ನೇತ್ರಾವತಿ ತಟದ ಕೃಷಿಗೆ ವಾರದಲ್ಲಿ 3 ದಿನ ನೀರು

Team Udayavani, Apr 11, 2019, 6:01 AM IST

ಬಂಟ್ವಾಳ: ನೇತ್ರಾವತಿ ನದಿ ತಟದ ರೈತರಿಗೆ ವಾರದಲ್ಲಿ ಮೂರು ದಿನ ಮಾತ್ರ ನೀರೆತ್ತುವ ಸ್ಥಾವರವನ್ನು (ಪಂಪ್‌ಸೆಟ್‌) ಚಾಲನೆ ಮಾಡಲು ವಿದ್ಯುತ್‌ ಪೂರೈಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಂದ ಮೆಸ್ಕಾಂಗೆ ಸೂಚನೆ ಬಂದಿದ್ದು ಅದರಂತೆ ಕ್ರಮ ಕೈಗೊಳ್ಳುತ್ತಿರುವುದಾಗಿ ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಶಂಭೂರು ಎಎಂಆರ್‌ ಡ್ಯಾಂನಿಂದ ನೀರು ಹರಿಯ ಬಿಟ್ಟರೂ ನದಿ ದಂಡೆಯ ಪಂಪ್‌ಸೆಟ್‌ಗಳು ರಾತ್ರಿ-ಹಗಲು ನೀರೆತ್ತುವ ಕಾರಣ ತುಂಬೆ ಡ್ಯಾಂಗೆ ನೀರು ತಲುಪುವುದು ಕಷ್ಟ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಲಾಗಿದೆ.

ಮಂಗಳೂರು ಮಹಾನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಸಾಧ್ಯವಾಗುತ್ತಿರುವ ಕಾರಣ ನೇತ್ರಾವತಿ ನದಿ ಪಕ್ಕದಲ್ಲಿರುವ ತೋಟದಲ್ಲಿ ಕೃಷಿ ಪಂಪ್‌ ಸೆಟ್‌ಗಳಿಗೆ ನಿರಂತರವಾಗಿ ಪೂರೈಕೆಯಾಗುತ್ತಿರುವ ವಿದ್ಯುತ್‌ ಸಂಪರ್ಕವನ್ನು ತಾಲ್ಕಾಲಿಕ ವಾರದಲ್ಲಿ ನಾಲ್ಕು ದಿನ ವಿದ್ಯುತ್‌ ನಿಲುಗಡೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿರುವುದಾಗಿ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ