ಜಿಲ್ಲೆಯ 49,631 ರೈತರಿಗೆ 49 ಕೋಟಿ ರೂ. ವಿತರಣೆ

Team Udayavani, Jun 20, 2019, 5:37 AM IST

ಕಡಬ: ಅಡಿಕೆ ಕೊಳೆ ರೋಗದ ಬಾಧೆಯಿಂದ ತೊಂದರೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ 49,631 ರೈತರಿಗೆ 49 ಕೋಟಿ ರೂ.ಗಳಿಗೂ ಮಿಕ್ಕಿ ಪರಿಹಾರಧನ ವಿತರಿಸಲಾಗಿದ್ದು, ಕಡಬ ತಾಲೂಕಿನ ವ್ಯಾಪ್ತಿಯಲ್ಲಿಯೇ 8,429 ಮಂದಿಗೆ 7.5 ಕೋಟಿ ರೂ. ವಿತರಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರೈತರ ಸಾಲ ಮನ್ನಾ ಮಾಡಿರುವ ಸರಕಾರ ಈಗಾಗಲೇ ಋಣ ಪತ್ರವನ್ನು ನೇರವಾಗಿ ಅವರ ವಿಳಾಸಕ್ಕೆ ಕಳುಹಿಸಿದೆ. ಸಾಲ ಮನ್ನಾ ವಿಚಾರದಲ್ಲಿ ಸಹಕಾರಿ ಸಂಘಗಳು ಹಾಗೂ ಬ್ಯಾಂಕುಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎನ್ನುವ ಕಾರಣ ಸರಕಾರ ನೇರವಾಗಿ ಋಣಪತ್ರ ನೀಡುತ್ತಿದೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮ ಹಾಗೂ ಕಡಬದಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮಿನಿ ವಿಧಾನಸೌಧಕ್ಕೆ 10 ಕೋ.ರೂ.

ನೂತನ ಕಡಬ ತಾಲೂಕಿನಲ್ಲಿ ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಸೇವೆ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಸರಕಾರವು 10 ಕೋಟಿ ರೂ. ಮಂಜೂರುಗೊಳಿಸಿದ್ದು, ಈಗಾಗಲೇ 2 ಕೋಟಿ ರೂ. ಬಿಡುಗಡೆಯಾಗಿದೆ. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾಮಗಾರಿಯನ್ನು ವಹಿಸಿಕೊಳ್ಳಲಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದ್ದು, ಒಂದು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಐವನ್‌ ಹೇಳಿದರು.

ಹೊಸ ತಾಲೂಕುಗಳಿಗೆ ಅಗತ್ಯ ಸಿಬಂದಿ ನೇಮಕ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಕಡಬದಲ್ಲಿ ಉಪ ನೋಂದಣಿ ಕಚೇರಿ ಹಾಗೂ ವಿವಿಧ ವಿಲಾಖೆಗಳ ತಾಲೂಕುಮಟ್ಟದ ಕಚೇರಿಗಳನ್ನು ಶೀಘ್ರ ತೆರೆಯಲಾಗುವುದು. ಅಕ್ರಮ ಸಕ್ರಮದಲ್ಲಿ ಕಡಬ ತಾಲೂಕಿನಲ್ಲಿ 13533 ಅರ್ಜಿ ಸಲ್ಲಿಕೆಯಾಗಿದೆ. 21748 ಎಕ್ರೆ ಭೂಮಿಯ ಹಕ್ಕುಪತ್ರ ವಿತರಣೆ ಮಾಡಲು ಹೋಬಳಿ ಮಟ್ಟದ ಅಕ್ರಮ ಸಕ್ರಮ ಸಮಿತಿ ರಚಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರಾಡ್ರಿಗಸ್‌, ಜಿ.ಪಂ. ಪಿ.ಪಿ. ವರ್ಗೀಸ್‌, ತಾ.ಪಂ. ಸದಸ್ಯರಾದ ಗಣೇಶ್‌ ಕೈಕುರೆ, ಕೆ.ಟಿ. ವಲ್ಸಮ್ಮ, ಶುಭದಾ ಎಸ್‌. ರೈ, ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಅಮೆರಿಕ ವಿಶ್ವದ ಶ್ರೀಮಂತ, ಬಲಿಷ್ಠ, ಭವ್ಯ ರಾಷ್ಟ್ರ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ. 24 ಮತ್ತು 25 ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ....

  • ಕುಂಬಳೆ: ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಹೊಸಗದ್ದೆ ಮನೆಯ ದೀಲಿಪ್‌ ಕುಮಾರ್‌ ವತ್ಸಲಾ ದಂಪತಿ ಪುತ್ರ ಹೃದಯ್‌ ಹುಟ್ಟಿನಿಂದಲೇ ತೀವ್ರತರವಾದ...

  • ಮಂಗಳೂರು/ಉಡುಪಿ: ರಾಜ್ಯಾದ್ಯಂತ ಎ. 26ರಂದು ನಡೆಯಲಿರುವ "ಸಪ್ತಪದಿ' ಸಾಮೂಹಿಕ ಸರಳ ವಿವಾಹ ಯೋಜನೆಯನ್ನು ಬಡವರಿಗಾಗಿ ರೂಪಿಸಿದ್ದರೂ ಶ್ರೀಮಂತರು ಕೂಡ ಇಲ್ಲಿ ಸರಳ ವಿವಾಹವಾಗುವ...

  • ಜಮ್ಮು: ಕರ್ನಾಟಕ ತಂಡ ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತಲ್ಲದೆ ಅನನುಭವಿ ತಂಡವೊಂದರ ವಿರುದ್ಧ ಹಿನ್ನಡೆ...

  • ಜಾಗತಿಕ ತಾಪಮಾನ ಏರಿಕೆ 2050ರ ವೇಳೆಗೆ ಭಾರತದ ಜಿಡಿಪಿ ಬೆಳವಣಿ ಗೆಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎಂದು ಮೆಕಿನ್ಸೆ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌...