
ಪೊಳಲಿ: ನರ್ತೆ ಹೆಕ್ಕುವ ವೇಳೆ ಕೆಸರಿನಲ್ಲಿ ಹೂತು ಯುವಕ ಸಾವು
Team Udayavani, Jul 21, 2022, 2:25 PM IST

ಬಂಟ್ವಾಳ: ಪೊಳಲಿ ಸಮೀಪದ ಕಲ್ಕುಟದ ಗದ್ದೆಯೊಂದರಲ್ಲಿ ನರ್ತೆ( ಶಂಕುಹುಳು) ಹೆಕ್ಕುವ ವೇಳೆ ಯುವಕನೋರ್ವ ನೀರು ಹಾಗೂ ಕೆಸರಿನಲ್ಲಿ ಹೂತು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ದಾಮೋದರ್(31) ಮೃತಪಟ್ಟ ಯುವಕ.
ದಾಮೋದರ್ ಗದ್ದೆಯ ಬದುವಿನಲ್ಲಿ ಕೂತು ನರ್ತೆ ಹೆಕ್ಕುತ್ತಿದ್ದ ವೇಳೆ ಆಯತಪ್ಪಿ ಗದ್ದೆಗೆ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿನ ಜತೆಗೆ ಕೆಸರು ಕೂಡ ತುಂಬಿಕೊಂಡಿದ್ದು, ಈ ವೇಳೆ ಅವರ ಕುತ್ತಿಗೆವರೆಗೂ ಹೂತು ಹೋಗಿದ್ದಾರೆ. ಬಳಿಕ ಮೇಲಕ್ಕೆ ಬರಲು ಆಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮಂಗಳೂರು ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ವಿಡಿಯೋ ವೈರಲ್! ವಿಡಿಯೋ ವೈರಲ್ ಮಾಡಿದಾತ ವಶಕ್ಕೆ
ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ದಾಮೋದರ್ ಅವರು ತಂದೆ-ತಾಯಿ, ಪತ್ನಿ, ಸಣ್ಣ ಮಗು ಸೇರಿದಂತೆ ಕುಟುಂಬ ವರ್ಗವನ್ನು ಅಗಲಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
