ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಅಧಿಕ ಜನಸಂದಣಿ

Team Udayavani, Nov 19, 2019, 6:30 PM IST

ಸುಬ್ರಹ್ಮಣ್ಯ ; ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಭಾರಿ ಜನಸಂದಣಿ ಕಂಡುಬಂದಿದೆ. ಕಾರ್ತಿಕ ಮಾಸ ಆಶ್ಲೇಷ ನಕ್ಷತ್ರದ ವಿಶೇಷ ದಿನವಾಗಿದ್ದು. ಅಂದು ಅಧಿಕ ಪ್ರಮಾಣದಲ್ಲಿ ಭಕ್ತರು ಕ್ಷೇತ್ರಕ್ಕಾಗಮಿಸಿ ಶ್ರೀದೇವರ ದರ್ಶನ ಪಡೆದು ವಿವಿಧ ಸೇವೆಗಳನ್ನು ಪೂರೈಸಿಕೊಂಡರು.

ದೇಗುಲದ ಪ್ರಮುಖ ಸೇವೆಗಳಾದ ಆಶ್ಲೇಷ ಸೇವೆ 1490. ನಾಗಪ್ರತಿಷ್ಠೆ 416 ಶೇಷಸೇವೆ 74 ಸೇವೆಗಳು ನಡೆದವು.ಉಳಿದಂತೆ ಸರ್ಪಸಂಸ್ಕಾರ ಸಹಿತ ವಿವಿಧ ಸೇವೆಗಳನ್ನು ನಾಡಿನ ವಿವಿದೆಡೆಯಿಂದ ಆಗಮಿಸಿದ ಭಕ್ತರು ನಡೆಸಿದರು.ದೇಗುಲದ ಒಳಾಂಗಣ.ಹೊರಾಂಗಣ.ಸೇವಾ ಕೌಂಟರುಗಳ ಮುಂದೆ ಭಕ್ತರ ಸರತಿ ಸಾಲುಗಳಿದ್ದವು.

ಸೋಮವಾರ ಸಂಜೆಯಿಂದಲೆ ಭಕ್ತರು ಕ್ಷೇತ್ರದ ಕಡೆಗೆ ಆಗಮಿಸಿ ದೇವಸ್ಥಾನದ ಹಾಗೂ ಖಾಸಗಿ ಕೊಠಡಿಗಳನ್ನು ಬಾಡಿಗೆಗೆ ಪಡೆದು ತಂಗಿದರು. ಅಧಿಕ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರಿಂದ ಕ್ಷೇತ್ರದಲ್ಲಿ ಭಕ್ತರಿಗೆ ತಂಗಲು ಕೊಠಡಿ ಸಮಸ್ಯೆಯು ಎದುರಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ