ಸುಳ್ಯ: ಅಂಬೇಡ್ಕರ್‌ ಭವನಕ್ಕೆ 25 ಲಕ್ಷ ರೂ. ಬಿಡುಗಡೆ

Team Udayavani, Jun 17, 2019, 6:13 AM IST

ಸುಳ್ಯ: ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಅಪೂರ್ಣ ಸ್ಥಿತಿಯಲ್ಲಿದ್ದ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿ ಹಲವು ಆರೋಪ – ಪ್ರತ್ಯಾರೋಪಗಳ ನಡುವೆ ಬರೋಬ್ಬರಿ ನಾಲ್ಕು ವರ್ಷಗಳ ಅನಂತರ ಮರು ಆರಂಭಗೊಂಡಿದೆ.

ಒಟ್ಟು 3.10 ಕೋಟಿ ರೂ. ಯೋಜನಾ ಗಾತ್ರದ ಈ ಕಾಮಗಾರಿಯ ಪ್ರಥಮ ಹಂತದಲ್ಲಿ 75 ಲಕ್ಷ ರೂ. ಬಿಡುಗಡೆಗೊಂಡಿತ್ತು. ಇದೀಗ ಎರಡನೇ ಹಂತದ 25 ಲಕ್ಷ ರೂ. ಬಿಡುಗಡೆಗೊಂಡಿದೆ. ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಹೊಸ ಪ್ರಸ್ತಾವನೆ

ಯಡಿಯೂರಪ್ಪ ಸರಕಾರದ ಕೊನೆ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ 1 ಕೋಟಿ ರೂ. ಅನುದಾನದಲ್ಲಿ ತಾಲೂಕು ಅಂಬೇಡ್ಕರ್‌ ಭವನ ನಿರ್ಮಿಸುವ ಪ್ರಸ್ತಾವ ಸಲ್ಲಿಸಿತ್ತು. ಮೊದಲ ಹಂತದ ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಿಸಲಾಯಿತು. ಭವಿಷ್ಯದ ಹಿತ ದೃಷ್ಟಿಯಿಂದ ಹಳೆ ಯೋಜನೆ ಬದಲಾಯಿಸಿ ಶಾಸಕರ ಸೂಚನೆಯಂತೆ 3.15 ಕೋಟಿ ರೂ. ಹೊಸ ಪ್ರಸ್ತಾವನೆ ಸಲ್ಲಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ