Udayavni Special

ಕುಖ್ಯಾತ ದರೋಡೆ ತಂಡದ 6 ಮಂದಿ ಬಂಧನ

ಮೂಲ್ಕಿ ಪೊಲೀಸರ ಕಾರ್ಯಾಚರಣೆ

Team Udayavani, Aug 2, 2019, 9:03 AM IST

darode

ಮೂಲ್ಕಿ: ಎರಡು ವರ್ಷಗಳಿಂದ ಕೊಲೆ, ಸುಲಿಗೆ ಮುಂತಾದ ಹಲವು ಅಪರಾಧ ಕೃತ್ಯಗಳ ಮೂಲಕ ಠಾಣಾ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣ ಮೂಡಿಸಿ, ಪೊಲೀಸರಿಗೆ ಸವಾಲಾಗಿದ್ದ ಆರು ಮಂದಿಯ ತಂಡವನ್ನು ಬಂಧಿಸುವಲ್ಲಿ ಮೂಲ್ಕಿ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.

ಪಡುಬಿದ್ರಿ ಕಂಚಿನಡ್ಕದ ಮಹಮ್ಮದ್‌ ಅನೀಸ್‌ (24), ಬಜಪೆ ಜೋಕಟ್ಟೆಯ ಶೌಕತ್‌ ಅಲಿ (32), ಹಳೆಯಂಗಡಿ ಸಂತೆಕಟ್ಟೆಯ ಝಾಕೀರ್‌ ಹುಸೇನ್‌(20), ಮೂಲ್ಕಿ ಕೊಲಾಡು ಕೆ.ಎಸ್‌. ನಗರದ ಮಹಮ್ಮದ್‌ ಅನ್ವರ್‌ (26), ಹಳೆಯಂಗಡಿ ಇಂದಿರಾ ನಗರದ ಮೆಹರಾಜ್‌ (26) ಮತ್ತು ಪಡುಪಣಂಬೂರಿನ ಓರ್ವ ಬಾಲಕ ಬಂಧಿತರು.

ಜು. 30ರಂದು ಹೆದ್ದಾರಿ ತಪಾಸಣೆಯಲ್ಲಿದ್ದ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ಅವರಿಗೆ ಈ ಕೃತ್ಯದ ಸೂತ್ರಧಾರರಾದ ಮಹಮ್ಮದ್‌ ಅನೀಸ್‌ ಮತ್ತು ಶೌಕತ್‌ ಅಲಿ ಅವರು ಸಿಕ್ಕಿ ಬಿದ್ದಿದ್ದರು. ಅವರನ್ನು ವಿಚಾರಿಸಿದಾಗ ಇತರ ಆರೋಪಿಗಳ ಮಾಹಿತಿ ಸಿಕ್ಕಿತ್ತು.

ಬಂಧಿತರಿಂದ 3 ಲ.ರೂ. ಮೌಲ್ಯದ ಆಭರಣ, ದರೋಡೆಗೆ ಬಳಸಿದ್ದ ವಾಹನಗಳು, ಮೊಬೈಲ್‌ಗಳು ಮುಂತಾದವುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ.

ಮಂಗಳೂರು ಕಮಿಷನರ್‌ ಸಂದೀಪ್‌ ಪಾಟೀಲ್‌ ಅವರ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷಿ ಗಣೇಶ್‌ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಎ.ಸಿ.ಪಿ. ಶ್ರೀನಿವಾಸ ಗೌಡ ಅವರ ನೇತೃತ್ವದಲ್ಲಿ ಮೂಲ್ಕಿ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ಅವರ ನಾಯಕತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಐ ಶೀತಲ್‌ ಅಲಗೂರು, ಎಎಸ್‌ಐ ಚಂದ್ರಶೇಖರ್‌ ಮತ್ತು ಕೇಶವ, ಎಚ್‌.ಸಿ.ಗಳಾದ ಧರ್ಮೇಂದ್ರ, ಶಶಿಧರ, ಸುಧೀರ್‌, ವಾದಿರಾಜ, ಮೆಲ್ವಿನ್‌ ಪಿಂಟೋ, ಉಮೇಶ್‌ ಗೌಡ, ಚಂದ್ರಶೇಖರ್‌ ಮತ್ತು ಮಹೇಶ್‌ ಹಾಗೂ ಪಿ.ಸಿ.ಗಳಾದ ಸುರೇಶ್‌ ಮತ್ತು ರಾಜೇಶ್‌ ಪಾಲ್ಗೊಂಡಿದ್ದರು.

ತಂಡದ ಮೇಲಿನ ಪ್ರಮುಖ ಆರೋಪಗಳು
2017ರಲ್ಲಿ ಐಕಳದ ಮನೆಯೊಂದರಲ್ಲಿ ಒಂಟಿಯಾಗಿದ್ದ ವಸಂತಿ ಶೆಟ್ಟಿ (60) ಮನೆಗೆ ಕರೆಂಟ್‌ ಬಿಲ್‌ ಕೇಳುವ ನೆಪದಲ್ಲಿ ಬಂದು ಕುಡಿಯಲು ನೀರು ಕೇಳಿ ಅವರ ಕುತ್ತಿಗೆ ಸೀಳಿ ಕೊಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದು, ಹಳೆಯಂಗಡಿಯ ಪಕ್ಷಿಕೆರೆ ಬಳಿಯ ಕಾವೇರಿ (60) ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದು, ಕೊಲಾ°ಡು ಗುತ್ತು ಬಳಿಯ ಶಾರದಾ ಶೆಟ್ಟಿ (62) ಮನೆಗೂ ಕರೆಂಟ್‌ ಬಿಲ್‌ ನೆಪದಲ್ಲಿ ಬಂದು ನೀರು ಕೇಳಿ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದು ಸಹಿ ತ ಮೂಲ್ಕಿ, ಶಿರ್ವ, ಪಾಂಡೇಶ್ವರ, ಬಂದರು ಮುಂತಾದ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನದ ಆರೋಪಗಳು ಈ ತಂಡದ ಮೇಲಿವೆ.

ಇನ್ನಷ್ಟು ಪ್ರಕರಣ ಬಯಲಿಗೆ?
ಬಂಧಿತರಿಗೆ ಯಾವುದೇ ಉದ್ಯೋಗ ಇರದಿದ್ದರೂ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ತನಿಖೆ ಯಿಂದ ತಿಳಿದು ಬಂದಿದೆ. ಇವರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ನಿರೀ ಕ್ಷೆ ಪೊಲೀಸರಲ್ಲಿದೆ. ಇವರಿಗೆ ಸಹಕರಿಸುತ್ತಿರುವ ಆರೋಪದಲ್ಲಿ ಇನ್ನೂ ಕೆಲವರು ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ದೇಶದ ದುಸ್ಥಿತಿಗೆ ಕೇಂದ್ರದ ದುರಾಡಳಿತ ಕಾರಣ: ಡಿಕೆಶಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಸತೀಶ ಜಾರಕಿಹೊಳಿ ಹೇಳಿಕೆ ಶೇಖ್‌ ಮಹಮ್ಮದರ ಲೆಕ್ಕ: ಬೊಮ್ಮಾಯಿ

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಗ್ರಾಮೀಣ ಭಾಗದಲ್ಲೂ ಕ್ವಾರಂಟೈನ್‌ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಧಾರವಾಡ: 2 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: 2 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ

ದೇಶದಾದ್ಯಂತ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್ ಶಾಕ್ ನಿಂದ ಓರ್ವ ಸಾವು; ಮತ್ತೋರ್ವ ಗಂಭೀರ ಗಾಯ

ವಿದ್ಯುತ್ ಶಾಕ್ ನಿಂದ ಓರ್ವ ಸಾವು; ಮತ್ತೋರ್ವ ಗಂಭೀರ ಗಾಯ

ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಜೂನ್‌ 1ರಿಂದ ದೇವಸ್ಥಾನ ದರ್ಶನಕ್ಕೆ ಅವಕಾಶ : ಇನ್ನೂ ಕೈ ಸೇರದ ಸರಕಾರದ ಆದೇಶ!

ಜೂನ್‌ 1ರಿಂದ ದೇವಸ್ಥಾನ ದರ್ಶನಕ್ಕೆ ಅವಕಾಶ : ಇನ್ನೂ ಕೈ ಸೇರದ ಸರಕಾರದ ಆದೇಶ!

ಉಳ್ಳಾಲ: ಕ್ವಾರಂಟೈನ್ ಕೇಂದ್ರದಲ್ಲಿದ್ದವರ ಬಿಡುಗಡೆ

ಉಳ್ಳಾಲ: ಕ್ವಾರಂಟೈನ್ ಕೇಂದ್ರದಲ್ಲಿದ್ದವರ ಬಿಡುಗಡೆ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಎರಡು ವರ್ಷಗಳಲ್ಲಿ ಹತ್ತು ಲಕ್ಷ ಮನೆ ನಿರ್ಮಾಣ: ವಿ.ಸೋಮಣ್ಣ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಡ್ರಾಪ್ ಬಾಕ್ಸ್‌ : ಹೆಡ್‌ಫೋನ್‌ಗಿಂತ ಒಳ್ಳೆಯ ಗೆಳೆಯನಿಲ್ಲ

ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಮನೋರಂಜನೆ ಅಸ್ತ್ರವಾದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್‌ ಥ್ರಿಲ್ಲಿಂಗ್‌ ರಾಕ್ಷಸನ್‌

ನಾನು ನೋಡಿದಂತೆ ಸಿನೆಮಾ : ಸೈಕಲಾಜಿಕಲ್‌ ಥ್ರಿಲ್ಲಿಂಗ್‌ ರಾಕ್ಷಸನ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣ ಸರಿಯಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.