ಟಿದ್ದಾರೆ.

ರಿಕ್ಷಾದಲ್ಲಿದ್ದ ಕೊಲ್ಲುಟ್ಟು‌ ಒಂದೇ ಕುಟುಂಬದ ನಿವಾಸಿಗಳಾದ
ಮಮ್ತಾಝ್ (30), ಶೈನಾಝ್ (29) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರಗೆ ಸಾಗಿಸಲಾಗಿದೆ.

ರಿಕ್ಷಾ ಚಾಲಕ ನವೀದ್(31) ಅವರಿಗೂ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಡಿಗೆ ನೆಲೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದ ಕುಟುಂಬವೊಂದರ ಒಬ್ಬ ಮಹಿಳೆ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮತ್ತೊಬ್ಬರು ಆಸ್ಪತ್ರೆ ಸಾಗಿಸುವ ಮಧ್ಯೆ‌ ಮೃತಪಟ್ಟಿದ್ದು‌ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದ್ದು‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಧಾವಿಸಿದಾರೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ