ಸಾಮಾಜಿಕ ಕಾರ್ಯಚಟುವಟಿಕೆಯಿಂದ ಹೆಸರುವಾಸಿಯಾದ ಸಂಘ

ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ

Team Udayavani, Feb 19, 2020, 12:32 AM IST

skin-40

ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದಲ್ಲಿ ಆರಂಭದಲ್ಲಿ 100 ಲೀ,. ಹಾಲು ಸಂಗ್ರಹವಾಗುತ್ತಿತ್ತು. ಇಂದು ಪಡುಮಾರ್ನಾಡು, ಮೂಡುಮಾರ್ನಾಡು ಗ್ರಾಮಗಳ ವ್ಯಾಪ್ತಿಯಲ್ಲಿ 800 ಲೀ. ಹಾಲು ಸಂಗ್ರಹವಾಗುತ್ತಿದೆ.

ಮೂಡುಬಿದಿರೆ: ಪಡು ಮಾರ್ನಾಡು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಬೆಳುವಾಯಿ, ಕಾಂತಾವರ ಈ ಆರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿಕೊಂಡು 1967ರಲ್ಲಿ ಕ್ಷೀರಸಾಗರ ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೆಸರಿನಿಂದ ಪ್ರಾರಂಭವಾಗಿ ಕುಲಶೇಖರದ ಸರಕಾರಿ ಡೈರಿಗೆ ಹಾಲನ್ನು ಪೂರೈಸಲಾಗುತ್ತಿತ್ತು.

ಮುಂದೆ 2000ನೇ ಇಸವಿ ಮಾರ್ಚ್‌ 31ರಂದು ಈ ಸಂಘ ವನ್ನು ಪಡುಮಾರ್ನಾಡು ಮತ್ತು ಮೂಡುಮಾರ್ನಾಡು ಗ್ರಾಮಗಳಿಗೆ ಸೀಮಿತಗೊಳಿಸಿ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಯೋಜಿಸಿಕೊಂಡು ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೊಸ ಹೆಸರಿನೊಂದಿಗೆ ನೋಂದಾ ಯಿಸಲ್ಪಟ್ಟಿತು.

ಆರು ಗ್ರಾಮಗಳಿದ್ದಾಗ 348 ಸದಸ್ಯರಿದ್ದರೆ, ಪ್ರಸ್ತುತ ಎರಡು ಗ್ರಾಮಗಳ 295 ಸದಸ್ಯರಿದ್ದಾರೆ. ಆರಂಭದಲ್ಲಿ 100 ಲೀ,. ಹಾಲು ಸಂಗ್ರಹವಾಗುತ್ತಿತ್ತು. (ಬೆಳುವಾಯಿ, ಕಾಂತಾವರ, ದರೆಗುಡ್ಡೆ, ಕೆಲ್ಲಪುತ್ತಿಗೆ ಈ ನಾಲ್ಕು ಗ್ರಾಮಗಳಲ್ಲಿ, ಹೈನುಗಾರರ ಕೋರಿಕೆಯಂತೆ ಆಯಾ ಗ್ರಾಮಗಳಲ್ಲೇ ಹೊಸದಾಗಿ ಸಹಕಾರ ಸಂಘಗಳ ಸ್ಥಾಪನೆಯಾಗಿದೆ.) ಸದ್ಯ ಪಡು ಮಾರ್ನಾಡು, ಮೂಡುಮಾರ್ನಾಡು ಗ್ರಾಮಗಳ ವ್ಯಾಪ್ತಿಯಲ್ಲಿ 800 ಲೀ. ಹಾಲು ಸಂಗ್ರಹ ವಾಗುತ್ತಿದೆ.

ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಸಂಘವು ಕಾರ್ಯನಿರ್ವಹಿಸುತ್ತಿದ್ದರೆ ಪ್ರಕೃತ ಪಡುಮಾರ್ನಾಡು ಗ್ರಾಮದ ಬನ್ನಡ್ಕದಲ್ಲಿ ಸರಕಾರದಿಂದ 4 ಸೆಂಟ್ಸ್‌ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ.

“ಸಂಘದ ಸದಸ್ಯರು, ನಿರ್ದೇಶಕರು, ಸಿಬಂದಿ ಹಾಗೂ ಒಕ್ಕೂಟದ ಸಹಕಾರದಿಂದ ಸಂಘವು ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಪರಿಸರದ ಗ್ರಾಮಗಳಿಂದ ವಾಹನ ಮೂಲಕ ಹಾಲು ಸಂಗ್ರಹಿಸುವ ವ್ಯವಸ್ಥೆ ಮಾಡುವ, ಅಮನೊಟ್ಟು ಶಾಖೆಯನ್ನು ತೆರೆಯುವ ಯೋಜನೆ ಇದೆ’.
– ಎಂ. ದಯಾನಂದ ಪೈ, ಅಧ್ಯಕ್ಷರು, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ನಿ.

ಸೌಕರ್ಯಗಳು
ಪರಿಶಿಷ್ಟ ಜಾತಿ/ಪಂಗಡದವರಿಗೆ ಉತ್ತಮ ತಳಿಯ ಕರುಗಳನ್ನು ಸರಕಾರದ ಸಹಾಯಧನದೊಂದಿಗೆ ಸಂಘದ ವತಿಯಿಂದ ಉಚಿತವಾಗಿ ನೀಡಲಾಗಿದೆ. ಕರು ಸಾಕಾಣಿಕೆಗೆ ಉಚಿತವಾಗಿ ಪಶುಆಹಾರ ಒದಗಿಸಲಾಗುತ್ತಿದೆ. ವಿಶೇಷ ತಜ್ಞ ಪಶುವೈದ್ಯರ ಸಹಕಾರದಿಂದ ದನಗಳ ಬಂಜೆತನ ನಿವಾರಣ ಶಿಬಿರ, ಕಾಲು ಬಾಯಿ ಜ್ವರ ನಿಯಂತ್ರಣ ಶಿಬಿರ, ಶುದ್ಧ ಹಾಲು ಉತ್ಪಾದನ ಶಿಬಿರ, ಹೈನುಗಾರಿಕಾ ಮಾಹಿತಿ ಶಿಬಿರ ಏರ್ಪಡಿಸಲಾಗುತ್ತಿದೆ. ಜಾನುವಾರುಗಳ ಜಂತು ಹುಳಕ್ಕೆ ಸಂಘದಿಂದ ಉಚಿತವಾಗಿ ಔಷಧಿ ನೀಡಲಾಗುತ್ತಿದೆ. ಒಕ್ಕೂಟ ಮತ್ತು ಸಂಘದ ಸಹಭಾಗಿತ್ವದಲ್ಲಿ ಜಾನುವಾರು ವಿಮೆ, ಸದಸ್ಯರಿಗೆ ಸಹಾಯಧನ ಹೀಗೆ ಸದಸ್ಯ ಹೈನುಗಾರರನ್ನು ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಊರಿನ ಧಾರ್ಮಿಕ, ಶೈಕ್ಷಣಿಕ ರಂಗಗಳಿಗೂ ಸಂಘದ ವತಿಯಿಂದ ಸಹಾಯಧನ ನೀಡಲಾಗುತ್ತಿದೆ.

ಅಧ್ಯಕ್ಷರು
ಅಧ್ಯಕ್ಷರಾಗಿ ಎಂ. ದಯಾನಂದ ಪೈ, ಎಸ್‌.ಎ. ಸಾಲಿನ್ಸ್‌ , ಸಿಲ್ವಿಯಾ ಜೇಮ್ಸ್‌, ಎಂ. ದಯಾನಂದ ಪೈ, ಕೆ. ನಾರಾಯಣ ಶೆಟ್ಟಿ ಕೇಂಪುಲು, ಎಂ. ಸುಂದರನಾಥ ಭಂಡಾರಿ, ಬಿ. ಶೇಷಗಿರಿ ಕಾಮತ್‌ ಸೇವೆ ಸಲ್ಲಿಸಿದ್ದು ಇದೀಗ ಮೂರನೇ ಬಾರಿಗೆ ಪಡುಮಾರ್ನಾಡು ಹಾ. ಉ. ಸಹಕಾರ ಸಂಘ ಅಧ್ಯಕ್ಷರಾಗಿ ಎಂ. ದಯಾನಂದ ಪೈ ಆರಿಸಲ್ಪಟ್ಟಿದ್ದಾರೆ.

ಕಾರ್ಯದರ್ಶಿಗಳು
ಕಾರ್ಯದರ್ಶಿಗಳಾಗಿ ರೋಸ್‌ ಸಿ. ಮಾಬೆನ್‌, ಶಾಂತಿ ಭಟ್‌, ಸತೀಶ ಭಟ್‌, ಉಮಾವತಿ, ವಸಂತಿ ಹಾಗೂ ಉಮಾವತಿ ಸೇವೆ ಸಲ್ಲಿಸುತ್ತಿದ್ದಾರೆ.

-  ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.