ಬೆಳ್ತಂಗಡಿ ತಾ|ನ 61 ಸಂತ್ರಸ್ತರಿಗೆ 37 ಲಕ್ಷ ರೂ. ವಿತರಣೆ

ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ನೇರ ಪರಿಹಾರ

Team Udayavani, Sep 16, 2019, 5:16 AM IST

1509CH9_HOLEDADDU-DEEKAYYA

ನೆರೆಯಿಂದ ಸಂಪೂರ್ಣ ಹಾನಿಯಾಗಿರುವ ಹೊಳೆದಡ್ಡು ಡೀಕಯ್ಯ ಅವರ ಮನೆ.

ಬೆಳ್ತಂಗಡಿ: ಪ್ರವಾಹದಿಂದ ಬೆಳ್ತಂಗಡಿ ತಾ|ನ 16 ಗ್ರಾಮಗಳು ತತ್ತರಿಸಿದ್ದವು. ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಡುವ ದೃಷ್ಟಿಯಿಂದ ರಾಜ್ಯದಲ್ಲಿ ನೆಲೆ ಕಳೆದುಕೊಂಡ 191 ಸಂತ್ರಸ್ತರ ಪೈಕಿ ಬೆಳ್ತಂಗಡಿ ತಾ|ನ 61 ಮಂದಿ ಸಂತ್ರಸ್ತರಿಗೆ 2ನೇ ಹಂತದಲ್ಲಿ 37 ಲಕ್ಷ ರೂ. ನೇರ ಖಾತೆಗೆ ರಾಜ್ಯ ಸರಕಾರ ಹಸ್ತಾಂತರಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಜಿಲ್ಲೆಯ ಪ್ರವಾಹ ಭೀಕರತೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಬೆಳ್ತಂಗಡಿಯ ಪರಿಸ್ಥಿತಿ ಅವಲೋಕಿಸಿ ರಾಜ್ಯಕ್ಕೆ ಅನ್ವಯವಾಗುವಂತೆ 2 ಸಾವಿರ ಕೋಟಿ ರೂ. ನೆರೆ ಪರಿಹಾರ ಘೋಷಿಸಿದ್ದರು. ಮೊದಲ ಹಂತವಾಗಿ ತಾಲೂಕಿನ 267 ಮಂದಿ ಸಂತ್ರಸ್ತ ಕುಟುಂಬಗಳಿಗೆ 10,000 ವಿತರಿಸಲಾಗಿದೆ. ಜತೆಗೆ ದಾನಿಗಳಿಂದ ದಿನಬಳಕೆ ವಸ್ತು, ಅಕ್ಕಿ ಸಹಿತ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತ ಹಾಗೂ ಶಾಸಕರ ಮುತುವರ್ಜಿಯಿಂದ ವಿತರಿಸಲಾಗಿತ್ತು.

37 ಲಕ್ಷ ರೂ. ನೇರ ಖಾತೆಗೆ
ತಾ|ನಲ್ಲಿ ಈಗಾಗಲೇ 257 ಮಂದಿ ಫಲಾನುಭವಿ ಸಂತ್ರಸ್ತರನ್ನು ತಾ| ಆಡಳಿತ ಗುರುತಿಸಿದೆ. ರಾಜ್ಯ ದಲ್ಲಿ 190 ಮಂದಿ ಸಂಪೂರ್ಣ ಮನೆ ಕಳೆದುಕೊಂಡವರ ಪೈಕಿ ಮೊದಲ ಬಾರಿಗೆ ತಾ|ನ ಅತೀ ಹೆಚ್ಚು 61 ಮಂದಿ ಫಲಾನು ಭವಿಗಳಿಗೆ ಪರಿಹಾರ 37 ಲಕ್ಷ ರೂ. ನೇರ ಖಾತೆಗೆ ರಾಜ್ಯ ಸರಕಾರ ಜಮೆ ಮಾಡಿದೆ. ಮುಂದಿನ ದಿನಗಳಲ್ಲಿ ಉಳಿದ 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಹಂತ ಹಂತವಾಗಿ ಹಣ ಖಾತೆಗೆ ಬೀಳಲಿದೆ.

ಸಂಪೂರ್ಣ ಮನೆ ಕಳೆದು ಕೊಂಡವರಿಗೆ 1 ಲಕ್ಷ ರೂ. ಭಾಗಶಃ ಮನೆ ಕಳೆದುಕೊಂಡವರಿಗೆ 25 ಸಾವಿರ ರೂ., ತೀವ್ರ ಮನೆ ಹಾನಿಯಾದವರಿಗೆ 25 ಸಾವಿರ ರೂ. ಬಿಡುಗಡೆಯಾಗಿದೆ.

ಉಳಿದಂತೆ ಸಂಪೂರ್ಣ ಮನೆ ಹಾನಿಯಾದವರಿಗೆ ಬಾಡಿಗೆಯಂತೆ ತಿಂಗಳಿಗೆ 5 ಸಾವಿರ ರೂ. ಅಥವಾ ತತ್‌ಕ್ಷಣ ಶೆಡ್‌ ಕಟ್ಟಿಕೊಳ್ಳುವ ದೃಷ್ಟಿಯಿಂದ 50 ಸಾವಿರ ರೂ. ನೀಡಲಾಗಿದೆ.

61 ಮಂದಿ ಸಂತ್ರಸ್ತರು
1 ಲಕ್ಷ ರೂ.ನಂತೆ ಮಿತ್ತಬಾಗಿಲು 25 ಮಂದಿ, ನಡಾ 1, ನಾವೂರು 2, ಲಾೖಲದ 1 ಮಂದಿ ಸಂತ್ರಸ್ತರಿಗೆ ಹಾಗೂ 25 ಸಾವಿರ ರೂ.ನಂತೆ ಇಂದಬೆಟ್ಟು 3, ಲಾೖಲ 1, ಮಲವಂತಿಗೆ 11, ಮಿತ್ತಬಾಗಿಲು 10, ನಡಾ 2, ನಾವೂರು 5 ಸಹಿತ ಒಟ್ಟು 61 ಮಂದಿ ಸಂತ್ರಸ್ತರಿಗೆ ಪರಿಹಾರಧನ 37 ಲಕ್ಷ ರೂ. ಖಾತೆಗೆ ಸಂದಾಯ ಮಾಡಲಾಗಿದೆ.

ಆಧಾರ್‌, ಪಡಿತರ ಚೀಟಿ ಸಮಸ್ಯೆ
ಸಂತ್ರಸ್ತರ ಹಣ ದುರುಪಯೋಗವಾಗ ದಂತೆ ನೇರ ಖಾತೆಗೆ ಸಂದಾಯವಾಗಲು ಬ್ಯಾಂಕ್‌ ಖಾತೆ, ಆಧಾರ್‌ ಲಿಂಕ್‌ ಮಾಡಲಾಗಿದೆ. 10 ಮಂದಿ ಸಂತ್ರಸ್ತರಲ್ಲಿ ಇನ್ನೂ ಆಧಾರ್‌, ಪಡಿತರ ಚೀಟಿ ಸಹಿತ ಸೂಕ್ತ ದಾಖಲೆಗಳಿಲ್ಲದಿರುವುದರಿಂದ ತಡವಾಗಿದೆ. ಶಾಸಕರ ಸೂಚನೆಯಂತೆ ತಹಶೀಲ್ದಾರ್‌ ಹಾಗೂ ಸಿಬಂದಿ ಬ್ಯಾಂಕ್‌ ಖಾತೆ, ಪಡಿತರ ಚೀಟಿ ಕೊಡಿಸಲು ಡೇಟಾ ಎಂಟ್ರಿ ತಡವಾಗಿದೆ. ಉಳಿದಂತೆ 257 ಮಂದಿ ಫಲಾನುಭವಿಗಳನ್ನು ಗುರುತಿಸಲಾ ಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಕೃಷಿ ಭೂಮಿ ಹಾನಿ
ನೆರೆ ಹಾವಳಿಯಿಂದ ತುತ್ತಾದ ಕೃಷಿ ಭೂಮಿ ಹಾನಿ ಕುರಿತಾಗಿ
ಈಗಾಗಲೇ ತಾಲೂಕು ಆಡಳಿತಕ್ಕೆ 860 ಅರ್ಜಿಗಳು ಬಂದಿವೆ. ಸುಮಾರು 270 ಹೆಕ್ಟೇರ್‌ ಕೃಷಿ ಭೂಮಿ ಪ್ರದೇಶ ಹಾನಿ ಅಂದಾಜಿಸಲಾಗಿದ್ದು, ಕೃಷಿ ಅಧಿಕಾರಿಗಳಿಂದ ಸಮೀಕ್ಷೆ ಕಾರ್ಯ ಸಾಗಿದೆ. ಆದರೆ ಸಮೀಕ್ಷೆಗೆ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು, ಹೆಚ್ಚಿನ ಸಿಬಂದಿ ನೇಮಿಸಿ ಶೀಘ್ರ ಕೃಷಿ ಹಾನಿ ಪರಿಹಾರ ವಿತರಣೆಯಾಗಬೇಕಿದೆ.

 ಅತೀ ಹೆಚ್ಚು ಮಂದಿ
ಪರಿಹಾರ ಬಿಡುಗಡೆಯಾದ ರಾಜ್ಯದ 119 ಮಂದಿ ಸಂತ್ರಸ್ತರ ಪೈಕಿ ತಾಲೂಕಿನ ಅತೀ ಹೆಚ್ಚು 61 ಮಂದಿಗೆ ಪರಿಹಾರ ಒದಗಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸಂಪೂರ್ಣ ಪರಿಹಾರ ವಿತರಿಸುವ ಕಾರ್ಯ ನಡೆಯಲಿದೆ.
– ಹರೀಶ್‌ ಪೂಂಜ
ಶಾಸಕರು

 ಪರಿಹಾರ ತಲುಪಿದೆ
ತಾಲೂಕಿನಲ್ಲಿ ಗುರುತಿಸಲಾಗಿರುವ 257 ಮಂದಿ ಸಂತ್ರಸ್ತರ ಪೈಕಿ 61 ಮಂದಿಗೆ ರಾಜ್ಯ ಸರಕಾರದ ಪರಿಹಾರ ನೇರ ಖಾತೆಗೆ ತಲುಪಿದೆ. ಮುಂದಿನ ಹಂತದಲ್ಲಿ ಉಳಿದ ಸಂತ್ರಸ್ತರು ಹಾಗೂ ಕೃಷಿ ಸಹಿತ ಮನೆ ಕಳೆದುಕೊಂಡವರಿಗೆ ಅವಶ್ಯ ನೆರವು
ತಲುಪುವ ವಿಶ್ವಾಸವಿದೆ.
 - ಗಣಪತಿ ಶಾಸ್ತ್ರೀ
ತಹಶೀಲ್ದಾರ್‌

-  ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.